ದಂಪತಿಗಳು ಸಾಮರಸ್ಯದಿಂದ ಜೀವನ ಸಾಗಿಸಿ

| Published : Apr 19 2025, 12:39 AM IST

ಸಾರಾಂಶ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟು, ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ನವಜೋಡಿಗಳು ಜೀವನದಲ್ಲಿ ಸಿಹಿ-ಕಹಿಯನ್ನು ಸಮನಾಗಿ ಸ್ವೀಕರಿಸಬೇಕು.

ಕೊಪ್ಪಳ (ಯಲಬುರ್ಗಾ):

ದಂಪತಿಗಳು ಬದುಕಿನಲ್ಲಿ ಸಾಮರಸ್ಯದಿಂದ ಬಾಳಬೇಕು ಎಂದು ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

ಯಲಬುರ್ಗಾ ತಾಲೂಕಿನ ಜಿ. ಜರಕುಂಟಿ ಗ್ರಾಮದಲ್ಲಿ ಜರುಗಿದ ಶರಣಬಸವೇಶ್ವರ 28ನೇ ವರ್ಷದ ಜಾತ್ರೆ ಮಹೋತ್ಸವ ಹಾಗೂ 9 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟು, ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ನವಜೋಡಿಗಳು ಜೀವನದಲ್ಲಿ ಸಿಹಿ-ಕಹಿಯನ್ನು ಸಮನಾಗಿ ಸ್ವೀಕರಿಸಬೇಕು. ಉತ್ತಮ ಬದುಕು ರೂಪಿಸಿಕೊಂಡು ಹೋದಾಗ ಯಶಸ್ಸು ಸಾಧ್ಯವಿದೆ. ಧರ್ಮದ ಕಾರ್ಯಗಳಿಗೆ ಪ್ರತಿಯೊಬ್ಬರೂ ದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಯುವ ಮುಖಂಡ ಬಾಲಚಂದ್ರ ಸಾಲಭಾವಿ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರಿಗೆ ಹೆಚ್ಚು ಅನುಕೂಲ. ಕಲಬುರ್ಗಿ ಶರಣಬಸವೇಶ್ವರ ಅವರ ತತ್ವ, ಆದರ್ಶಗಳು ಮನುಕುಲಕ್ಕೆ ಪೂರಕ. ನೂತನ ದಂಪತಿಗಳು ಹಾಲು ಜೇನಿನಂತೆ ಬದುಕಬೇಕು ಎಂದರು.

ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿದವು. ಗ್ರಾಮದಲ್ಲಿ ಶರಣಬಸವೇಶ್ವರ ಭಾವಚಿತ್ರ ಮೂರ್ತಿ, ಮಹಿಳೆಯರಿಂದ ಕುಂಭ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಲಘು ರಥೋತ್ಸವ:

ಗ್ರಾಮದ ಶ್ರೀ ಶರಣಬಸವೇಶ್ವರ ಜಾತ್ರೆ ನಿಮಿತ್ತ ಲಘು ರಥೋತ್ಸವ ಜರುಗಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಇಟಗಿಯ ಭೂಕೈಲಾಸ ಮೇಲು ಗದ್ದುಗೆ ಮಠದ ಶ್ರೀ ಗುರುಶಾಂತವೀರ ಸ್ವಾಮೀಜಿ, ಮಳೆರಾಜೇಂದ್ರ ಮಠ ಮೋರನಾಳದ ಜಗನ್ನಾಥ ಮಹಾಸ್ವಾಮೀಜಿ, ದಮ್ಮೂರ ಶ್ರೀ ಭೀಮಾಂಬಿಕಾ ದೇವಿ ಒಡೆಯರಾದ ಹನುಮಂತಪ್ಪ ಧರ್ಮರಮಠ, ಕೋನಾಪುರ ಮಠದ ಕಲ್ಲಯ್ಯಸ್ವಾಮಿಗಳು, ಚಿಕ್ಕಬನ್ನಿಗೋಳದ ಪ್ರವಚನಕಾರ ಶಿವಾನಂದಸ್ವಾಮಿ, ಶಿವಾನಂದ ಮಠ ಮಕ್ಕಳ್ಳಿ ಪುರಾಣದ ಪ್ರವಚನಕಾರ ಅಲಿಸಾಬ ನದಾಫ್, ತಬಲವಾದಕ ಚಂದ್ರಶೇಖರಪ್ಪ, ಗ್ರಾಪಂ ಸದಸ್ಯ ಬಸವರಾಜ ಹಳ್ಳಿಕೇರಿ, ಗೀತಾ ಯಮನೂರಪ್ಪ ಗಾಣಧಾಳ, ಪತ್ರಕರ್ತ ಮಲ್ಲಪ್ಪ ಮಾಟರಂಗಿ, ಮುಖಂಡರಾದ ಕಳಕಯ್ಯ ಹಿರೇಮಠ, ಮಹೇಶ ಜಕ್ಕಲಿ, ಭೀಮನಗೌಡ ಎಂ. ಬಿಸನಾಳ, ನಿಂಗಪ್ಪ ಹಳ್ಳಿಕೇರಿ ನೀಲಪ್ಪ ಜಕ್ಕಲಿ, ಶರಣಗೌಡ ಮಾಲಿಪಾಟೀಲ್, ಶಿವನಗೌಡ ಗೌಡ್ರು, ಮುತ್ತಪ್ಪ ಜಕ್ಕಲಿ, ಕನಕಪ್ಪ ತಳವಾರ, ಫಕೀರಪ್ಪಸಾಬ ನದಾಫ್ ಇದ್ದರು.