ವಿದ್ಯಾವಂತ ಯುವಕರಿಂದ ದೇಶ ಅಭಿವೃದ್ಧಿ: ಶಾಸಕ ಸಿದ್ದು ಸವದಿ

| Published : Nov 24 2024, 01:45 AM IST

ಸಾರಾಂಶ

ಮಹಾಲಿಂಗಪುರದ ಕೆಇಬಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತವಾಗಿ ನಿರ್ಮಿಸುತ್ತಿರುವ ಕೊಠಡಿಗಳ ಭೂಮಿ ಪೂಜೆಯನ್ನು ಶಾಸಕ ಸಿದ್ದು ಸವದಿ ಮಾಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸರ್ಕಾರದ ಅನುದಾನದಿಂದ ನಿರ್ಮಾಣವಾಗುತ್ತಿರುವ ಶಾಲಾ ಕೊಠಡಿಗಳು ಅಚ್ಚುಕಟ್ಟಾಗಿ ಮತ್ತು ಸದೃಢವಾಗಿರಲಿ ಎಂದು ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.ಸ್ಥಳೀಯ ಕೆಇಬಿ ಕಾಲೋನಿಯಲ್ಲಿ ಜಿಪಂ ಬಾಗಲಕೋಟೆ, ಪಂಚಾಯತ್‌ ರಾಜ್ ಎಂಜಿನಿಯರಿಂಗ್‌ ವಿಭಾಗ, ಮುಧೋಳ ಪಂಚಾಯತ್‌ ರಾಜ್ ಎಂಜಿನಿಯರಿಂಗ್‌ ವಿಭಾಗದ ಆಶ್ರಯದಲ್ಲಿ ಅಂದಾಜು ₹27.80 ಲಕ್ಷ ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಹೆಚ್ಚುವರಿಯಾಗಿ 2 ಕೊಠಡಿ ನಿರ್ಮಾಣ ಕಾಮಾಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರ ಪ್ರತಿವರ್ಷ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಹಣ ವೆಚ್ಚ ಮಾಡುತ್ತಿದ್ದು, ಒಟ್ಟಿನಲ್ಲಿ ಯಾವುದೇ ವಿದ್ಯಾರ್ಥಿಗಳು ವಿದ್ಯಾರ್ಜನೆಯಿಂದ ವಂಚಿತರಾಗಬಾರದು ಎನ್ನುವುದು ಇದರ ಉದ್ದೇಶವಾಗಿದೆ. ವಿದ್ಯಾವಂತ ಯುವಕರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಇಂಥ ಸರ್ಕಾರಿ ಶಾಲೆಯಲ್ಲಿಯೇ ಎಲ್ಲರೂ ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದರು.

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ. ಇಲ್ಲಿನ ನುರಿತ ಶಿಕ್ಷಕರ ಭೋದನೆಯಿಂದ ಎಂಥ ಮಕ್ಕಳಾದರೂ ವಿದ್ಯಾವಂತರಾಗುತ್ತಾರೆ. ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹವನ್ನು ಎಲ್ಲ ತಂದೆ-ತಾಯಿಗಳು ಬಿಟ್ಟು, ಸರ್ಕಾರ ಎಲ್ಲ ತರಹದ ಸೌಲಭ್ಯಗಳನ್ನು ನೀಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎನ್ನುವುದನ್ನು ಅರಿತುಕೊಂಡು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸುವ ಮೂಲಕ ಸರ್ಕಾರದ ಈ ಯೋಜನೆ ಲಾಭ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷರಾದ ಶೀಲಾ ಬಾವಿಕಟ್ಟಿ ಮತ್ತು ವಿವಿಧ ಗಣ್ಯರಿಗೆ ಶಾಲಾ ಸಿಬ್ಬಂದಿಯವರು ಸನ್ಮಾನಿಸಿದರು.

ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಚನ್ನಬಸು ಯರಗಟ್ಟಿ, ಬಲವಂತಗೌಡ ಪಾಟೀಲ, ಸುನೀಲಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ, ಗಣ್ಯರಾದ ಈರಪ್ಪ ದಿನ್ನಿಮನಿ, ಶಂಕರಗೌಡ ಪಾಟೀಲ, ಜಿ.ಎಸ್.ಗೊಂಬಿ, ಚನ್ನಪ್ಪ ಪಟ್ಟಣಶೆಟ್ಟಿ, ಶ್ರೀಮಂತ ಹಳ್ಳಿ, ಮಹಾಲಿಂಗಪ್ಪ ಕುಳ್ಳೋಳ್ಳಿ, ರಾಜೇಶ ಬಾವಿಕಟ್ಟಿ, ವಿಜಯ ಸಬಕಾಳೆ, ಡಾ.ಅಶೋಕ ದಿನ್ನಮನಿ, ನಾಯಕ ಸರ್, ಮಾನಿಂಗ ಶಿವಣಗಿ, ಲಕ್ಷ್ಮಣ ಮಾಂಗ, ಶಿವಬಸು ಗೌಂಡಿ, ಮಾದೇವ ಸಾವಂತ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಶಿದರ ಹಳ್ಳಿ, ಮುಖ್ಯಗುರುಗಳಾದ ರೋಹಿಣಿ ಸುಣದೋಳಿ ಸೇರಿದಂತೆ ಹಲವರು ಇದ್ದರು.