ಲ್ಯಾಪ್‌ಟ್ಯಾಪ್ ಖರೀದಿಯಲ್ಲಿ ಭ್ರಷ್ಟಾಚಾರ: ವೇಳಸಂಗಿ

| Published : Mar 22 2024, 01:02 AM IST

ಸಾರಾಂಶ

ಸುರಪುರ ನಗರದ ರಂಗಂಪೇಟೆ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ಎಐಟಿಯುಸಿ ಕಾರ್ಯಕ್ರಮದಲ್ಲಿ ಸಂಘಟನೆ ರಾಜ್ಯ ಉಪಾಧ್ಯಕ್ಷ ಪ್ರಭುದೇವ ವೇಳಸಿಂಗಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸುರಪುರ

ಕಾರ್ಮಿಕರ ಮಕ್ಕಳಿಗೆ ನೀಡುವ ಲ್ಯಾಪ್‌ಟ್ಯಾಪ್ ಖರೀದಿಯಲ್ಲಿ ಸರ್ಕಾರ ಭ್ರಷ್ಟಾಚಾರ ನಡೆಸಿದ್ದು, ವಿದ್ಯಾರ್ಥಿ ವೇತನದ ಹಣದಲ್ಲಿ ಕಡಿತಗೊಳಿಸಿರುವುದನ್ನು ಖಂಡಿಸಿ ವಿವಿಧ ಬೇಡಿಕೆ ಈಡೇರಿಕೆಗೆ ಏಪ್ರಿಲ್ ತಿಂಗಳಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಪ್ರಭುದೇವ ವೇಳಸಿಂಗಿ ತಿಳಿಸಿದರು.

ನಗರದ ರಂಗಂಪೇಟೆ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಎಐಟಿಯುಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಂಗಂಪೇಟೆ ನಗರ ಘಟಕ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕ ಸಚಿವ ಸಂತೋಷ ಲಾಡ್ ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರ ಬದುಕು ನಾಶ ಮಾಡುತ್ತಿದ್ದಾರೆ. ಕಟ್ಟಡ ಕಾರ್ಮಿಕರ ಕಾಮಗಾರಿ ಪರವಾನಗಿ ನೆಪದಲ್ಲಿ ಇನ್ನಿಲ್ಲದ ಸಮಸ್ಯೆ ಸೃಷ್ಠಿಸುತ್ತಿದ್ದಾರೆ ಎಂದು ದೂರಿದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಪತ್ತಾರ, ಅಕ್ಷರ ದಾಸೋಹ ಜಿಲ್ಲಾಧ್ಯಕ್ಷ ಕಲ್ಪನಾ ಗುರಸುಣಗಿ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ತಳವಾರ, ಮುಖಂಡರಾದ ಅಬ್ದುಲ್ ಗಫೂರ ನಗನೂರಿ, ಅಬ್ದುಲ್ ಅಲೀಂ ಗೋಗಿ, ಎನ್‌ಎಫ್‌ಐಯುಸಿ ಪದ್ಮಾ ಪಾಟೀಲ್ ಕಲಬುರ್ಗಿ, ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಶಿವಲಿಂಗಮ್ಮ ಮಾತನಾಡಿದರು.

ಈ ವೇಳೆ ಸಂಘದ ರಂಗಂಪೇಟ ನಗರ ಘಟಕದ ನೂತನ ಪದಾಧಿಕಾರಿ ನೇಮಿಸಿ ಗುರುತಿನ ಚೀಟಿ ವಿತರಿಸಲಾಯಿತು.

ನೇಮಕ:

ನಗರ ಘಟಕದ ಪದಾಧಿಕಾರಿಗಳಾಗಿ ಬಾಲಪ್ಪ-ಗೌರವಾಧ್ಯಕ್ಷ, ಅಯ್ಯಪ್ಪ ವಗ್ಗಾಲಿ-ಅಧ್ಯಕ್ಷ, ಮಲ್ಲಪ್ಪ, ಹಣಮಂತ-ಉಪಾಧ್ಯಕ್ಷರು, ಶರಣಬಸಪ್ಪ ಪೂಜಾರಿ-ಪ್ರಧಾನ ಕಾರ್ಯದರ್ಶಿ, ದ್ಯಾಮಗೌಡ-ಖಜಾಂಚಿ, ಮಲ್ಲಪ್ಪ-ಉಪ ಖಜಾಂಚಿ, ಅಮೀತ್, ವಿಶ್ವನಾಥ, ಜಿಲಾನಿ, ಮಹ್ಮದ್ ಖಾಸಿಂ, ಚಂದಪ್ಪ, ನಾಗರಾಜ, ಅಲೀಮ್, ಮರೆಪ್ಪ ಸಂಘಟನಾ ಕಾರ್ಯದರ್ಶಿಗಳು, ಮೊಹ್ಮದ್ ಯೂಸುಫ್, ಸಿದ್ದರಾಜ, ರಫೀಕ್, ಮಹೇಬೂಬ್ ಹಾಗೂ ತಿಮ್ಮಣ್ಣ ಇವರನ್ನು ಸಹ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಯಿತು.

ಎಐಟಿಯುಸಿ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ನಗರಗುಂಡ, ರಮೇಶ ಡೊಳ್ಳೆ, ನಾಗಪ್ಪ ಕಟ್ಟಿಮನಿ, ವಾಸುದೇವ ಮಂಗಳೂರ, ನಾಸಿರ್ ಕುಂಡಾಲೆ, ಅಕ್ಷರ ದಾಸೋಹ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಹುಣಸಗಿ, ತಿಮ್ಮಯ್ಯ ದೊರೆ, ಮರೆಪ್ಪ ದೇಸಾಯಿ, ಮಹಿಬೂಬ ರುಕ್ಮಾಪುರ ಸೇರಿ ಇತರರಿದ್ದರು.