ಸಾರಾಂಶ
ಪಿಒಪಿ ಗಣೇಶ ಮೂರ್ತಿಗೆ ತೀಲಾಂಜಲಿ ಹೇಳಿ ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಜನರು ಮುಂದಾಗಿದ್ದು ಭರ್ಜರಿ ಬೇಡಿಕೆ ಬಂದಿದೆ. ಭಕ್ತರು ತಮ್ಮ ಶಕ್ತಿಗೆ ಅನುಸಾರವಾಗಿ ಸಣ್ಣ ಗಾತ್ರದಿಂದ 10 ಅಡಿ ಎತ್ತರದ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿತು.
ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ:ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿಘ್ನ ನಿವಾರಕ ಗಣೇಶನ ಆಗಮನಕ್ಕೆ ಕ್ಷಣಗಣನೆ ಶುರುವಾಗಿದ್ದು ಸಿದ್ಧತೆ ಪೂರ್ಣಗೊಂಡಿದೆ.
ಮಂಗಳವಾರ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾಗಿರುವ ಗಣೇಶ ವಿಗ್ರಹ ಹಾಗೂ ಪೂಜಾ ಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಬೆಲೆ ಏರಿಕೆಯ ನಡುವೆಯೂ ಜನ ಮುಗಿಬಿದ್ದು ಖರೀದಿಸಿದರು. ಇದರಿಂದ ವ್ಯಾಪಾರಸ್ಥರು ಪುಲ್ ಖುಷ್ ಆದರು.ಗಣೇಶ ಮೂರ್ತಿಗೆ ಡಿಮ್ಯಾಂಡ್:
ಪಿಒಪಿ ಗಣೇಶ ಮೂರ್ತಿಗೆ ತೀಲಾಂಜಲಿ ಹೇಳಿ ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಜನರು ಮುಂದಾಗಿದ್ದು ಭರ್ಜರಿ ಬೇಡಿಕೆ ಬಂದಿದೆ. ಭಕ್ತರು ತಮ್ಮ ಶಕ್ತಿಗೆ ಅನುಸಾರವಾಗಿ ಸಣ್ಣ ಗಾತ್ರದಿಂದ 10 ಅಡಿ ಎತ್ತರದ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿತು.ಬೆಲೆ ಏರಿಕೆ ಬಿಸಿ:
ಗಣೇಶ ಚತುರ್ಥಿ ಅಂಗವಾಗಿ ಪೂಜಾ ಸಾಮಾಗ್ರಿ ಹಾಗೂ ಹೂ-ಹಣ್ಣುಗಳ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿತು. ಮಳೆ ಹೆಚ್ಚಾದ ಪರಿಣಾಮ ಹೂವಿನ ದರಗಳು ಸಹ ಗಗನಕ್ಕೇರಿವೆ. ಆದರೂ ಸಹ ಭಕ್ತರು ಚೌಕಾಸಿ ಮಾಡಿ ಖರೀದಿಸಿದರು. ವಿವಿಧ ಹಣ್ಣುಗಳು ಸಹ ಮಾರುಕಟ್ಟೆಗೆ ಲಗ್ಗೆ ಹಿಟ್ಟಿದ್ದು ಭರ್ಜರಿ ವ್ಯಾಪಾರವಾಯಿತು.ಭರದ ಸಿದ್ಧತೆ:
ಸಾರ್ವಜನಿಕರ ಗಣೇಶ ಪ್ರತಿಷ್ಠಾಪಿಸುವ ಮಂಡಳಿಗಳು ಈಗಾಗಲೇ ವಿವಿಧ ಕಲಾಕೃತಿಯಲ್ಲಿ ಮಂಟಪ ಸಿದ್ಧಪಡಿಸಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಮಂಟಪಗಳಿಗೆ ವಿವಿಧ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಿದ್ದು ನೋಡುಗರನ್ನು ಸೆಳೆಯುತ್ತಿವೆ. ಕುಷ್ಟಗಿ ಪಟ್ಟಣದ ಬಸವೇಶ್ವರ ವೃತ್ತ, ಕಾರ್ ಚಾಲಕರ ಮತ್ತು ಮಾಲೀಕರ ಸಂಘ, ಮಾರುತಿ ವೃತ್ತ, ಮಲ್ಲಯ್ಯ ವೃತ್ತ, ಹಳೆ ಬಜಾರ, ಪುರಸಭೆ ಮುಂಭಾಗ, ಎಪಿಎಂಸಿ ಸೇರಿದಂತೆ ಹಲವೆಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.350ಕ್ಕೂ ಅಧಿಕ ಗಣೇಶ ಪ್ರತಿಷ್ಠಾಪನೆ:
ಕುಷ್ಟಗಿ, ತಾವರಗೇರಾ ಹಾಗೂ ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಗಳಲ್ಲಿ 380ಕ್ಕೂ ಅಧಿಕ ಕಡೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ ಪೊಲೀಸರು ಬೀಗಿಬಂದೋಬಸ್ತ್ ಒದಗಿಸಲಾಗಿದೆ. ಹೆಚ್ಚುವರಿಯಾಗಿ ಗೃಹ ರಕ್ಷದ ದಳದ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.ಪಿಒಪಿ ಗಣೇಶ ಮೂರ್ತಿ ನಿಷೇಧಿಸಿದ್ದರಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮೂರ್ತಿ ಮಾಡಿದ್ದು ಉತ್ತಮ ವ್ಯಾಪಾರವಾಗಿದೆ.ಮಂಜುನಾಥ ಮುಂಡರಗಿ, ವೆಂಕೋಬಾ, ಮೂರ್ತಿ ತಯಾರಕರು