ಕನ್ನಡಪ್ರಭ ವಾರ್ತೆ ಬೆಳಗಾವಿ
ಗ್ರಾಮೀಣ ಪ್ರದೇಶಗಳ ಆರ್ಥಿಕತೆಗೆ ಪ್ರಾಥಮಿಕ ಸಹಕಾರ ಸಂಘಗಳೇ ಬೆನ್ನೆಲುಬಾಗಿದ್ದು, ಕಳೆದ 75 ವರ್ಷಗಳಿಂದ ಈ ಸಂಸ್ಥೆಯ ಸೇವೆ ಅನನ್ಯ. ಕಳೆದ 25 ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಗೀತಾ ದೇಸಾಯಿ ಅವರ ಸೇವೆಯೂ ಶ್ಲಾಘನೀಯ. ಪುರುಷ ಪ್ರಧಾನ ಸಮಾಜದಲ್ಲೂ ಮಹಿಳೆಯ ಸಾಧನೆಗೆ ಇದು ಸಾಕ್ಷಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮೆಚ್ಚುಗೆ ವ್ಯಕ್ತಪಡಿಸಿದರು.ಮುರಗೋಡಿನ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಶ್ರೀಮಂತ ಮಲ್ಲಿಕಾರ್ಜುನ(ಅಣ್ಣಾಸಾಹೇಬ), ವೀರಭದ್ರಪ್ಪ ದೇಸಾಯಿ ಅವರ ಕಂಚಿನ ಪ್ರತಿಮೆಯ ಅನಾವರಣ ಹಾಗೂ ಶ್ರೀಮಂತ ಗೀತಾ ದೇಸಾಯಿ ಅವರ 25 ವರ್ಷಗಳ ಸುದೀರ್ಘ ಸೇವೆಯ ಬೆಳ್ಳಿಹಬ್ಬದ ಕಾರ್ಯಕ್ರಮ ಸಹ ನಡೆಯಿತು.
ಕಾರ್ಯಕ್ರಮದಲ್ಲಿ ಮುರಗೋಡದ ದುರದುಂಡೇಶ್ವರ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಶಿವ ಚಿದಂಬರೇಶ್ವರ ಮಠದ ಶ್ರೀ ದಿವಾಕರ ದೀಕ್ಷಿತ್ ಸ್ವಾಮೀಜಿ, ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಗೀತಾ ದೇಸಾಯಿ, ಕಾರ್ತಿಕ ಪಾಟೀಲ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಹಾಂತೇಶ್ ಮತ್ತಿಕೊಪ್ಪ, ನಾಗರಾಜ ದೇಸಾಯಿ, ಅಜಿತ್ ದೇಸಾಯಿ, ವಿನಯಕುಮಾರ ದೇಸಾಯಿ, ಮಹಾಂತೇಶ್ ದೊಡ್ಡಗೌಡರ್, ವಿರೂಪಾಕ್ಷ ಮಾಮನಿ, ಮಹಾಂತೇಶ್ ಕಳ್ಳಿಬಡ್ಡಿ, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.-------
ಬಾಕ್ಸ್‌ಮಹಾಂತ ದುರದುಂಡೇಶ್ವರ ಮಠಕ್ಕೆ ಭೇಟಿ ಮುರಗೋಡ ಗ್ರಾಮದ ಪುಣ್ಯಕ್ಷೇತ್ರ ಮಹಾಂತ ದುರದುಂಡೇಶ್ವರ ಮಠಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಶ್ರೀ ಮಹಾಂತ ಶಿವಯೋಗಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು.ಬಳಿಕ ಮಠದ ಪೀಠಾಧ್ಯಕ್ಷ ನೀಲಕಂಠ ಮಹಾಸ್ವಾಮಿಗಳ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯ ಕೋರಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು. ಈ ವೇಳೆ ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಶ್ರೀಗಳು, ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಹಾಂತೇಶ್ ಮತ್ತಿಕೊಪ್ಪ, ಮಠದ ಪದಾಧಿಕಾರಿಗಳು, ಭಕ್ತಾಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.