ಸಾರಾಂಶ
- ಹುಣಗಿಯಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ
-------ಕನ್ನಡಪ್ರಭ ವಾರ್ತೆ ಹುಣಸಗಿ
ದೇಶ ಸಮಗ್ರ ರೀತಿಯಲ್ಲಿ ಅಭಿವೃದ್ಧಿಯಾಗಬೇಕಾದರೆ ಜನರು ಆರೋಗ್ಯವಂತರಾಗಿದ್ದಾಗ ಮಾತ್ರ ಸಾಧ್ಯ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ತಿಪ್ಪಣ್ಣ ನಾಯಕ ಹೇಳಿದರು.ಪಟ್ಟಣದ ಗ್ರಾಮದೇವತೆ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಯಾದಗಿರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮುಖ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷ ಇಲಾಖೆ ಆಶ್ರಯಲ್ಲಿ ಶ್ರೀನಿವಾಸಪೂರ ವಲಯಮಟ್ಟದ ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕು. ಈ ನಿಟ್ಟಿನಲ್ಲಿ ಗರ್ಭಿಣಿಯರು ಹಾಗೂ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಿದರೆ, ಅವರು ದೇಶದ ಆರೋಗ್ಯವಂತ ಪ್ರಜೆಗಳಾಗಲಿದ್ದಾರೆ ಎಂದರು.ಅಂಗನವಾಡಿ ಮೇಲ್ವಿಚಾರಕಿ ಜಯಶ್ರೀ ಪಾಟೀಲ್ ಮಾತನಾಡಿ, ಗರ್ಭಿಣಿಯರು ಹಾಗೂ ಬಾಣಂತಿಯರು ಪೌಷ್ಟಿಕವಾದ ಆಹಾರವನ್ನು ಸೇವಿಸಬೇಕು. ಆ ಮೂಲಕ ತಮ್ಮ ಹಾಗೂ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಸಿದ್ರಾಮಪ್ಪ ಮುದಗಲ್ ಮಾತನಾಡಿದರು. ಈ ವೇಳೆ ಮಕ್ಕಳ ಹುಟ್ಟುಹಬ್ಬ ಆಚರಣೆ, ಸೀಮಂತ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.ಡಾ. ಸಂಜಯ ಚಂದಾ, ರಾಜ್ಯ ರೈತ ಸಂಘದ ಉಪಾಧ್ಯಕ್ಷೆ ಮಹಾದೇವಿ ಬೇವಿನಾಳಮಠ, ಜಯಶ್ರೀ ಪಾಟೀಲ್, ಮಹಾದೇವಿ ಬೇವಿನಾಳಮಠ, ಶಾಂತ ದೇಸಾಯಿ, ರಂಗಮ್ಮ ಬಿರಾದಾರ್, ನೀಲಮ್ಮ ಹಿರೇಮಠ, ಅಕ್ಷತಾ ಬಿರಾದಾರ್, ರೇಖಾ ಪಡಶೆಟ್ಟಿ, ಗೌರಮ್ಮ ಸಿದ್ದಾಪೂರ, ಶ್ರೀದೇವಿ, ಈರಮ್ಮ ಕುಂಬಾರ, ರೇಣುಕಾ ಮೇಟಿ ಸೇರಿದಂತೆ ಇತರರಿದ್ದರು.
---------29ವೈಡಿಆರ್4
ಹುಣಸಗಿ ಪಟ್ಟಣದ ಗ್ರಾಮದೇವತೆ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಜರುಗಿತು.