ಸಾರಾಂಶ
ಪರಮಾನಂದವಾಡಿರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ ದುಷ್ಕರ್ಮಿಗಳು ಶುಕ್ರವಾರ ಮಧ್ಯರಾತ್ರಿ ಕೊತ್ತಂಬರಿ ಬೆಳೆಗೆ ಕಳೆನಾಶಕ ಔಷಧ ಸಿಂಪಡಿಸಿ, ಕೊತ್ತಂಬರಿ ಬೆಳೆ ಸಂಪೂರ್ಣ ನಾಶವಾಗಿದೆ.
ಕನ್ನಡಪ್ರಭ ವಾರ್ತೆ ಪರಮಾನಂದವಾಡಿ
ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ ದುಷ್ಕರ್ಮಿಗಳು ಶುಕ್ರವಾರ ಮಧ್ಯರಾತ್ರಿ ಕೊತ್ತಂಬರಿ ಬೆಳೆಗೆ ಕಳೆನಾಶಕ ಔಷಧ ಸಿಂಪಡಿಸಿ, ಕೊತ್ತಂಬರಿ ಬೆಳೆ ಸಂಪೂರ್ಣ ನಾಶವಾಗಿದೆ.ರೈತ ಬಾಳಪ್ಪ ಗೊಂದಳಿ ಎಂಬುವವರಿಗೆ ಸೇರಿದ 1 ಎಕರೆ 20 ಗುಂಟೆ ಜಮೀನನಲ್ಲಿ ಕೊತ್ತಂಬರಿ ಬೆಳೆದಿದ್ದ. ಚೆನ್ನಾಗಿ ಬಂದಿದ್ದ ಕೊತ್ತಂಬರಿ ಬೆಳೆ ಈಗಾಗಲೆ ಸುಮಾರು ₹3 ಲಕ್ಷಕ್ಕೆ ವ್ಯಾಪಾರಿಗಳು ಖರೀದಿಸಿದ್ದರು.
ಸೋಮವಾರ ಅಥವಾ ಮಂಗಳವಾರ ವ್ಯಾಪಾರಸ್ಥರು ಕೊತ್ತಂಬರಿ ತೆಗೆದುಕೊಂಡು ಹೋಗುವವರಿದ್ದರು. ಅಷ್ಟರಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿ ಹಾನಿ ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ರೈತ ಬಾಳಪ್ಪನ ಬಾಳು, ಸಾವಿವಾರು ರೂಪಾಯಿ ಖರ್ಚು ಮಾಡಿದ ಬೆಳೆದ ಬೆಳೆ ಹಾನಿಯಾಗಿರುವುದರಿಂದ ರೈತನ ಕುಟುಂಬ ದಿಕ್ಕು ತೋಚದಂತಾಗಿದೆ.