ನಾಳೆ ಲೋಕಸಭಾ ಚುನಾವಣೆಯ ಮತ ಎಣಿಕೆ

| Published : Jun 03 2024, 12:31 AM IST

ಸಾರಾಂಶ

ಕೋಲಾರ ನಗರದಲ್ಲಿ ೩೫೦ ಜನ ಪೊಲೀಸರು ೫೪ ಕಾವಲು ವಾಹನಗಳನ್ನು ನಿಯೋಜಿಸಲಾಗಿದೆ. ಇ.ವಿ.ಎಂ ಯಂತ್ರಗಳಿಗೆ ಸಿ.ಆರ್.ಪಿ.ಎಫ್ ಯೋಧರು ಭದ್ರತೆ ಒದಗಿಸಿದೆ. ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಲೋಕಸಭಾ ಚುನಾವಣಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ೨೦೬೦ ಮತಗಟ್ಟೆಗಳ ಸ್ಟ್ರಾಂಗ್‌ರೂಮ್ (ಕೊಠಡಿ)ಗಳನ್ನು ಜೂ.೪ರಂದು ಬೆಳಗ್ಗೆ ೭ ಗಂಟೆಗೆ ತೆಗೆಯಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.ನಗರದ ಜಿಲ್ಲಾಧಿಕಾರಿ ಕೋರ್ಟ್ ಹಾಲ್‌ನಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಸಂಬಂಧ ಅಭ್ಯರ್ಥಿಗಳೊಂದಿಗೆ ಸಭೆ ಮತ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಟ್ಟು ಮೂರು ರೀತಿಯ ಎಣಿಕೆ ಮಾಡಲಾಗುತ್ತದೆ ಎಂದು ಹೇಳಿದರು. ೧೫ ಕೌಂಟಿಂಗ್ ಹಾಲ್‌

ಬಂಗಾರಪೇಟೆ ರಸ್ತೆಯ ಬಸ್ ಸಂಚಾರವನ್ನು ಆ ದಿನ ನಿರ್ಬಂಧಿಸಲಾಗಿದೆ. ಮೆಥೋಡಿಸ್ಟ್ ಮತ್ತು ಜೂನಿಯರ್ ಕಾಲೇಜುಗಳ ಆವರಣದಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಅವಕಾಶ ಮಾಡಿದೆ. ಒಟ್ಟು ೧೫ ಕೌಂಟಿಂಗ್ ಹಾಲ್‌ಗಳನ್ನು ಆಯೋಜಿಸಿದೆ ಎಂದರು.ಗ್ರೌಂಡ್ ಪ್ಲೋರ್‌ನಲ್ಲಿ ಎರಡಕ್ಕೆ ಅವಕಾಶ ಮಾಡಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಿಗೆ ಬಣ್ಣ-ಬಣ್ಣದ ಗುರುತಿನ ಚೀಟಿ, ಸಮವಸ್ತ್ರ ಹಾಗೂ ೧೪ ಟೇಬಲ್‌ಗಳನ್ನು ನೀಡಲಾಗುತ್ತದೆ. ೬೧೫ ಮತಗಳು ಪೋಸ್ಟ್ ನಲ್ಲಿ ಬಂದಿದ್ದು, ಹಿರಿಯ ಮತ್ತು ಅಂಗವಿಕಲರು ಹಾಗೂ ಎಸೆನ್ಷಿಯಲ್ ವೋಟ್ ಸೇರಿ ೧೬೩೧ ಮತಗಳು ಚುನಾವಣೆ ಮುಂಚಿತವಾಗಿ ವೋಟಿಂಗ್ ಮಾಡಿದ್ದಾರೆ ಎಂದು ತಿಳಿಸಿದರು.

೩೫೦ ಪೊಲೀಸರ ನೇಮಕಎಸ್‌ಪಿ ಎಂ. ನಾರಾಯಣ ಮಾತನಾಡಿ, ನಗರದಲ್ಲಿ ೩೫೦ ಜನ ಪೊಲೀಸರು ೫೪ ಕಾವಲು ವಾಹನಗಳನ್ನು ನಿಯೋಜಿಸಲಾಗಿದೆ. ಇ.ವಿ.ಎಂ ಯಂತ್ರಗಳನ್ನು, ಸಿ.ಆರ್.ಪಿ.ಎಫ್ ಯೋಧರು ಭದ್ರತೆ ಒದಗಿಸಿದೆ. ಜೂ.೪ರ ಬೆಳಗ್ಗೆ ೬ ರಿಂದ ಜೂ.೫ರ ಸಂಜೆ ೬ ರವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಮದ್ಯಪಾನವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಎಡಿಸಿ ಡಾ.ಶಂಕರ್ ವಣಿಕ್ಯಾಳ್ ಇದ್ದರು.