ಸಹಕಾರ ಸಂಘಗಳು ರಾಜಕೀಯ ರಹಿತವಾಗಿರಬೇಕು: ತಮ್ಮಯ್ಯ

| Published : Dec 09 2024, 12:46 AM IST

ಸಹಕಾರ ಸಂಘಗಳು ರಾಜಕೀಯ ರಹಿತವಾಗಿರಬೇಕು: ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸಹಕಾರಿ ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ಅವು ರಾಜಕೀಯ ರಹಿತವಾಗಿರಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು.

ಚಿಕ್ಕಮಗಳೂರು ಜಿಲ್ಲಾ ಎಂಜಿನಿಯರ್ಸ್ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಹಕಾರಿ ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ಅವು ರಾಜಕೀಯ ರಹಿತವಾಗಿರಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು.ನಗರದ ಸುಗ್ಗಿಕಲ್‌ ರಸ್ತೆಯಲ್ಲಿ ಎಂಜಿನಿಯರ್ಸ್ ಸ್ಥಾಪಿಸಿರುವ ಚಿಕ್ಕಮಗಳೂರು ಜಿಲ್ಲಾ ಎಂಜಿನಿಯರ್ಸ್ ಸೌಹಾರ್ದ ಸಹಕಾರಿ ಸಂಘವನ್ನು ಭಾನುವಾರ ಸಾರ್ವಜನಿಕ ಸೇವೆಗೆ ಸಮರ್ಪಿಸಿ ಮಾತನಾಡಿದರು. ಯಾವುದೇ ಸಹಕಾರಿ ಸಂಘ ಸಂಸ್ಥೆಗಳು ಉಳಿದು ಬೆಳೆಯಬೇಕಾದರೆ ಅಲ್ಲಿ ಪರಸ್ಪರ ಸಹಕಾರ, ಅನ್ಯೋನ್ಯತೆ, ವಿಶ್ವಾಸ, ನಂಬಿಕೆ ಇರಬೇಕು. ಆ ಜಾಗದಲ್ಲಿ ರಾಜ ಕಾರಣ ನುಸುಳಿದರೆ ಅಭಿವೃದ್ಧಿ ಮೊಟಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ಸಹಕಾರಿ ಸಂಘಗಳಲ್ಲಿ ಒಂದೇ ಆಡಳಿತ ಮಂಡಳಿ ತುಂಬಾ ವರ್ಷಗಳ ಕಾಲ ಮುಂದುವರಿಯಬೇಕು. ಹಾಗಾದಾಗ ಮಾತ್ರ ಗ್ರಾಹಕರು ಆ ಮಂಡಳಿ ಮೇಲೆ ವಿಶ್ವಾಸ ಮತ್ತು ನಂಬಿಕೆ ಇಟ್ಟು ವ್ಯವಹಾರ ಮಾಡುತ್ತಾರೆ. ಆಗ ಆ ಸಂಸ್ಥೆ ಬೆಳೆಯುತ್ತದೆ ಎಂದು ತಿಳಿಸಿದರು.ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಸಹಕಾರಿ ಸಂಘ ಸಂಸ್ಥೆಗಳು ವಿಶ್ವಾಸ, ನಂಬಿಕೆ ಮತ್ತು ಆರ್ಥಿಕ ಶಿಸ್ತಿನ ಮೇಲೆ ನಿಂತಿವೆ. ಅವುಗಳನ್ನು ಉಳಿಸಿಕೊಂಡರೆ ಮಾತ್ರ ಸಂಘ ಬೆಳೆಯುತ್ತದೆ ಎಂದು ಹೇಳಿದರು.ಆಡಳಿತ ಮಂಡಳಿ ಸಭೆ ಕೊಠಡಿ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್‌.ಎಲ್. ಭೋಜೇಗೌಡ ಸಂಘ ಸಂಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ. ಆದರೆ, ಅವುಗಳನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಅವುಗಳನ್ನು ಉಳಿಸಿ ಕೊಳ್ಳಬೇಕಾದರೆ ಇಚ್ಛಾಶಕ್ತಿ, ನಂಬಿಕೆ, ವಿಶ್ವಾಸ, ಸೌಹಾರ್ದತೆ ಇರಬೇಕು ಎಂದು ಸಲಹೆ ಮಾಡಿದರು.ಕರ್ನಾಟಕ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಮನೋಹರ್ ಮಸ್ಕಿ ಮಾತನಾಡಿ, ಎಂಜಿನಿಯರ್ಸ್ ಸಹಕಾರಿ ಸಂಘ ಸ್ಥಾಪನೆ ಯಾಗುತ್ತಿರುವುದು ರಾಜ್ಯದಲ್ಲೇ ಮೊದಲಾಗಿದ್ದು. ಇಂತಹ ಸಂಸ್ಥೆ ಉಳಿದು ಬೆಳೆಯಬೇಕಾದರೆ ಯಾವ ಹಂತದಲ್ಲೂ ಅವ್ಯವಹಾರ ನಡೆಯದ ರೀತಿ ಎಚ್ಚರಿಕೆ ವಹಿಸಬೇಕು ಎಂದರು.ಸಂಘದ ಉಪಾಧ್ಯಕ್ಷ ಎಂ.ಎ.ನಾಗೇಂದ್ರ ಮಾತನಾಡಿ, ಸಿವಿಲ್, ಎಲೆಕ್ಟ್ರಿಕಲ್, ಸಾಫ್ಟ್ ವೇರ್ ಸೇರಿದಂತೆ ಎಲ್ಲಾ ಎಂಜಿನಿಯರ್‌ ಗಳನ್ನೂ ಒಗ್ಗೂಡಿಸಿಕೊಂಡು ಈ ಸಂಘ ಸ್ಥಾಪಿಸಲಾಗಿದೆ. ಉದ್ಘಾಟನೆಗೆ ಮುನ್ನವೇ ಒಂದು ಕೋಟಿ ಠೇವಣಿ ಸಂಗ್ರಹವಾಗಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಾಪಕ ಅಧ್ಯಕ್ಷ ಬಿ.ಎಸ್. ಹರೀಶ್, ಸಂಸ್ಥೆ ಯೋಜನೆಗಳನ್ನು ವಿವರಿಸಿ, ಅವುಗಳ ಯಶಸ್ಸಿಗೆ ಸಂಘದ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಅಧ್ಯಕ್ಷ ಜಿ. ನಂಜನಗೌಡ, ಸಾಹಿತಿ ಸ.ನಾ. ರಮೇಶ್‌, ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಸಂಘದ ನಿರ್ದೇಶಕರಾದ ಬಿ.ಕೆ.ಗುರುಮೂರ್ತಿ, ಬಿ.ಸಿ. ಗಂಗಾಧರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಕೆ.ವಾಸುದೇವ್ ಹಾಗೂ ಎಂಜಿನಿಯರ್‌ ಶಿಲ್ಪ ಉಪಸ್ಥಿತರಿದ್ದರು. 8 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಎಂಜಿನಿಯರ್ಸ್ ಸೌಹಾರ್ದ ಸಹಕಾರಿ ಸಂಘವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಭಾನುವಾರ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯರಾದ ಎಸ್‌.ಎಲ್‌. ಭೋಜೇಗೌಡ, ಸಿ.ಟಿ. ರವಿ, ಮನೋಹರ್‌ ಮಸ್ಕಿ, ನಾಗೇಂದ್ರ ಇದ್ದರು.