ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಬಮ್ಮನಜೋಗಿ ಎಲ್.ಟಿ-೧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಕೋರವಾರ, ಜಾಲವಾದ ಹಾಗೂ ಮಣೂರ ಕ್ಲಸ್ಟರಿನ 6,7,8,ನೇ ತರಗತಿ ಬೋಧನೆ ಮಾಡುವ ಶಿಕ್ಷಕರಿಗೆ ಸಮಾಲೋಚನೆ ಸಭೆ ನಡೆಯಿತು.ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಿಂದಗಿಯ ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ ಮಾತನಾಡಿ, ತರಗತಿಯಲ್ಲಿ ಮಕ್ಕಳಿಗೆ ಬೋಧನೆ ಮಾಡುವಾಗ ಹಾಗೂ ಕ್ಲಿಸ್ಟ್ ಅಂಶಗಳನ್ನು ಈ ಸಮಾಲೋಚನಾ ಸಭೆಯಲ್ಲಿ ಪರಿಹಾರ ಕಂಡುಕೊಂಡ ಹೊಗಲು ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು. ಜಾಲವಾದ ಸಿ.ಆರ್.ಪಿ ಕಾಶೀಂ ವಾಲಿಕಾರ ಮಾತನಾಡಿ, ಶಿಕ್ಷಕರಿಗೆ ಸಮಾಲೋಚನಾ ಸಭೆಯಲ್ಲಿ ತಮ್ಮ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.ಶಾಲೆಯ ಮುಖ್ಯಗುರು ಬಿ.ಡಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸದಾಗಿ ನೇಮಕಾತಿಯಾದ ಶಿಕ್ಷಕರು ಸತತ ಅಧ್ಯಯನಶೀಲರಾಗಬೇಕು ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಕೋರವಾರ ಸಿ.ಆರ್.ಪಿ.ಬಾಬು ನಡುವಿನಕೇರಿ, ಸಂಘಟನಾ ಕಾರ್ಯದರ್ಶಿ ನಾಗೇಶ ನಾಗೂರ, ಮಣೂರ ಸಿ.ಆರ್.ಪಿ ವಾಲಿಕಾರ, ಬಿ.ಜಿ.ಬಡಿಗೇರ, ಕೆ.ಎಚ್.ಮಾಕೊಂಡ, ಆರ್.ಸಿ.ಅಂಗಡಿ, ಎಸ್.ಪಿ.ಪವಾರ, ಎಸ್.ಡಿ.ಹೊಸುರ, ಎಸ್.ಬಿ.ಬೋರಾವತ್, ಎನ್ .ಎಸ್.ಕುಂಬಾರ, ಗುರು ಬಿರಾದಾರ, ಕೆ.ಎನ್.ಬಜೆಂತ್ರಿ ಸೇರಿದಂತೆ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಕರು, ಗುರುಮಾತೆಯರು ಇದ್ದರು. ಎನ್.ಎಸ್.ಹರವಾಳ ನಿರೂಪಿಸಿ, ವಂದಿಸಿದರು.
;Resize=(128,128))
;Resize=(128,128))