ಸಾರಾಂಶ
Cotton crop field festival in Vadagera village
-ಪ್ರಗತಿಪರ ಮಹಿಳಾ ರೈತರಾದ ಮೋನಮ್ಮ ಗಂಡ ಶಿವಪ್ಪ ಅವರ ಹೊಲದಲ್ಲಿ ಹತ್ತಿ ಬೆಳೆಯ ಕ್ಷೇತ್ರೋತ್ಸವ
-----ಕನ್ನಡಪ್ರಭ ವಾರ್ತೆ ವಡಗೇರಾ
ವಡಗೇರಾ ಗ್ರಾಮದ ಪ್ರಗತಿಪರ ಮಹಿಳಾ ರೈತರಾದ ಮೋನಮ್ಮ ಶಿವಪ್ಪ ಅವರ ಹೊಲದಲ್ಲಿ ಕಲಿಕಾ ಟಾಟಾ ಟ್ರಸ್ಟ್, ಟೆಸ್ಕೋ, ತಾಲೂಕು ಕೃಷಿ ಇಲಾಖೆ ಮತ್ತು ವಡಗೇರಾ ರೈತ ಸಂಪರ್ಕ ಕೇಂದ್ರ ಅವರ ಸಂಯುಕ್ತಾಶ್ರಯದಲ್ಲಿ ಹತ್ತಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೃಷಿ ಅಧಿಕಾರಿ ಗಣಪತಿ ಅವರು ರೈತ ಸಂಪರ್ಕ ಕೇಂದ್ರದ ವಿವಿಧ ಯೋಜನೆಗಳು ಮತ್ತು ಹತ್ತಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳಾದ ಮಣ್ಣಿನ ಫಲವತ್ತತೆ, ಹತ್ತಿ ಬೀಜದ ತಳಿಗಳ ಆಯ್ಕೆ, ಕೀಟ ಮತ್ತು ರೋಗ ನಿರ್ವಹಣೆ ಬಗ್ಗೆ ಸವಿಸ್ತಾರವಾಗಿ ರೈತರಿಗೆ ಮಾಹಿತಿ ನೀಡಿದರು.
ರೇಷ್ಮೆ ಇಲಾಖೆಯ ಅಧಿಕಾರಿ ರಾಮಣ್ಣ ಮಾತನಾಡಿ, ರೇಷ್ಮೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು. ಕಲಿಕೆ ಜೀವನೋಪಾಯ ಕಾರ್ಯಕ್ರಮ ಸಂಯೋಜಕರಾದ ಶಾಂತಗೌಡ ಬಿರಾದಾರ್ ಮಾತನಾಡಿ, ಕಲಿಕಾ ಟಾಟಾ ಟ್ರಸ್ಟ್ ಗುರಿ ಮತ್ತು ಉದ್ದೇಶಗಳನ್ನು ರೈತರಿಗೆ ತಿಳಿಸಿದರು.ಸುಧಾರಾಣಿ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕರಾದ ಅನುರಾಧಾ, ಅರುಣ ಕುಮಾರ, ಸಂಪತಕುಮಾರ, ಹಸನ್ ರಜಾಕ್, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಸೈದಪ್ಪ ವಡಗೇರಾ, ರಫೀಕ್, ಹಣಮಂತ, ಸೈದಪ್ಪ ಉಳ್ಳೆಸೂಗೂರು, ಬಾಲಪ್ಪ, ಶಿವರಾಜ, ಮಹಾದೇವ, ಭೀಮಾಶಂಕರ, ಮಲ್ಲೇಶ, ಶಂಕರ ಇದ್ದರು. 100ಕ್ಕೂ ಹೆಚ್ಚು ರೈತರು ಹಾಗೂ ಮಹಿಳೆಯರು ವಿವಿಧ ಗ್ರಾಮಗಳಿಂದ ಆಗಮಿಸಿ, ಪಾಲ್ಗೊಂಡಿದ್ದರು.
ಫೋಟೊ: 17ವೈಡಿಆರ್1: ವಡಗೇರಾ ಗ್ರಾಮದ ಪ್ರಗತಿಪರ ಮಹಿಳಾ ರೈತರಾದ ಮೋನಮ್ಮ ಗಂಡ ಶಿವಪ್ಪ ಅವರ ಹೊಲದಲ್ಲಿ ಹತ್ತಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಜರುಗಿತು.