ಬೊಮ್ಮಕ್ಕನಹಳ್ಳಿಯಲ್ಲಿ ದಂಪತಿ ಹತ್ಯೆ

| Published : Sep 21 2024, 01:47 AM IST

ಸಾರಾಂಶ

ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾದ ಘಟನೆ ಚಿತ್ರದುರ್ಗ ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಹನುಮಂತಪ್ಪ (46), ಪತ್ನಿ ತಿಪ್ಪಮ್ಮ (42) ಕೊಲೆಗೀಡಾದವರು. ಗುರುವಾರ ಸಂಜೆ ಜಮೀನಿಗೆ ಹೋದವರು ಮರಳಿ ವಾಪಾಸ್ಸು ಬಂದಿಲ್ಲ. ಹತ್ಯೆಗೆ ಸಂಬಂಧಿಸಿದಂತೆ ಮೃತರ ಪುತ್ರಿ ಹರ್ಷಿತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತನ್ನ ಪತಿ ಮಂಜುನಾಥ್ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾಳೆ.

ಚಿತ್ರದುರ್ಗ: ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾದ ಘಟನೆ ಚಿತ್ರದುರ್ಗ ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಹನುಮಂತಪ್ಪ (46), ಪತ್ನಿ ತಿಪ್ಪಮ್ಮ (42) ಕೊಲೆಗೀಡಾದವರು. ಗುರುವಾರ ಸಂಜೆ ಜಮೀನಿಗೆ ಹೋದವರು ಮರಳಿ ವಾಪಾಸ್ಸು ಬಂದಿಲ್ಲ. ಹತ್ಯೆಗೆ ಸಂಬಂಧಿಸಿದಂತೆ ಮೃತರ ಪುತ್ರಿ ಹರ್ಷಿತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತನ್ನ ಪತಿ ಮಂಜುನಾಥ್ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾಳೆ. ವರ್ಷದ ಹಿಂದಷ್ಟೇ ಮಂಜುನಾಥ್ ಜತೆ ಹರ್ಷಿತಾ ಮದುವೆ ಆಗಿತ್ತು. ಮದುವೆ ಆದಾಗಿನಿಂದ ಹರ್ಷಿತಾ ಮೇಲೆ ಮಂಜುನಾಥ್ ಮತ್ತು ಕುಟುಂಬಸ್ಥರು ಆಗಾಗ ಗಲಾಟೆ ಮಾಡುತ್ತಿದ್ದರು. ಮಂಜುನಾಥ್ ಕುಡಿದು ಬಂದು ನಿತ್ಯ ಹರ್ಷಿತಾ ಜತೆ ಗಲಾಟೆ ಮಾಡುತ್ತಿದ್ದ. ತಿಂಗಳ ಹಿಂದಷ್ಟೇ ತಾಯಿ ತಿಪ್ಪಮ್ಮ ಹರ್ಷಿತಾಳನ್ನು ತವರು ಮನೆಗೆ ಕರೆ ತಂದಿದ್ದರು. ದ್ವೇಷದಿಂದ ತಂದೆ ಹನುಮಂತಪ್ಪ, ತಾಯಿ ತಿಪ್ಪಮ್ಮಳ ಕೊಲೆ ಮಡಲಾಗಿದೆ. ಮಂಜುನಾಥ್, ಸಹೋದರ ರಘು, ಸಂಬಂಧಿ ಮಲ್ಲಿಕಾರ್ಜುನ, ಈ ಕೃತ್ಯ ವೆಸಗಿದ್ದಾರೆಂದು ತುರುವನೂರು ಠಾಣೆ ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.