ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ: ಪ್ರತಿಭೆಗಳು ಹೆಚ್ಚಿದಷ್ಟೂ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಪ್ರತಿಭಾವಂತ ಮಕ್ಕಳು ಭವಿಷ್ಯದ ಬಲಿಷ್ಠ ಭಾರತದ ನಿರ್ಮಾಣದ ಶಿಲ್ಪಿಗಳಾಗಲಿದ್ದಾರೆ. ಮಕ್ಕಳು ಈ ನೆಲದ ಬೌದ್ಧಿಕ ಆಸ್ತಿ ಎಂದು ಬನಹಟ್ಟಿ ಉದ್ಯಮಿ ಶಂಕರ ಜುಂಜಪ್ಪನವರ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ:
ಪ್ರತಿಭೆಗಳು ಹೆಚ್ಚಿದಷ್ಟೂ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಪ್ರತಿಭಾವಂತ ಮಕ್ಕಳು ಭವಿಷ್ಯದ ಬಲಿಷ್ಠ ಭಾರತದ ನಿರ್ಮಾಣದ ಶಿಲ್ಪಿಗಳಾಗಲಿದ್ದಾರೆ. ಮಕ್ಕಳು ಈ ನೆಲದ ಬೌದ್ಧಿಕ ಆಸ್ತಿ ಎಂದು ಬನಹಟ್ಟಿ ಉದ್ಯಮಿ ಶಂಕರ ಜುಂಜಪ್ಪನವರ ಹೇಳಿದರು.ಬನಹಟ್ಟಿಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ನೇಕಾರಿಕೆ ಪ್ರದೇಶದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ಸಾಧಕ ವಿದ್ಯಾರ್ಥಿಗಳ ಬಳಗವೂ ಹೆಚ್ಚುತ್ತಿದೆ. ಎಲ್ಲರೂ ಡಿಸಿ, ಎಸಿ, ವೈದ್ಯ, ಅಭಿಯಂತರ ಆಗಲಾಗದು, ಸರ್ಕಾರದ ವಿವಿಧ ಹಂತಗಳಲ್ಲಿನ ಇಲಾಖೆಗಳು, ಖಾಸಗಿ ವಲಯದ ಉದ್ದಿಮೆಗಳು ಮತ್ತು ನಾಡಿಗೆ ಅನ್ನ ಹಾಕುವ ಕೃಷಿಕರಾಗಿಯೂ ಸೇವೆ ಸಲ್ಲಿಸಲು ಸಾಧ್ಯವಿದೆ. ಅನುತ್ತೀರ್ಣರಾದ ಮಕ್ಕಳು ಪಟ್ಟು ಬಿಡದೇ ಅಧ್ಯಯನ ಮಾಡಿ ಉತ್ತೀರ್ಣರಾಗುವ ಮೂಲಕ ಕುಟುಂಬಕ್ಕೆ, ನಗರಕ್ಕೆ ಆಸ್ತಿಯಾಗಬೇಕು. ನಗರದ ಹಿರಿಯರ ಪ್ರೋತ್ಸಾಹವೂ ಎಲ್ಲ ವಿದ್ಯಾರ್ಥಿಗಳ ಮೇಲಿದೆ ಎಂದರು.
ಸಹಕಾರಿ ಧುರೀಣ ಭೀಮಶಿ ಮಗದುಮ್ಮ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಬಡತನ-ಸಿರಿವಂತಿಕೆ ಎಂಬ ಬೇಧ-ಭಾವವಿಲ್ಲವೆನ್ನುವುದಕ್ಕೆ ಈ ಸಾಧಕ ವಿದ್ಯಾರ್ಥಿಗಳೇ ಸಾಕ್ಷಿ. ಅನುತ್ತೀರ್ಣರಾದ ಮಕ್ಕಳು ಕೀಳರಿಮೆ ಬೆಳೆಸಿಕೊಳ್ಳದೆ ಪರ್ಯಾಯ ಪರೀಕ್ಷೆಯಲ್ಲಿ ಪಾಸಾಗಿ ದೇಶದ ಆಸ್ತಿಯಾಗುವಂತೆ ಸಲಹೆ ನೀಡಿದರು.ಸುರೇಶ ಕೋಲಾರ, ಪಂಡಿತಪ್ಪ ಪಟ್ಟಣ, ಬಸವರಾಜ ಪುಟಾಣಿ, ಆನಂದ ಪಟ್ಟಣ, ಶಿವಕುಮಾರ ಜುಂಜಪ್ಪನವರ, ಚನಾಳ ಸೇರಿದಂತೆ ಇತರರು ಇದ್ದರು.