ಕಾಸ್ಮಸ್ ಕ್ಲಬ್‌ನ ಕ್ರೀಡಾಸ್ಫೂರ್ತಿ ಮಾದರಿ: ಡಿಸಿಪಿ ರವೀಶ್‌

| Published : Nov 24 2025, 02:30 AM IST

ಕಾಸ್ಮಸ್ ಕ್ಲಬ್‌ನ ಕ್ರೀಡಾಸ್ಫೂರ್ತಿ ಮಾದರಿ: ಡಿಸಿಪಿ ರವೀಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ಕ್ಲಬ್ ಅತ್ಯಂತ ಸುವ್ಯವಸ್ಥಿತ ಹಾಗೂ ಕ್ರೀಡಾ ಸ್ಫೂರ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಕ್ರೀಡಾ ವಲಯದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿರುವುದು ಧಾರವಾಡದ ಹೆಮ್ಮೆ ಎಂದು ಡಿಸಿಪಿ ಸಿ.ಆರ್. ರವೀಶ್‌ ಹೇಳಿದರು.

ಧಾರವಾಡ: ನಗರದ ಕಾಸ್ಮಸ್ ಕ್ಲಬ್‌ನಿಂದ ತರಬೇತಿ ಹೊಂದಿದ ಹಲವಾರು ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿರುವುದು ಹೆಮ್ಮೆಯ ವಿಷಯ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್. ರವೀಶ್‌ ಹೇಳಿದರು.

ನಗರದ ಕಾಸ್ಮಸ್ ಕ್ಲಬ್‌ನಲ್ಲಿ ನಡೆದ ಕಾಸ್ಮಸ್ ಕಪ್ ಕರ್ನಾಟಕ ಸ್ಟೇಟ್ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಾಮೆಂಟ್‌ ಸಮಾರೋಪದಲ್ಲಿ ಅವರು ಮಾತನಾಡಿದರು.

ಈ ಕ್ಲಬ್ ಅತ್ಯಂತ ಸುವ್ಯವಸ್ಥಿತ ಹಾಗೂ ಕ್ರೀಡಾ ಸ್ಫೂರ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಕ್ರೀಡಾ ವಲಯದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿರುವುದು ಧಾರವಾಡದ ಹೆಮ್ಮೆ ಎಂದರು.

ಅತ್ಯಂತ ಹಿರಿಯ ಸಂಸ್ಥೆಯಾಗಿರುವ ಕಾಸ್ಮಸ್ ಕ್ಲಬ್‌ ಬೆಳವಣಿಗೆ ಮಾದರಿಯಾಗಿದೆ. ಕ್ಲಬ್‌ ಕಟ್ಟಿ ಬೆಳೆಸಿದ ಹಿರಿಯರನ್ನು ಭೇಟಿಯಾಗಿರುವುದು ಸಂತಸ ತಂದಿದೆ ಎಂದರು.

ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸಿರುವ ಕಾಸ್ಮಸ್ ಕ್ಲಬ್‌ ಕನ್ನಡದ ಕಾರ್ಯಕ್ರಮಗಳಿಗೂ ಆದ್ಯತೆ ನೀಡುವಂತಾಗಬೇಕು. ಕನ್ನಡ ಭಾಷೆಯ ಅಭಿವೃದ್ಧಿಗೆ, ಬೆಳವಣಿಗೆಗೂ ಕ್ಲಬ್‌ ಕಾರ್ಯಕ್ರಮಗಳನ್ನು ರೂಪಿಸುವಂತೆ ಸಲಹೆ ನೀಡಿದರು.

ಕನ್ನಡ ರಾಜ್ಯೋತ್ಸವ ಆಚರಿಸುವ ಈ ತಿಂಗಳಿನಲ್ಲಿ ಎಲ್ಲೆಡೆಯೂ ಕನ್ನಡ ಕಾರ್ಯಕ್ರಮಗಳು ನಡೆಯುತ್ತಿವೆ. ಮಕ್ಕಳಿಗೆ ಪ್ರಬಂಧ, ಚಿತ್ರಕಲೆ, ಚರ್ಚಾ ಸ್ಪರ್ಧೆ, ರಸಪ್ರಶ್ನೆಯಂತಹ ಚಟುವಟಿಕೆಗಳ ಮೂಲಕ ಕ್ಲಬ್‌ ಮತ್ತಷ್ಟು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕ್ಲಬ್ ಅಧ್ಯಕ್ಷ ನಿತೀನ್ ಟಗರಪುರ, ಡಿಸಿಪಿ ರವೀಶ್‌ ಅವರ ಸಲಹೆಯಂತೆ ಕ್ಲಬ್‌ ಮುಂದಿನ ದಿನಗಳಲ್ಲಿ ಇಂತಹ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಭರವಸೆ ನೀಡಿದರು.

