ಕೋಡಿಹಳ್ಳಿ ಸರ್ಕಾರಿ ಪದವಿ ಕಾಲೇಜು ವತಿಯಿಂದ ತಟ್ಟಿಗುಪ್ಪೆ ಗ್ರಾಮದಲ್ಲಿ ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರಕ್ಕೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ ಟಿ ವೆಂಕಟೇಶ್ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕನಕಪುರ
ಕೋಡಿಹಳ್ಳಿ ಸರ್ಕಾರಿ ಪದವಿ ಕಾಲೇಜು ವತಿಯಿಂದ ತಟ್ಟಿಗುಪ್ಪೆ ಗ್ರಾಮದಲ್ಲಿ ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರಕ್ಕೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ ಟಿ ವೆಂಕಟೇಶ್ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಭಾರತದ ಅಭಿವೃದ್ಧಿ ಅಡಗಿರುವುದು ಗ್ರಾಮೀಣ ಪ್ರದೇಶದ ಅಭಿವೃದ್ಧಿಯಿಂದ ಮಾತ್ರ, ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕೆಂದರೆ ಪ್ರತಿ ಗ್ರಾಮವೂ ಸ್ವಾವಲಂಬಿ ಗ್ರಾಮವಾಗಬೇಕು, ಗ್ರಾಮೀಣ ಸ್ವಚ್ಛತೆ, ನೈರ್ಮಲ್ಯ ಇವುಗಳೇ ಗ್ರಾಮದ ಮೂಲ ಆಶಯಗಳು ಎಂದರು.
ಎನ್ಎಸ್ಎಸ್ ಶಿಬಿರವನ್ನು ಹೋಬಳಿಯ ಗ್ರಾಮದಲ್ಲಿ ಹಮ್ಮಿಕೊಂಡಿರುವುದು ಬಹಳ ಸಂತೋಷದ ವಿಷಯವಾಗಿದ್ದು, ಮಕ್ಕಳು ಗ್ರಾಮದಲ್ಲಿ ನಿರ್ವಹಿಸುವ ಸೇವಾ ಚಟುವಟಿಕೆಗಳಿಗೆ ಗ್ರಾಮಸ್ಥರು ಸಹಕರಿಸಬೇಕೆಂದು ಕೋರಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮುನಿ ಹುಚ್ಚೇಗೌಡ ಮಾತನಾಡುತ್ತ, ರಾಷ್ಟ್ರದ ಅಭಿವೃದ್ಧಿ ನಿರ್ಧಾರವಾಗುವುದೇ ಗ್ರಾಮೀಣ ಮಟ್ಟದಿಂದ, ಭಾರತವು ಹಳ್ಳಿಗಳಿಂದ ಕೂಡಿದ ರಾಷ್ಟ್ರ, ಇಲ್ಲಿ ಹಳ್ಳಿಗಳ ಅಭಿವೃದ್ಧಿಯಾದರೆ ರಾಷ್ಟ್ರ ಅಭಿವೃದ್ಧಿಯಾದಂತೆ. ಅದಕ್ಕಾಗಿಯೇ ಸ್ಥಳೀಯ ಸರ್ಕಾರದ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿರುವುದಾಗಿ ತಿಳಿಸಿ, ಮಕ್ಕಳ ಸೇವಾ ಚಟುವಟಿಕೆಗಳನ್ನು ಮನಃಪೂರ್ವಕವಾಗಿ ಶ್ಲಾಘಿಸಿದರು.
