ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳು, ತಾಲೂಕು ಸೊಸೈಟಿಗಳು, ಹಾಲಿನ ಡೇರಿಗಳು, ಪಿಎಲ್ಡಿ ಮತ್ತು ಡಿಸಿಸಿ ಬ್ಯಾಂಕುಗಳು ರೈತರ ಜೀವನಾಡಿ ಸಂಸ್ಥೆಗಳಾಗಿದ್ದು ಅವುಗಳನ್ನು ಕಾಪಾಡಿಕೊಂಡು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ತಾಲೂಕಿನ ವೇಮಗಲ್ ಹೋಬಳಿಯ ವೀರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ರೈತರು ಇದ್ದರೆ ಅಷ್ಟೇ ಜೀವನ ಅವರು ಏನಾದರೂ ಆಹಾರ ಬೆಳೆಯದೆ ಹೋದರೆ ಊಟಕ್ಕೂ ತೊಂದರೆಯಾಗುವ ಸಂದರ್ಭ ಬರುತ್ತದೆ ಎಂದರು.ಯಶಸ್ವಿನಿ ಕಾರ್ಡ್ ಮಾಡಿಸಿ
ಹಾಲು ಉತ್ಪಾದಕರು ಕಡ್ಡಾಯವಾಗಿ ಯಶಸ್ವಿನಿ ಯೋಜನೆಯ ಕಾರ್ಡ್ ಮಾಡಿಸಬೇಕು, ಡೇರಿಯಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಮಾಡಬಾರದು, ಡೇರಿ ವಿಚಾರದಲ್ಲಿ ಸರ್ಕಾರದಿಂದ ಮತ್ತು ಒಕ್ಕೂಟದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೊರೈಸಿ ಸಂಘ ಲಾಭ ಪಡೆಯುವಂತೆ ಮಾಡಿಕೊಳ್ಳಿ ಎಂದರು.ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ರೈತರು ಬೆಳೆದ ಯಾವುದೇ ಬೆಳೆಗಳಿಗೂ ನಿಗದಿತ ಬೆಲೆ ಇಲ್ಲ, ಆದರೆ ಹಾಲು ಉತ್ಪಾದಕರಿಗೆ ಮಾತ್ರ ನಿಗದಿತ ಬೆಲೆ ಇದೆ, ೧೫ ದಿನಗಳಿಗೆ ಒಮ್ಮೆ ಉತ್ಪಾದಕರಿಗೆ ಹಣ ಕೈಸೇರುತ್ತೆ, ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ರೈತರ ಆದಾಯದ ಮೂಲವಾಗಿದೆ. ಹೈನುಗಾರಿಕೆಗೆ ಸರ್ಕಾರದಿಂದ ಹೆಚ್ಚಿನ ನೆರವು ಸಿಗುತ್ತದೆ ಎಂದರು.ಡೇರಿಗಳು ರೈತರ ಸಂಸ್ಥೆಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್ ಮಾತನಾಡಿ, ಹಾಲು ಉತ್ಪಾದಕರ ಸಂಘಗಳು ರೈತರ ಸಂಸ್ಥೆಗಳಾಗಿವೆ, ಕೊರೊನಾ ಅಂತಹ ಸಂಧರ್ಭದಲ್ಲಿ ಸಹ ರೈತರನ್ನು ಕೈಹಿಡಿದಿದ್ದು ಹಾಲು ಉತ್ಪಾದನೆ ಮಾತ್ರ ಹಾಲಿಗೆ ಯಾರು ಕೂಡ ನೀರು ಹಾಕಬೇಡಿ ಕಲಬೆರಕೆ ಹಾಲಿಗೆ ಬೆಲೆ ಇಲ್ಲ ಎಂದರು.ವೀರೇನಹಳ್ಳಿ ಡೇರಿ ಅಧ್ಯಕ್ಷ ಎ.ಕೃಷ್ಣಪ್ಪ, ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶ್, ಅಹಮದ್ ಅಸ್ವಕ್ ಮತ್ತಿತರರು ಇದ್ದರು.