ರಿಪ್ಪನ್‍ಪೇಟೆಯ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸೇವಾ ಸಮಿತಿಯವರು ಕಳೆದ 59 ವರ್ಷಗಳಿಂದ ಪ್ರತಿಷ್ಠಾಪಿಸಿಕೊಂಡು ಬಂದಿರುವ ಹಿಂದೂ ಮಹಾಗಣಪತಿ ಉತ್ಸವವು ಈ ವರ್ಷವೂ ಅದ್ಧೂರಿಯಾಗಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಕ್ಷಣಗಣನೆ ಆರಂಭವಾಗಿದೆ.
ರಿಪ್ಪನ್‍ಪೇಟೆಯ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸೇವಾ ಸಮಿತಿಯವರು ಕಳೆದ 59 ವರ್ಷಗಳಿಂದ ಪ್ರತಿಷ್ಠಾಪಿಸಿಕೊಂಡು ಬಂದಿರುವ ಹಿಂದೂ ಮಹಾಗಣಪತಿ ಉತ್ಸವವು ಈ ವರ್ಷವೂ ಅದ್ಧೂರಿಯಾಗಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಕ್ಷಣಗಣನೆ ಆರಂಭವಾಗಿದೆ.
ಈಗಾಗಲೇ ಇಲ್ಲಿನ ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ 59 ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಕಾರ್ಯಕ್ಕೆ ಭರದ ಸಿದ್ದತೆ ಸಾಗಿದ್ದು ಹಿಂದೂ ಮಹಾಸಭಾದ ಯುವಕಾರ್ಯಕರ್ತರ ಸಮೂಹ ಹಗಲಿರುಳು ಶ್ರಮಿಸುತ್ತಿದ್ದು ವಿನಾಯಕ ವೃತ್ತದ ನಾಲ್ಕು ಜಿಲ್ಲಾ ಕೇಂದ್ರ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಝಗಮಗಿಸುವ ದೀಪಾಲಂಕಾರ ತಳಿರು ತೋರಣ ಹಾಗೂ ಮಹಾದ್ವಾರಗಳ ನಿರ್ಮಾಣ ಜನಾಕರ್ಷಣೆಗೆ ಅಣಿಯಾಗುತ್ತಿದೆ.ಹಿಂದೂ ಮಹಾಗಣಪತಿ ಮಹೋತ್ಸವದ ಅಂಗವಾಗಿ ನಾಳೆ ಸೋಮವಾರ ಬೆಳಗ್ಗೆ ಶಿವಮೊಗ್ಗ ರಸ್ತೆಯಲ್ಲಿನ ವಿದ್ಯಾನಗರದಿಂದ ತಿಲಕ್ ಮಂಟಪದವರೆಗೆ ಗಣೇಶ ಮೂರ್ತಿಯನ್ನು ಮೆರವಣಿಗೆಯ ಮೂಲಕ ತರಲಾಗುತ್ತಿದ್ದು ಮೂರ್ತಿಯನ್ನು ತರುವ ಮುನ್ನ ವಿನಾಯಕ ವೃತ್ತದಲ್ಲಿ ಹಿಂದೂ ಭಗವದ್ವಜವನ್ನು ಹಾರಿಸುವುದರೊಂದಿಗೆ ಗಣೇಶೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.
ಸೆ. 14 ರ ಸೋಮವಾರದಿಂದ 24 ರ ಗುರುವಾರದವರೆಗೆ 11 ದಿನಗಳ ಕಾಲ ಹಿಂದೂ ಮಹಾಗಣಪತಿ ಮಹೋತ್ಸವವು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ರಾಷ್ಟ್ರಭಕ್ತಿಯ ವಿಚಾರ ವಿವಿಧ ಸಾಂಸ್ಕೃತಿಕ ಹಾಗೂ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಜರುಗಲಿದೆ.ಈಗಾಗಲೇ ರಕ್ಷಣಾ ಇಲಾಖೆಯವರು ಶಾಂತಿ ಸುವ್ಯವಸ್ಥೆಗಾಗಿ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು ಹಿಂದೂ ಮಹಾಗಣಪತಿ ಉತ್ಸವವು ರಾಜ್ಯದಲ್ಲಿಯೇ ಮಾದರಿ ಎಂಬ ಬಗ್ಗೆ ಮೆಚ್ಚಗೆ ಗಳಿಸುತ್ತಿರುವ ರಿಪ್ಪನ್‍ಪೇಟೆ ಹಿಂದೂ ಮಹಾಗಣಪತಿ ಮಹೋತ್ಸವವನ್ನು ಅದ್ದೂರಿ ಆಚೆರಣೆಯ ಅಂದ ಚಂದವನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹ ಕಾತರದಿಂದ ನೋಡುತ್ತಿದ್ದಾರೆ.
----------------------ದಿ.13.ಅರ್.ಪಿ.ಟಿ.4ಪಿ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸೇವಾ ಸಮಿತಿಯವರು ಕಳೆದ 59 ವರ್ಷಗಳಿಂದ ಪ್ರತಿಷ್ಟಾಪಿಸಿಕೊಂಡು ಬಂದಿರುವ ಹಿಂದೂ ಮಹಾಗಣಪತಿ ಉತ್ಸವವಕ್ಕೆ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿರುವ (ಕಂಗೊಳಿಸುತ್ತಿರುವ) ರಿಪ್ಪನ್‍ಪೇಟೆ ಪಟ್ಟಣ.