ಸಾರಾಂಶ
ಕುಷ್ಟಗಿ: ಕಳೆದ ವರ್ಷ ನಮ್ಮ ಪಕ್ಷದವರು ಸದಸ್ಯತ್ವ ಅಭಿಯಾನ ಮಾಡಿರುವುದನ್ನು ನೋಡಿಕೊಂಡು ಕಾಂಗ್ರೆಸ್ ಪಕ್ಷದವರೂ ಅದನ್ನು ಕಾಪಿ ಮಾಡುವ ಮೂಲಕ ಸದಸ್ಯತ್ವ ಅಭಿಯಾನವನ್ನು ಪ್ರಾರಂಭ ಮಾಡಿದ್ದರು ಎಂದು ಶಾಸಕ ದೊಡ್ಡನಗೌಡ ಪಾಟೀಲ ಟೀಕಿಸಿದರು.
ಪಟ್ಟಣದ ಬಿಜೆಪಿ ಅಂಜನಾದ್ರಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಹಾಗೂ ಕಾರ್ಯಾಗಾರದಲ್ಲಿ ಮಾತನಾಡಿದರು.ನಮ್ಮ ಪಕ್ಷದ ಕೆಲಸಗಳನ್ನು ಅವರು ಕಾಪಿ ಮಾಡುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿ ಸದಸ್ಯತ್ವವನ್ನು ಮಾಡಿಸುವ ಯೋಜನೆ ಹಾಕಿಕೊಂಡಿದ್ದು, ಎಲ್ಲ ಕಾರ್ಯಕರ್ತರು ಕೈ ಜೋಡಿಸಬೇಕು. ನಮ್ಮ ತಾಲೂಕಿನಲ್ಲಿ ಕಳೆದ ವರ್ಷ 40 ಸಾವಿರ ಸದಸ್ಯರನ್ನು ಮಾಡಲಾಗಿತ್ತು. ಈ ವರ್ಷ 70 ಸಾವಿರ ಸದಸ್ಯರ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದ್ದು, ಇಂತಹ ಕಾರ್ಯಾಗಾರವನ್ನು ಪ್ರತಿಯೊಂದು ಗ್ರಾಮದಲ್ಲಿ ನಡೆಸಲಾಗುತ್ತದೆ ಎಂದರು.
ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ ಮಾತನಾಡಿ, ನಮ್ಮ ಕುಷ್ಟಗಿ ವಿಧಾನಸಭಾ ಕ್ಷೇತ್ರ ಕಳೆದ ವರ್ಷ ಕೊಪ್ಪಳ ಜಿಲ್ಲೆಯಲ್ಲಿ ಸದಸ್ಯತ್ವ ಮಾಡಿಸುವ ಕಾರ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, ಈಗ ಎಲ್ಲರೂ ಕೈ ಜೋಡಿಸುವ ಮೂಲಕ ಗುಲ್ಬರ್ಗ ಡಿವಿಷನ್‌ನಲ್ಲಿ ಮೊದಲ ಸ್ಥಾನ ಗಳಿಸೋಣ ಎಂದರು.ಜಿಪಂ ಮಾಜಿ ಸದಸ್ಯ ಕೆ. ಮಹೇಶ ಮಾತನಾಡಿ, ನಮ್ಮ ತಾಲೂಕಿನಲ್ಲಿ ಸುಮಾರು 70 ಸಾವಿರ ಜನರ ಸದಸ್ಯತ್ವ ಮಾಡಿಸಬೇಕಾಗಿದೆ. ಪ್ರತಿಯೊಂದು ಬೂತ್ ಮಟ್ಟದಲ್ಲಿ ಕಾರ್ಯ ನಡೆಯಬೇಕಾಗಿದ್ದು, ಒಂದು ಬೂತ್‌ನಲ್ಲಿ ಸುಮಾರು 300 ಸದಸ್ಯತ್ವವನ್ನು ಮಾಡಿಸಬೇಕಾಗಿದೆ ಎಂದರು. ನಂತರ ಸದಸ್ಯತ್ವ ನೋಂದಣಿ ಕುರಿತು ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಮಂಡಲದ ಮಾಜಿ ಅಧ್ಯಕ್ಷ ಬಸವರಾಜ ಹಳ್ಳೂರು, ಸದಸ್ಯತ್ವದ ಸಂಚಾಲಕ ಶಿವನಗೌಡ ಪಾಟೀಲ, ದೇವೇದ್ರಪ್ಪ ಬಳೂಟಗಿ, ಫಕೀರಪ್ಪ ಚಳಗೇರಿ, ತುಕಾರಾಂ ಸೂರ್ವೆ, ಉಮೇಶ ಯಾಧವ್, ದೊಡ್ಡಬಸವ ಸುಂಕದ, ಚಂದ್ರು ವಡಗೇರಿ, ಸೇರಿದಂತೆ ಪಕ್ಷದ ಕಾರ್ಯಕರ್ತರು ಅನೇಕರು ಇದ್ದರು.