ಸೂಲಿಬೆಲೆ: ವಿವಿಧೋದ್ದೇಶ ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಯಶಸ್ವಿನಿ ವಿಮೆ ಯೋಜನೆ ಜಾರಿಯಾಗಿದ್ದು ಸದಸ್ಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ.ವಸಂತಕುಮಾರ್ ಹೇಳಿದರು.

ಬ್ಯಾಂಕಿನ ಸಭಾಂಗಣದಲ್ಲಿ ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಜನ್ಮದಿನದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸಂಘವು ೬೦೪೬ ಷೇರುದಾರರನ್ನು ಹೊಂದಿದ್ದು ಸಂಘದ ಅಧ್ಯಕ್ಷರಾದ ಬಿ.ವಿ.ಸತೀಶಗೌಡರ ಕಾಳಜಿಯಿಂದ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು ಕಳೆದ ಸಾಲಿನಲ್ಲಿ ೧ ಕೋಟಿ ಆಧಾಯ ಗಳಿಸಿತ್ತು, ಪಡಿತರ ವಿತರಣೆ, ಗೊಬ್ಬರ ವಿತರಣೆ ಮೂಲಕ ರೈತಾಪಿ ವರ್ಗಕ್ಕೆ ಹೆಚ್ಚಿನ ಸಹಕಾರ ನೀಡಿದ್ದು ಶಾಸಕ ಶರತ್ ಬಚ್ಚೇಗೌಡರ ಸಹಕಾರವು ದೊರತಿದೆ ಎಂದು ಹೇಳಿದರು.

ಯಶಸ್ವಿ ಯೋಜನೆಯ ನೋಂದಣಿಗೆ ಮಾರ್ಚ್ ೩೧ ಅವಕಾಶವಿದ್ದು ಪರಿಶಿಷ್ಟ ಜಾತಿ ಮತ್ತುಪಂಗಡದವರಿಗೆ ಉಚಿತವಾಗಿರುತ್ತದೆ. ಸಾಮಾನ್ಯ ವರ್ಗಕ್ಕೆ ೫೦೦ ರೂಗಳಾಗಿದ್ದು ಷೇರುದಾರರು ಶೀಘ್ರವಾಗಿ ವಿಮೆ ಮಾಡಿಸಿಕೊಳ್ಳಲು ಕೋರಿದ್ದಾರೆ.

ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಚೌಡೇಗೌಡ ಮಾತನಾಡಿ, ಬ್ಯಾಂಕಿನ ಸಿಇಒ ವಸಂತಕುಮಾರ್ ಸಾಮಾಜಿಕ ಕಾಳಜಿಯ ಮನೋಭಾವದವರಾಗಿದ್ದು ಅವರು ಸಂಘಸಂಸ್ಥೆಗಳಿಗೂ ಹೆಚ್ಚಿನ ಸಹಕಾರ ನೀಡುತ್ತಿದ್ದು ಜೇನುಗೂಡು ಟ್ರಸ್ಟಿನ ಏಳಿಗೆಗೆ ಸಹ ಅವರ ಸಹಕಾರವಿರುವುದು ಶ್ಲಾಘನೀಯ ವಿಚಾರ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಯ ನಿರ್ದೇಶಕ ಸೈಯದ್ ಮಹಬೂಬ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್, ಗ್ರಾಪಂ.ಸದಸ್ಯ ಜಿಯಾವುಲ್ಲಾ, ಆನಂದ್,ಜೇನುಗೂಡು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ನಿರ್ದೇಶಕ ಅತ್ತಿಬೆಲೆ ಮಂಜುನಾಥ್, ನಯಾಜ್ ಖಾನ್, ರವಿಕುಮಾರ್ ಇತರರಿದ್ದರು.