ರಾಘವೇಂದ್ರ ಗುರು ಸರ್ವಭೌಮರ ಪಟ್ಟಾಭಿಷೇಕ, ವರ್ಧಂತಿ ಮಹೋತ್ಸವ

| Published : Mar 07 2025, 12:50 AM IST

ಸಾರಾಂಶ

ವರದಂತಿ ಮಹೋತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಪಂಚಾಮೃತ ಅಭಿಷೇಕ, ಹಾಲಿನ ಅಭಿಷೇಕ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಮೈಸೂರು: ನಗರದ ಅಗ್ರಹಾರದ ಉತ್ತರಾದಿ ಮಠದ ಶ್ರೀ ದೇವೇಂದ್ರತೀರ್ಥ ಪ್ರತಿಷ್ಠಾನ, ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪಟ್ಟಾಭಿಷೇಕ ಹಾಗೂ ವರದಂತಿ ಮಹೋತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಪಂಚಾಮೃತ ಅಭಿಷೇಕ, ಹಾಲಿನ ಅಭಿಷೇಕ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂಡಿತ್ ಅನಿರುದ್ಧ ಆಚಾರ್ ಪಾಂಡುರಂಗಿ, ಮಠದ ಪ್ರಧಾನ್ ಅರ್ಚಕರಾದ ಹರೀಶ್, ಮುಖಂಡರಾದ ಎನ್.ಎಂ. ನವೀನ್ ಕುಮಾರ್, ಎಸ್.ಬಿ. ವಾಸುದೇವಮೂರ್ತಿ ಮೊದಲಾದವರು ಇದ್ದರು.