- ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ
ಕನ್ನಡಪ್ರಭ ವಾರ್ತೆ, ಕಡೂರುಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪ್ರವೀಣ್‌ಎಚ್. ಟಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ 720ನೇ ರಾಂಕ್ ಪಡೆವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಡೂರು ತಾಲೂಕಿನ ಹುಲಿಕೆರೆ ಗ್ರಾಮದ ನಿವೃತ್ತ ಹೈಸ್ಕೂಲು ಮುಖ್ಯ ಶಿಕ್ಷಕ ಎಚ್.ಕೆ. ತಮ್ಮಯ್ಯ ಮತ್ತು ನೀಲಮ್ಮ ದಂಪತಿ ಪುತ್ರರಾದ ಪ್ರವೀಣ್ ಸಾಧನೆ ಮೂಲಕ ಜಿಲ್ಲೆಯ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.ತಮ್ಮಸಾಧನೆ ಕುರಿತು ಕನ್ನಡಪ್ರಭದೊಂದಿಗೆ ಸಂತಸ ಹಂಚಿಕೊಂಡ ಪ್ರವೀಣ್, ಇದು ನನ್ನ 4ನೇ ಮೈನ್ಸ್ 3ನೇ ಇಂಟರ್ ವ್ಯೂ ಆಗಿದೆ. ತಾವು ಈಗಾಗಲೇ ಕೋರಮಂಗಲದಲ್ಲಿ ಕಮರ್ಶಿಯಲ್ ಟ್ಯಾಕ್ಸ್ ಇನ್ಸ್ ಫೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಾಧನೆ ಕ್ರೆಡಿಟ್ ತಂದೆ-ತಾಯಿಗೆ ಸಲ್ಲಬೇಕು.
ಪ್ರಾಥಮಿಕ ಶಿಕ್ಷಣವನ್ನು ಹುಲಿಕೆರೆ ಸರಕಾರಿ ಶಾಲೆಯಲ್ಲಿ ಕಲಿತೆ. ಅದಾದ ಮೇಲೆ ಒಳ್ಳೆಯ ಶಿಕ್ಷಣ ಕೊಡಿಸಲು ನಮ್ಮ ತಂದೆ ನಮ್ಮ ಕುಟುಂಬವನ್ನು ಚಿಕ್ಕಮಗಳೂರಿಗೆ ಸ್ಥಳಾಂತರಿದ್ದರಿಂದ ನಾನು ಸರ್ಕಾರಿ ವಿಶ್ವವಿದ್ಯಾಲಯ ಬಾಯ್ಸ್ ಶಾಲೆಯಲ್ಲಿ ಹೈಸ್ಕೂಲು, ಜೂನಿಯರ್ ಕಾಲೇಜಿನಲ್ಲಿ ಪಿಯುಸಿ (ವಿಜ್ಞಾನ), ಎಐಟಿ ಕಾಲೇಜಿನಲ್ಲಿ 2018ರಲ್ಲಿ ಮೆಕಾನಿಕಲ್ ಎಂಜಿನಿಯರ್ ಮುಗಿಸಿದೆ. ಅದಾದ ನಂತರ ಕೋರಮಂಗಲದಲ್ಲಿ ನಾನು ವಾಣಿಜ್ಯ ತೆರಿಗೆ ಅಧಿಕಾರಿ ಆಗಿ ಕೇವಲ 3 ತಿಂಗಳ ಹಿಂದೆ ಸೇವೆಗೆ ಸೇರಿದ್ದೇನೆ ಎಂದು ತಮ್ಮ ಶಿಕ್ಷಣದ ಬಗ್ಗೆ ಹೇಳಿದರು.
ಸತತ ಪರಿಶ್ರಮದಿಂದ ಗುರಿ ಸಾಧನೆಗೆ ಅಡ್ಡಿ ಆತಂಕಗಳು ಬರುವುದು ಸಹಜ. ಅದನ್ನು ಮೀರಿ ಪ್ರಯತ್ನಿಸಿದರೆ ಸಾಧನೆ ನಿಮ್ಮ ಹತ್ತಿರ ಬರುತ್ತದೆ. ನನ್ನ ತಂದೆ ಕನ್ನಡ ಶಿಕ್ಷಕರು, ನನ್ನ ತಾತ ಕೂಡ ಶಿಕ್ಷಕರಾಗಿದ್ದರು. ಬಡತನ ಮತ್ತು ಶಿಕ್ಷಣದ ಕೊರತೆ ನೀಗಿಸುವ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರುವ ಸದುದ್ದೇಶದಿಂದ ತಾವು ನಾಗರಿಕ ಸೇವಾ ಪರೀಕ್ಷೆ ಬರೆದಿದ್ದೇನೆ ಎಂದರು.
ಸತತ ಪರಿಶ್ರಮದ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಹಿರಿಮೆ ಹೆಚ್ಚಿಸಿರುವ ಪ್ರವೀಣ್ ರವರ ಸಾಧನೆಗೆ ಜಿಲ್ಲೆಯ ವಿವಿಧ ಗಣ್ಯರು ಮತ್ತು ಸಂಘ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.-- ಹೇಳಿಕೆ---
ಸಾಮಾಜಿಕ ಜಾಲತಾಣದಿಂದ ದೂರವಿರಿಯುವಕರು ಈಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾದಿಂದ ದೂರವಿದ್ದು, ಹೆಚ್ಚು ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿದರೆ ಏಕಾಗ್ರತೆ ಸಾಧಿಸಬಹುದು. ಕಲೆ, ಸಾಹಿತ್ಯ ಮತ್ತು ಕ್ರೀಡೆಗೆ ಒತ್ತು ಕೊಟ್ಟರೆ ಪರಿಪೂರ್ಣ ವ್ಯಕ್ತಿ ಆಗಲು ಸಾಧ್ಯವಿದೆ.
7ಕೆಕೆಡಿಯು1. ಎಚ್.ಟಿ.ಪ್ರವೀಣ್.