ಸಾರಾಂಶ
ಕೊಡಗಿನಲ್ಲಿ ಎರಡು ಪಕ್ಷದ ಮೈತ್ರಿ ಸಭೆ ನಡೆಯಿತು. ಚುನಾವಣೆಯನ್ನು ಜಂಟಿಯಾಗಿ ಎದುರಿಸುವ ತೀರ್ಮಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯ ದಲ್ಲಿ ಬಿಜೆಪಿ ಮತ್ತು ಜಾತ್ಯತೀತ ಜನತಾ ದಳ ಮೈತ್ರಿ ಯಾಗಿ ಲೋಕಸಭಾ ಚುನಾವಣೆ ಎದುರಿಸುತಿರುವ ಈ ಸಂದರ್ಭ ಕೊಡಗಿನಲ್ಲಿ ಕೂಡ ಎರಡು ಪಕ್ಷದ ಮೈತ್ರಿ ಸಭೆಯನ್ನು ಮಡಿಕೇರಿಯಲ್ಲಿ ನಡೆಸಲಾಯಿತು.ಸಭೆಯಲ್ಲಿ ಮುಂದಿನ ಲೋಕ ಸಭಾ ಚುನಾವಣೆಯನ್ನು ಜಂಟಿಯಾಗಿ ಎದುರಿಸುವ ತೀರ್ಮಾನ ವನ್ನು ಮಾಡಲಾಯಿತು ಮತ್ತು ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವಂತೆ ಚರ್ಚೆ ನಡೆಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಜಾತ್ಯತೀತ ಜನತಾ ದಳದ ಕೋರ್ ಕಮಿಟಿ ಸದಸ್ಯರಾದ ಟಿ.ಎಲ್. ವಿಶ್ವ ಮತ್ತು ಪ್ರವೀಣ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಗಳಾದ ಮಹೇಶ್ ಜೈನಿ ವಿ. ಕೆ ಲೋಕೇಶ್, ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹಾಗೂ ಎರಡು ಪಕ್ಷದ ಪ್ರಮುಖ ರಾದ ಪಾಣ್ ತಲೆ ವಿಶ್ವ ನಾಥ್ ನಾಗರಾಜ್ ಅನಿತಾ ಪೂವಯ್ಯ ಕನ್ನಿಕೆ ಮನು ಮಂಜುನಾಥ್ ಪುಷ್ಪವತಿ ಗೌತಮ್ ಕವನ್ ಕಾವೇರಪ್ಪ ಮಂಜುನಾಥ್ ಶಿವ ದಾಸ್ ಜಾಶಿರ್ ಸುರೇಶ್ ರವಿ ಮೊಗೇರ ಸೇರಿ ದಂತೆ ಎರಡು ಪಕ್ಷದ ಪ್ರಮುಖರು ಹಾಜರಿದ್ದರು