ಮಾಜಿ ಅಧ್ಯಕ್ಷ ಎ.ಸಿ.ಪುರದ, ಕ್ಲಬ್‌ ನಡೆದು ಬಂದ ದಾರಿಯ ಕುರಿತು ವಿವರಿಸಿದರು. ಮಾಜಿ ಅಧ್ಯಕ್ಷರಾದ ಸಿ.ವಿ.ಮರದ, ವಿ.ಡಿ ಕಾಮರೆಡ್ಡಿ, ಎ.ಸಿ.ಪುರದ, ಉಪಾಧ್ಯಕ್ಷ ಎಂ.ಎಂ. ಹಿರೇಮಠ, ಕಾರ್ಯದರ್ಶಿ ಅಶೋಕ ಹಿರೇಮಠ, ಜಂಟಿ ಕಾರ್ಯದರ್ಶಿ ಎಸ್.ಎಂ. ರುದ್ರಸ್ವಾಮಿ, ಖಜಾಂಚಿ ಶಿವಾನಂದ ಬಿ. ಕಿತ್ತೂರ, ಆಡಳಿತ ಮಂಡಳಿ ಸದಸ್ಯರಾದ ವಿಜಯ ಸುಣಗಾರ, ಎಂ.ಎಸ್. ಹಾಲಬಾವಿ, ಅಜ್ಜಯ್ಯ ಗುಡ್ಡದಮಠ, ಸಿ.ಎಚ್. ಜೋಗಿಹಳ್ಳಿ, ಬಿ.ಎನ್. ಜಮಖಂಡಿ, ಎಚ್.ಎಫ್. ಹೆಬ್ಬಾಳ, ಅಂಬೇಕರ, ಝಡ್.ಎಂ. ಮುಲ್ಲಾ, ಮುಖ್ಯ ರೆಫ್ರಿ ವೀರೇಶ ಕಲ್ಮಠ, ವಿಜಯ ವೈದ್ಯ, ದೀಪಕ ಚಿಂಚೋರೆ, ರವಿ ನಾಯಕ, ವ್ಯವಸ್ಥಾಪಕ ಪ್ರವೀಣ ಹುಲ್ಲಳ್ಳಿ ಇದ್ದರು.

ಕಾರ್ಯದರ್ಶಿ ಎ.ಎಸ್.ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಎಸ್.ಎಂ.ರುದ್ರಸ್ವಾಮಿ ವಂದಿಸಿದರು.

ಫಲಿತಾಂಶ

ಅಂಡರ್ 19 ಬಾಯ್ಸ್

ಫೈನಲ್ ಪಂದ್ಯದಲ್ಲಿ ವರುಣ್ ಬಿ. ಕಶ್ಯಪ್ ಅವರು, ಆರ್ಣವ್ ಎನ್ ಅವರನ್ನು 11-9, 7-11, 11-8, 11-5, 16-14 ಅಂಕಗಳಿಂದ ಸೋಲಿಸಿ, ಪ್ರಶಸ್ತಿ ಮುಡಿಗೇರಿಸಿದರು.

ಸೆಮಿಫೈನಲ್‌ನಲ್ಲಿ ವರುಣ್ ಬಿ. ಕಶ್ಯಪ್ ಅವರು, ಆರ್ಯ ಎ. ಜೈನ್ ಅವರನ್ನು 16-18, 11-7, 4-11, 11-8, 12-10 ಅಂಕಗಳಿಂದ ಹಾಗೂ ಆರ್ಣವ್ ಎನ್. ಅವರು ಹೃಷಿಕೇಶ ಎ.ಆರ್, ಶೆಟ್ಳೂರ್ ಅವರನ್ನು 9-11, 11-8, 11-9, 11-8 ಅಂಕಗಳಿಂದ ಸೋಲಿಸಿದ್ದರು.

ಮೆನ್ಸ್ ಸಿಂಗಲ್ಸ್

ಫೈನಲ್ ಪಂದ್ಯದಲ್ಲಿ ಸಂಜಯ್ ಮಧವನ್ ಅವರು, ಯಶವಂತ್ ಪಿ ಅವರನ್ನು 11-4, 11-9, 6-11, 11-6, 11-9 ಅಂಕಗಳಿಂದ ಪರಾಭವಗೊಳಿಸಿದರು.

ಸೆಮಿಫೈನಲ್ ಪಂದ್ಯದಲ್ಲಿ ಯಶವಂತ್ ಪಿ ಅವರು ಸಮರ್ಥ್ ಕುಡಿಕೇರಿ ಅವರನ್ನು 9-11, 11-8, 10-12, 11-9, 11-6, 11-5 ಅಂಕಗಳಿಂದ ಹಾಗೂ ಸಂಜಯ್ ಮಧವನ್ ಅವರು ವರುಣ್ ಬಿ. ಕಶ್ಯಪ್ ಅವರನ್ನು 4-11, 11-8, 11-8, 7-11, 11-1, 4-11, 11-8 ಅಂಕಗಳಿಂದ ಪರಾಜಿತಗೊಳಿಸಿದ್ದರು.

ವುಮೆನ್ಸ್ ಸಿಂಗಲ್ಸ್

ಫೈನಲ್ ಪಂದ್ಯದಲ್ಲಿ ಸಹನಾ ಎಚ್. ಮೂರ್ತಿ ಅವರು ವೇದಾಲಕ್ಷ್ಮಿ ಡಿ.ಕೆ. ಅವರನ್ನು 4-11, 4-11, 12-10, 11-6, 11-6, 5-11, 11-4 ಅಂಕಗಳಿಂದ ಸೋಲಿಸಿ, ಪ್ರಶಸ್ತಿಗೆ ಭಾಜನರಾದರು.

ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ವೇದಾಲಕ್ಷ್ಮಿ ಡಿ.ಕೆ. ಅವರು ತೃಪ್ತಿ ಪುರೋಹಿತ್ ಅವರನ್ನು 11-7, 11-9, 11-5, 3-11, 3-11, 11-8 ಅಂಕಗಳಿಂದ ಹಾಗೂ ಸಹನಾ ಎಚ್. ಮೂರ್ತಿ ಅವರು ಕಾರುಣಾ ಜಿ. ಅವರನ್ನು 11-4, 11-5, 11-8, 10-12, 11-6 ಅಂಕಗಳಿಂದ ಸೋಲಿಸಿದ್ದರು.