ಸಾರಾಂಶ
ವೃದ್ದಿ ಸೌಹಾರ್ದ ಸಹಕಾರ ಸಂಘದ ಕಚೇರಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಉದಯಿಸಿರುವ ಸೌಹಾರ್ದ ಸಹಕಾರ ಸಂಘ ಜನಸಾಮಾನ್ಯರೊಂದಿಗೆ ಉತ್ತಮ ವಹಿವಾಟು ನಡೆಸುವ ಮೂಲಕ ಆರ್ಥಿಕವಾಗಿ ವೃದ್ದಿಯಾಗಲಿ ಎಂದು ಪಲ್ಲವಿ ಸಿ.ಟಿ.ರವಿ ಹೇಳಿದರು.ನಗರದ ಎಂಜಿರಸ್ತೆ ಸಮೀಪದ ಸೂರಪ್ಪ ಬೀದಿಯಲ್ಲಿ ನೂತನವಾಗಿ ಸ್ಥಾಪಿತವಾದ ವೃದ್ಧಿ ಸೌಹಾರ್ದ ಸಹಕಾರ ಸಂಘದ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.ಸಹಕಾರ ಸಂಘಗಳು ಸರ್ಕಾರದ ಮೂಲ ಧ್ಯೇಯೋದ್ದೇಶದಿಂದ ನಡೆದುಕೊಳ್ಳುವುದು ಆಡಳಿತ ಮಂಡಳಿ ಕರ್ತವ್ಯ. ಜನತೆ ಯೊಂದಿಗೆ ಒಡನಾಟ ಹೊಂದಬೇಕು. ಸಿಬ್ಬಂದಿ ಗ್ರಾಹಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಲ್ಲಿ ಸಮಾಜದಲ್ಲಿ ಸಂಘ ಹೆಸರು ಸಂಪಾದಿಸಲು ಸಾಧ್ಯ ಎಂದರು.ಬಡವರ ಕಲ್ಯಾಣದ ದೃಷ್ಟಿಯಿಂದ ಉದಯಿಸಿರುವ ಸೌಹಾರ್ದ ಸಂಘ ನಿಷ್ಟೆ, ಪ್ರಾಮಾಣಿಕತೆಯಿಂದ ವಹಿವಾಟು ನಡೆಸ ಬೇಕು. ನಂಬಿಕೆ, ವಿಶ್ವಾಸ ಗಳಿಸುವುದು ಸುಲಭದ ಮಾತಲ್ಲ. ಹೀಗಾಗಿ ಒಮ್ಮೆ ನಂಬಿಕೆ ಉಳಿಸಿಕೊಂಡಲ್ಲಿ ಸೌಹಾರ್ದ ಸಂಘ ಬೆಳವಣಿಗೆಯತ್ತ ಸಾಗಲಿದೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಮಾತನಾಡಿ, ಸೌಹಾರ್ದ ಸಂಘದ ಆಡಳಿತ ಮಂಡಳಿ ಬಹುತೇಕ ಯುವ ಸಮೂಹದ ತಂಡವಾಗಿರುವ ಹಿನ್ನೆಲೆಯಲ್ಲಿ ಯಶಸ್ವಿಯಾಗಿ ನಡೆದುಕೊಂಡು ಸಾಗಲಿ. ಮುಖ್ಯವಾಗಿ ಸಿಇಒ ಜವಾಬ್ದಾರಿ ಸಂಘಕ್ಕೆ ಅನಿವಾರ್ಯವಾಗಿದ್ದು ಆ ನಿಟ್ಟಿನಲ್ಲಿ ಕ್ರಿಯಾಶೀಲ ಸಿಇಒ ಸಿಕ್ಕಿರುವುದರಿಂದ ಅತ್ಯುತ್ತಮ ಬೆಳವಣಿಗೆಯಾಗಲಿ ಎಂದು ಆಶಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಮಾತನಾಡಿ, ಜನತೆಯ ಅನುಕೂಲತೆ ದೃಷ್ಟಿಯಿಂದ ನಗರದಲ್ಲಿ ಸಹಕಾರ ಸಂಘ ಸ್ಥಾಪಿಸಿದ್ದಾರೆ. ಗ್ರಾಹಕರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಸಂಸ್ಥೆಯನ್ನು ಮುನ್ನಡೆಸಬೇಕು. ಪ್ರಸ್ತುತ ಸಂಘದಲ್ಲಿ ನಿಗಧಿ ಪಡಿಸಿರುವ ಬಡ್ಡಿದರ ಮೊದಲ ವರ್ಷದ ಕೊಡುಗೆಯಾಗಬೇಕು. ಜೊತೆಗೆ ಇತರೆ ಬ್ಯಾಂಕ್‌ಗಿಂತ ಕಡಿಮೆ ದರದಲ್ಲಿ ಬಡ್ಡಿ ನಿಗಧಿ ಗೊಳಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸಂಘಕ್ಕೆ ಸದಸ್ಯರಾಗಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೃದ್ಧಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸಿ.ಟಿ.ಜಯವರ್ಧನ್ ಮಾತನಾಡಿ, ಪ್ರಸ್ತುತ ಸಂಘದಲ್ಲ್ಲಿ ಚಿನ್ನ, ವಾಹನ, ಆಸ್ತಿ ಹಾಗೂ ವೈಯಕ್ತಿಕ ಸಾಲವನ್ನು ವಿತರಿಸುವ ಗುರಿ ಹೊಂದಲಾಗಿದೆ. ಆದರೆ, ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ದಾಖಲಾತಿಗಳು ಬಹಳಷ್ಟಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ರಾಜ್ಯ ಎಸ್ಸಿ ಮೋ ರ್ಚಾ ಕಾರ್ಯದರ್ಶಿ ಸೀತಾ ರಾಮಭರಣ್ಯ, ನಗರಾಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ತಾಪಂ ಮಾಜಿ ಅಧ್ಯಕ್ಷ ನೆಟ್ಟಕೆರೆಹಳ್ಳಿ ಜಯಣ್ಣ, ಮುಖಂಡರಾದ ಎಚ್.ಕೆ.ಕೇಶವಮೂರ್ತಿ, ಗೌತಮ್, ಕೆ.ಪಿ.ಮಧು, ಭೈರಣಿ ವೈನ್ಸ್ ಮಾಲೀಕ ತಿರುಪಾಲಯ್ಯ, ಸಂಘದ ಸಿಇಒ ಮಂಜುನಾಥ್ ಉಪಸ್ಥಿತರಿದ್ದರು.ಆಡಳಿತ ಮಂಡಳಿ: ಸಿ.ಟಿ.ಜಯವರ್ಧನ್ (ಅಧ್ಯಕ್ಷ), ಸಿ.ಆರ್.ಮಹೇಶ್ (ಉಪಾಧ್ಯಕ್ಷ), ಅಣ್ಣಪ್ಪ ಎಂ.ಕುಡಲ್ಕರ್, ಉದಯ ಶಂಕರ್ ಭಟ್, ಮನೀಶ್ ಜೈನ್, ಪವನ್‌ಕುಮಾರ್, ಎಚ್.ಎಲ್.ಪ್ರಶಾಂತ್‌ಕುಮಾರ್, ಕೆ.ಆರ್. ಚಂದನ್, ವೆಂಕಟೇಶ್ ಎ.ಶೇಟ್, ಅರುಣ್ ಭಾರಧ್ವಾಜ್, ಪಿ.ಪ್ರಜ್ಞಾ ಗಣಪತಿ, ಧನ್ಯ ಎಚ್.ಗೌಡ (ನಿರ್ದೇಶಕರು).
29 ಕೆಸಿಕೆಎಂ 1ಚಿಕ್ಕಮಗಳೂರಿನ ಸೂರಪ್ಪ ಬೀದಿಯಲ್ಲಿ ನೂತನವಾಗಿ ಸ್ಥಾಪಿತವಾದ ವೃದ್ಧಿ ಸೌಹಾರ್ದ ಸಹಕಾರ ಸಂಘದ ಕಚೇರಿಯನ್ನು ಪಲ್ಲವಿ ಸಿ.ಟಿ. ರವಿ ಗುರುವಾರ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಸಂಘದ ಅಧ್ಯಕ್ಷ ಜಯವರ್ಧನ್ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))