ಕಾಲೇಜಿನ ಸಿಡಿಸಿ ಸದಸ್ಯ ರಘು ಮಾತನಾಡಿ, 1 ವಾರದ ಈ ಶಿಬಿರದಲ್ಲಿನ ಎಲ್ಲಾ ಸ್ವಯಂ ಸೇವಕರಿಗೂ ಶುಭ ಹಾರೈಸಿದರು.ಪಿಡಿಒ ರಘು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮನೆ ಮಾಡಿರುವ ಜಾತಿ ಪದ್ಧತಿ, ಅಂಧ ಶ್ರದ್ಧೆ, ಮೂಢನಂಬಿಕೆ, ಬಾಲ್ಯವಿವಾಹ ಸೇರಿದ ಸಮಾಜದಲ್ಲಿನ ಅನಿಷ್ಠ ಪದ್ಧತಿಗಳು ನಿರ್ನಾಮವಾದಾಗ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ, ಪ್ರತಿ ಗ್ರಾಮದ ಶುಚಿತ್ವ ಕಾರ್ಯಕ್ಕೂ ಜನತೆ ಪಂಚಾಯಿತಿಗಳನ್ನೇ ಅವಲಂಬಿಸದೆ ವೈಯುಕ್ತಿಕವಾಗಿ ನೆರವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮತ್ತೊಬ್ಬ ಸಂಘಟಕ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಜೇಗೌಡ ಮಾತನಾಡಿ, ನಮ್ಮ ಗ್ರಾಮದಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.ಈ ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರ ಆಯೋಜಿಸಲು ಕಾಲೇಜಿನ ವತಿಯಿಂದ ನನ್ನನ್ನು ಮೊದಲು ಸಂಪರ್ಕಿಸಿದಾಗ ಅದಕ್ಕೆ ಅನುಮತಿ ನೀಡಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ನಮ್ಮ ಗ್ರಾಮ ಹೋಬಳಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಗ್ರಾಮವಾಗಿದ್ದು, ಒಗ್ಗಟ್ಟಿನ ಮನೋಭಾವದಿಂದ ಎಲ್ಲರೂ ಈ ಸೇವಾ ಮನೋಭಾವಕ್ಕೆ ನೆರವಾಗುತ್ತೇವೆ. ಜಗತ್ತಿನ ಎಲ್ಲಾ ಅರ್ಥ ವ್ಯವಸ್ಥೆಗಳು ಅವುಗಳ ಅಭಿವೃದ್ಧಿ ಅಡಗಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಹಾಗಾಗಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಅತ್ಯವಶ್ಯಕ ಎಂದರು.ಇದೇ ವೇಳೆ ರಾಜೇಗೌಡರು ಧ್ವಜಾರೋಹಣ ನಡೆಸಿಕೊಟ್ಟರು,
ಮುಖ್ಯ ಅತಿಥಿಗಳಾಗಿ ಕೋಡಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಕೋಡಿಹಳ್ಳಿ ಹೋಬಳಿಯ ಗ್ರಾಮಗಳು ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದು ಇದಕ್ಕೆ ಮೂಲ ಕಾರಣ ಹೋಬಳಿ ಜನತೆ ಹಾಗೂ ನಾಯಕತ್ವ ಹಾಗೂ ಸ್ಥಳೀಯ ಸರ್ಕಾರಗಳ ಮುಂದಾಳತ್ವ ಎಂದರು.ಸಮಾರಂಭದಲ್ಲಿ ಶ್ರೀ ಶಿವಲಿಂಗೇಗೌಡ ( ಕಾಂಟ್ರ್ಯಾಕ್ಟರ್), ಪಂಚಾಯಿತಿ ನೌಕರ ಕೃಷ್ಣ, ಬಿಲ್ ಕಲೆಕ್ಟರ್ ಮುನಿಚಿಕ್ಕಯ್ಯ, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಅಧ್ಯಾಪಕ ಡಾ.ಮಹೇಶ್, ಎನ್ಎಸ್ಎಸ್ ಅಧಿಕಾರಿ ಪ್ರೊ. ಅವಿನಾಶ್ ಹಾಗೂ ಸಹಾಯಾಧಿಕಾರಿಯದ ಪ್ರೊ. ಪ್ರಿಯಾಂಕ, ಗ್ರಾಮಸ್ಥರಾದ ಶಿವರುದ್ರಯ್ಯ, ಶಿವಣ್ಣ ಪುಟ್ಟರಾಜು, ಚಿಕ್ಕೀರೇಗೌಡ, ಚನ್ನೇಗೌಡ, ಕುಳ್ಳಣ್ಣ, ರತ್ನಮ್ಮ, ಪುಟ್ಟಮ್ಮ ದೇವಮ್ಮ, ಪ್ರೊ. ನಳಿನಾದೇವಿ, ಪ್ರೊ ರಾಧಾಕೃಷ್ಣ, ಮರಿಸ್ವಾಮಿ, ಮಹೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.