ಸಾರಾಂಶ
ಚಿರತೆ ದಾಳಿ ಮಾಡಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು, ಕರು ಹಾಗೂ ಎರಡು ಮೇಕೆಗಳನ್ನು ಕೊಂದು ಪರಾರಿಯಾಗಿರುವ ಘಟನೆ ಪಾಂಡವಪುರ ತಾಲೂಕಿನ ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಚಿರತೆ ದಾಳಿ ಮಾಡಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು, ಕರು ಹಾಗೂ ಎರಡು ಮೇಕೆಗಳನ್ನು ಕೊಂದು ಪರಾರಿಯಾಗಿರುವ ಘಟನೆ ತಾಲೂಕಿನ ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.ರೈತ ಕೃಷ್ಣೇಗೌಡ, ಚಂದ್ರಶೇಖರ್ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಹಸುವಿನ ಕೊಟ್ಟಿಗೆಗೆ ದಾಳಿ ನಡೆಸಿರುವ ಚಿರತೆ ಹಸು ಮತ್ತು ಕರು, ಮೇಕೆಯ ಕುತ್ತಿಗೆ ಭಾಗವನ್ನು ಹಿಡಿದು ಕೊಂದಿದೆ. ಹಸುವಿನ ಕರುವನ್ನು ಕೊಟ್ಟಿಗೆಯಿಂದ ಹೊರಗಡೆ ಎಳೆದುಕೊಂಡು ಹೋಗಿದೆ. ಹಸು, ಕರುಗಳು ಕಿರುಚಾಟವನ್ನು ಕೇಳಿ ಮನೆಯವರು ಹೊರಬರುತ್ತಿದ್ದಂತೆಯೇ ಚಿರತೆ ಸ್ಥಳದಿಂದ ಪರಾರಿಯಾಗಿದೆ.
ಘಟನೆಯಿಂದ ರೈತರಾದ ಕೃಷ್ಣೇಗೌಡ ಮತ್ತು ಚಂದ್ರಶೇಖರ್ ಎಂಬುವರಿಗೆ ಸಾವಿರಾರು ನಷ್ಟ ಉಂಟಾಗಿದೆ. ಸಂಬಂಧಿಸಿದ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಳಿಕ ಪಶುವೈದ್ಯರಿಂದ ಶವಪರೀಕ್ಷೆ ನಡೆಸಿ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಚಿರತೆ ಸೆರೆಗೆ ದೇವೇಗೌಡನಕೊಪ್ಪಲಿನಿಂದ ಹರಳಹಳ್ಳಿಗೆ ಹೋಗುವ ಬೋರೆಯಲ್ಲಿ ಬೋನ್ ಇಡಲಾಗಿದೆ. ಚಿರತೆ ಸೆರೆಗೆ ಈ ಗ್ರಾಮದಲ್ಲೂ ಬೋನ್ ಇರಿಸಲಾಗುವುದು ಎಂದು ಅರಣ್ಯ ಇಲಾಖೆ ಬೀಟ್ ಅಧಿಕಾರಿ ಕುಮಾರ್ ತಿಳಿಸಿದರು.ಪಶು ಇಲಾಖೆ ಉಪನಿರ್ದೇಶಕರಾಗಿ ಡಾ.ಶಿವಲಿಂಗಯ್ಯ ಅಧಿಕಾರ ಸ್ವೀಕಾರ
ಮಂಡ್ಯ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನೂತನ ಉಪ ನಿರ್ದೇಶಕರಾಗಿ ಡಾ.ಶಿವಲಿಂಗಯ್ಯ ಅವರು ಮಂಗಳವಾರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಡಾ.ಶಿವಲಿಂಗಯ್ಯ ಅವರು ಮದ್ದೂರು ತಾಲೂಕಿನ ಅವ್ವೆರಹಳ್ಳಿ ಗ್ರಾಮದವರಾಗಿದ್ದು ಇವರು ಮಂಡ್ಯ, ದೇವಾಲಪುರ, ಕೊತ್ತತ್ತಿ ಪಶು ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಮೈಸೂರು ಪಶುಪಾಲನಾ ಮತ್ತು ಪಶು ಸೇವಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರನ್ನು ಸರ್ಕಾರ ಮಂಡ್ಯ ಜಿಲ್ಲಾ ಪಶುಪಾಲನಾ ಮತ್ತು ಪಶು ಸೇವಾ ಇಲಾಖೆಯ ಉಪ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.