ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬಾಳಿದರೆ ದೇಶ ಹಾಗೂ ರಾಜ್ಯ ಪ್ರಗತಿ ಹೊಂದುವುದರ ಜೊತೆಗೆ ಮಾದರಿಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಾಗೋಣ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರರಾದ ಚೇತನ್ ಅಹಿಂಸಾ ಕರೆ ನೀಡಿದರು.ಪಟ್ಟಣದ ಗೌತಮ್ ಇಂಗ್ಲೀಷ್ ಪಬ್ಲಿಕ್ ಸ್ಕೂಲ್ ನಲ್ಲಿ ‘ಸಮಾನತವಾದಿಯ ಪ್ರಯಾಣ’ ಕುರಿತು ಸಾಮಾಜಿಕ ಹೋರಾಟಗಾಗರು ಹಾಗೂ ಸಂಘ-ಸಂಸ್ಥೆಗಳು ಆಯೋಜಿಲಾಗಿದ್ದ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧ್ವನಿ ಇಲ್ಲದ, ನೋವುಂಡ ಜನರಿಗೆ ಧ್ವನಿಯಾಗಿ, ಶ್ರಮಜೀವಿ, ಬಡವರ ಹಾಗೂ ಶೋಷಿತ ವರ್ಗಗಳ ಪರವಾಗಿ ನ್ಯಾಯ ಮತ್ತು ಸಮಾನತೆ ಕಲ್ಪಿಸಲು ಸಮಾನತವಾದಿಯ ಪಯಣ ಮಹತ್ತರ ಕಾರ್ಯವಾಗಿದೆ. ಸಮಾಜದಲ್ಲಿ ಸಮಾನತೆಗಾಗಿ ಹೋರಾಟ ಮಾಡಿದ ಎಲ್ಲ ಚಳುವಳಿಗಳನ್ನು ಒಗ್ಗೂಡಿಸುವ ಕಾರ್ಯ ಜರೂರು ಚಾಲ್ತಿಯಾಗಬೇಕಿದೆ ಈ ದಿಸೆಯಲ್ಲಿ ನಿಸ್ವಾರ್ಥ ಸಹಿತ ಪ್ರಮಾಣಿಕ ಸೇವೆ ಸಲ್ಲಿಸಲಾಗುತ್ತಿದೆ ವಿವಿಧ ರಂಗದಲ್ಲಿ ಸಮಾಜದ ಬದಲಾವಣೆ ಮತ್ತು ಸಮಾನತೆ, ಘನತೆ ಗೌರವ, ಹಕ್ಕು, ಅಧಿಕಾರಗಳಿಗಾಗಿ ನಮ್ಮ ಜೊತೆ ಕೈಜೋಡಿಸಿ ಸಹಕಾರ ನೀಡಬೇಕು ಎಂದರು.ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಾನಮಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಧಕ್ಕಬೇಕಿದೆ. ಜಾತಿ ಲಿಂಗ ಭೇದ, ಉದ್ಯೋಗ, ಭಾಷೆ, ಬಂಡವಾಳ ವ್ಯವಸ್ಥೆ, ಜನ ವಿರೋಧಿ ಕಾಯ್ದೆ, ಬ್ರಷ್ಟಚಾರ ಸೇರಿದಂತೆ ಅಸಮಾನತೆ ವಿರುದ್ಧ ಧ್ವನಿ ಎತ್ತಬೇಕಿದ್ದು ನ್ಯಾಯ ಒದಗಿಸುವ ಕೆಲಸವಾಗಬೇಕಿದೆ. ಶೈಕ್ಷಣಿಕ, ಆರೋಗ್ಯ ಹಾಗೂ ಪರಿಸರ ಜೊತೆಗೆ ಅಭಿವೃದ್ಧಿ ಕುರಿತು ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನೆಡೆದು ಸಂವಿಧಾನ ಆಶಯ ಈಡೇರಿಸಬೇಕಿದೆ. ಡಾ.ಬಿ.ಆರ್. ಅಂಬೇಡ್ಕರ್, ಗೌತಮ ಬುದ್ಧ, ಜಗಜ್ಯೋತಿ ಕ್ರಾಂತಿಕಾರಿ ಬಸವಣ್ಣ ಸೇರಿದಂತೆ ಜ್ಯೊತಿ ಭಾಫುಲೆ, ಸಾವಿತ್ರಿಭಾ ಫುಲೆ, ಪೆರಿಯಾರ್, ಕಾನ್ಶಿರಾಂ, ಕುವೆಂಪು ಹಾಗೂ ಪೂರ್ವಜರ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಚಳುವಳಿಯನ್ನು ಒಗ್ಗೂಡಿಸಿ ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.
ಗೌತಮ್ ಇಂಗ್ಲೀಷ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳನ್ನು ಉದ್ದೇಶಿ ನಟ ಚೇತನ್ ಅಹಿಂಸಾ ಮಾತನಾಡಿ, ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಇದಕ್ಕೆ ಪ್ರಯತ್ನ, ಶ್ರಮ ಜೊತೆಗೆ ಅಭ್ಯಾಸ ಮುಖ್ಯವಾಗಲಿದೆ. ಗುರಿಯ ಕನಸ್ಸು ಕಾಣಿಸಿದರೆ ಸಾಲದು ಅದನ್ನು ನೆನಸು ಮಾಡಿ ಸಮಾಜಮುಖಿ ಕೆಲಸ ಮಾಡುತ್ತ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಶೈಕ್ಷಣಿಕ ಪ್ರಗತಿ ಜೊತೆಗೆ ಸಮಾನತವಾದಿಗಳಾಗಿ ಸಾಗಬೇಕು ಎಂದರು.ಸಮಾನತೆ ಹಾದಿಯ ಪಯಣ ಕುರಿತು ಪ್ರೊಜೆಕ್ಟರ್ ಮೂಲಕ ಸಮಾಜದ ಬದಲಾವಣೆ ಹಾಗೂ ಸಮಾನತೆ ಕುರಿತು ಹಲವು ಮಾಹಿತಿಯನ್ನು ಚೇತನ್ ಅಹಿಂಸಾ ತಿಳಿಸಿಕೊಟ್ಟರು.
ಗೌತಮ್ ಇಂಗ್ಲೀಷ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ರವೀಂದ್ರ, ಮುಖ್ಯೋಪಾಧ್ಯಯರಾದ ಲಿಂಗರಾಜು, ಹನೂರು ಪಟ್ಟಣ ಪಂಚಾಯಿತಿ ಸದಸ್ಯರಾದ ಮಹೇಶ್, ಮಹೇಶ್ ನಾಯ್ಕ್, ಯುವ ಮುಖಂಡರಾದ ನಾಗೇಂದ್ರಪ್ರಸಾದ್, ರಾಜೇಶ್, ಶಾಗ್ಯ ನಂದೀಶ್, ಶಾಕ್ಯ ಸುಂದರ್, ಲಿಂಗರಾಜು, ಶಿವಕುಮಾರ್, ಪ್ರಭು, ಶಿವು, ಮಹೇಂದ್ರ, ಕುಮಾರ್, ಅಭಿ ಸೇರಿದಂತೆ ರೈತ ಮುಖಂಡರು, ಕನ್ನಡಪರ ಹೋರಾಟಗಾರರು, ಸಾಮಾಜಿಕ ಹೋರಾಟಗಾರರು ಉಪಸ್ಥಿತರಿದ್ದರು.