ಅಡಕೆ ಕೃಷಿಕರ ತೋಟಗಳಿಗೆ ಮಳೆಗಾಲದಲ್ಲಿ ಕೊಳೆ ರೋಗದ ಬರದಂತೆ ತಡೆಯುವ ಔಷಧ ಸಿಂಪಡಣೆಗೆ ಅಗತ್ಯವಾಗಿರುವ ಕಾಫರ್ ಸಲ್ಪೇಟ್ ದುಬಾರಿಯಾಗುತ್ತಿರುವುದನ್ನು ತಡೆಯಬೇಕು. ಕಳಪೆ ಗುಣಮಟ್ಟದ ಕಾಫರ್ ಸಲ್ಪೇಟ್ ಮಾರುಕಟ್ಟೆಗೆ ಬರುತ್ತಿದೆ. ಈ ಬಗ್ಗೆ ಗುಣಮಟ್ಟ ನಿಯಂತ್ರಣಕ್ಕೆ ಸರ್ಕಾರ ಕಟ್ಟನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಆಗ್ರಹಿಸಿದೆ.

ಪುತ್ತೂರು: ಅಡಕೆ ಕೃಷಿಕರ ತೋಟಗಳಿಗೆ ಮಳೆಗಾಲದಲ್ಲಿ ಕೊಳೆ ರೋಗದ ಬರದಂತೆ ತಡೆಯುವ ಔಷಧ ಸಿಂಪಡಣೆಗೆ ಅಗತ್ಯವಾಗಿರುವ ಕಾಫರ್ ಸಲ್ಪೇಟ್ ದುಬಾರಿಯಾಗುತ್ತಿರುವುದನ್ನು ತಡೆಯಬೇಕು. ಕಳಪೆ ಗುಣಮಟ್ಟದ ಕಾಫರ್ ಸಲ್ಪೇಟ್ ಮಾರುಕಟ್ಟೆಗೆ ಬರುತ್ತಿದೆ. ಈ ಬಗ್ಗೆ ಗುಣಮಟ್ಟ ನಿಯಂತ್ರಣಕ್ಕೆ ಸರ್ಕಾರ ಕಟ್ಟನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಆಗ್ರಹಿಸಿದೆ.ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಯಿತು.ಬೋಡೊ ದ್ರಾವಣಕ್ಕೆ ಪರ್ಯಾಯವಾಗಿ ಬಳಸಬಹುದಾದ ಪರಿಣಾಮಕಾರಿ ಸಿಂಪಡಣೆಗಳ ಕುರಿತು ಕೇಂದ್ರ ತೋಟಗಾರಿಕಾ ಇಲಾಖೆ, ರಾಜ್ಯ ತೋಟಗಾರಿಕಾ ಇಲಾಖೆ ಹಾಗೂ ಸಿಪಿಸಿಆರ್‌ಐ ವೈಜ್ಞಾನಿಕ ಶಿಫಾರಸುಗಳನ್ನು ಪ್ರಕಟಿಸಬೇಕು. ಕಾಪರ್ ಸಲ್ಫೇಟ್‌ಗೆ ನೀಡುತ್ತಿರುವಂತೆ ಪರ್ಯಾಯ ರೋಗ ನಿಯಂತ್ರಣ ಉತ್ಪನ್ನಗಳಿಗೂ ಸಹಾಯ ಧನ ಒದಗಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕಾಪರ್‌ಸಲ್ಪೇಟ್ ಗೆ ನೀಡುತ್ತಿರುವ ಸಹಾಯ ಧನ ಹಾಗೂ ಮಿತಿಗಳಲ್ಲಿ ಏರಿಕೆ ಮಾಡಬೇಕಾದ ಅಗತ್ಯ ಇದೆ. ಇದುವರೆಗೂ ೨-೩ ಸಿಂಪಡಣೆ ಸಾಕಾಗುತ್ತಿದ್ದರೆ ಈಗಷ್ನಿಷ್ಠ ೪-೫ ಸಿಂಪಡಣೆ ಬೇಕಾಗಿದೆ. ಹೀಗಾಗಿ ಸಹಾಯ ಧನ ಏರಿಕೆ ಮಾಡಬೇಕು ಎಂದು ಸಂಘ ಆಗ್ರಹಿಸಿದೆ.ಹವಾಮಾನ ಆಧರಿತ ಅಡಕೆ ಬೆಳೆ ವಿಮೆ ಪ್ರೀಮಿಯಂ ಪಾವತಿಗೆ ಜುಲೈ ಅಂತ್ಯದವರೆಗೆ ಅವಕಾಶ ನೀಡಿರುವುದನ್ನು ಸಂಘ ಸ್ವಾಗತಿಸಿದೆ. ಆದರೆ ವೈಜ್ಞಾನಿಕವಾಗಿ ಪ್ರಾಕೃತಿಕ ವೈಪರೀತ್ಯಗಳನ್ನು ದಾಖಲಿಸಿ ಆಗುವ ನಷ್ಟಗಳಿಗೆ ಸೂಕ್ತ ಪರಿಹಾರ ನೀಡಬೇಕು. ಕಳೆದ ಸಾಲಿನ ವಿಮಾ ಅವಧಿ ಮುಗಿದಿದ್ದು, ತಕ್ಷಣ ಇದರ ಬಿಡುಗಡೆಗೆ ಕ್ರಮಕೈಗೊಳ್ಳಬೇಕು. ಕಳಪೆ ಗುಣಮಟ್ಟದ ಅಡಕೆ ದೇಶಕ್ಕೆ ಆಮದು ಆಗುತ್ತಿರುವುದು ತಡೆಯಬೇಕು.ಮಹಾರಾಷ್ಟ್ರದಲ್ಲಿ ಅಡಕೆ ಸಾಗಾಟಕ್ಕೆ ಉಂಟಾಗಿರುವ ತಡೆಯನ್ನು ತೆರವುಗೊಳಿಸಬೇಕು. ಅಡಕೆ ಆಮದನ್ನು ಸಂಪೂರ್ಣ ನಿಷೇಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ. ಕರ್ನಾಟಕದ ವಿದ್ಯುತ್ ವಿತರಣಾ ಕ್ಷೇತ್ರಕ್ಕೆ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳ ಪ್ರವೇಶ ಕುರಿತ ಚರ್ಚೆಗಳು ನಡೆಯುತ್ತಿದೆ. ಅದರ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಸಂಘ ತಿಳಿಸಿದೆ. ಖಾಸಗೀಕರಣದಿಂದ ಕೃಷಿಕರು ಹಾಗೂ ಸಾಮಾನ್ಯ ವಿದ್ಯುತ್ ಗ್ರಾಹಕರಿಗೆ ಉಂಟಾಗಬಹುದಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸಂಘ ಹೇಳಿದೆ.ಕ್ಯಾನ್ ಗಳಲ್ಲಿ ಪೆಟ್ರೋಲ್-ಡೀಸೆಲ್ ಇಂಧನ ವಿತರಣೆಗೆ ವ್ಯವಸ್ಥೆ ಕೈಗೊಳ್ಳಬೇಕು. ಕೋವಿ ಪರವಾನಗಿ ನವೀಕರಣ ಪ್ರಕ್ರಿಯೆ ಸರಳೀಕರಣಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಮತ್ತು ಕಾರ್ಯದರ್ಶಿ ವೆಂಕಟಗಿರೀಶ್ ಸಿ.ಜಿ. ಅವರು ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.