ಅರುಣ್ ಪುತ್ತಿಲ ಬಗ್ಗೆ ಮಾನಹಾನಿಕಾರಕ ಸುದ್ದಿ ಪ್ರಕಟಿಸದಂತೆ ಕೋರ್ಟ್‌ ತಡೆಯಾಜ್ಞೆ

| Published : Aug 31 2024, 01:41 AM IST

ಅರುಣ್ ಪುತ್ತಿಲ ಬಗ್ಗೆ ಮಾನಹಾನಿಕಾರಕ ಸುದ್ದಿ ಪ್ರಕಟಿಸದಂತೆ ಕೋರ್ಟ್‌ ತಡೆಯಾಜ್ಞೆ
Share this Article
  • FB
  • TW
  • Linkdin
  • Email

ಸಾರಾಂಶ

ಅರುಣ್ ಪುತ್ತಿಲ ಅವರ ಬಗ್ಗೆ ಯಾವುದೇ ಮಾನಹಾನಿಕಾರಕ ವರದಿ ಪ್ರಕಟಿಸದಂತೆ ಬೆಂಗಳೂರಿನ ೭ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ತನ್ನ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಅರುಣ್ ಪುತ್ತಿಲ ಅವರ ಬಗ್ಗೆ ಯಾವುದೇ ಮಾನಹಾನಿಕಾರಕ ವರದಿ ಪ್ರಕಟಿಸದಂತೆ ಬೆಂಗಳೂರಿನ ೭ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ವಿಧಿಸಿದೆ.

ಅರುಣ್ ಪುತ್ತಿಲ ಅವರು ತಮ್ಮ ವಿರುದ್ದ ಮಾನಹಾನಿಕರ ವರದಿ ಪ್ರಕಟಿಸದಂತೆ ಕೋರ್ಟ್ ಮೆಟ್ಟಿಲೇರಿದ್ದರು. ಅರುಣ್‌ ಕುಮಾರ್‌ ಪುತ್ತಿಲ ಬಗ್ಗೆ ಯಾವುದೇ ಮಾನ ಹಾನಿಕಾರಕ ವಿಷಯ, ಸುದ್ದಿ, ಲೇಖನ, ಪ್ರಕಟಣೆಗಳು, ಸಂಭಾಷಣೆಯನ್ನು ಒಳಗೊಂಡಿರುವ ಹಾನಿ ಉಂಟು ಮಾಡುವ ವಿಷಯಗಳನ್ನು ಪ್ರಸಾರ ಮಾಡುವುದನ್ನು ನಿರ್ಬಂಧಿಸಿ ಕೋರ್ಟ್‌ ಆದೇಶ ಹೊರಡಿಸಿದೆ. ವೈರಲ್ ಆಗಿರುವ ಆಡಿಯೋದ ಬಗ್ಗೆ ಈ ಹಿಂದೆ ಪತ್ರಿಕಾ ಹೇಳಿಕೆ ನೀಡಿದ್ದ ಅರುಣ್ ಪುತ್ತಿಲ ಅವರು ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ತಾನು ಕಾನೂನು ಚೌಕಟ್ಟಿನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದರು. ಇದೀಗ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದಾರೆ. ಜೀವ ಬೆದರಿಕೆ ಆರೋಪ: ಮಹಿಳೆ ದೂರು

ಪುತ್ತೂರು: ಭಾರೀ ವೈರಲ್ ಆದ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಗೆಳತಿಯದ್ದು ಎನ್ನಲಾದ ಸಂಭಾಷಣೆಯ ಆಡಿಯೋಗೆ ಸಂಬಂಧಿಸಿ ಮಹಿಳೆಯು ತನಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಪುತ್ತೂರು ನಗರ ಠಾಣೆಗೆ ಗುರುವಾರ ತಡರಾತ್ರಿ ದೂರು ನೀಡಿದ್ದಾರೆ.

ಅರುಣ್ ಪುತ್ತಿಲ ಅವರೊಂದಿಗೆ ಸಂಭಾಷಣೆ ನಡೆಸಿದವರು ಎನ್ನಲಾದ ಮಹಿಳೆ ಮೂಲತಃ ಶಿರಸಿ ಮೂಲದವರಾಗಿದ್ದು, ಪ್ರಸ್ತುತ ಪುತ್ತೂರಿನ ಸಾಮೆತ್ತಡ್ಕದಲ್ಲಿ ವಾಸ್ತವ್ಯ ಇದ್ದಾರೆ.

ಬೆದರಿಕೆಗೆ ಸಂಬಂಧಿಸಿ ಆರೋಪ ಮಾಡಿರುವ ಮಹಿಳೆ ಗುರುವಾರ ರಾತ್ರಿ ಪುತ್ತಿಲ ಪರಿವಾರದ ಮಾಜಿ ಸದಸ್ಯ ರಾಜಾರಾಂ ಭಟ್ ಅವರೊಂದಿಗೆ ಪುತ್ತೂರು ನಗರ ಠಾಣೆಗೆ ಆಗಮಿಸಿದ್ದರು. ಆಡಿಯೋ ಸಂಬಂಧ ಹಲವಾರು ಬೆದರಿಕೆ ಕರೆಗಳು ಬರುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಮಹಿಳೆ ಪೊಲೀಸ್ ಠಾಣೆಯಿಂದ ಮನೆಗೆ ಹಿಂತಿರುಗಿದಾಗ ಪೊಲೀಸರು ಭದ್ರತೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.