ಸಾರಾಂಶ
ಡಂಬಳ: ಸಮೀಪದ ಪೇಠಾ ಆಲೂರ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಹಸು ಮೃತಪಟ್ಟಿದೆ.ಭಾರಿ ಗಾಳಿ, ಮಳೆ ಗುಡುಗು, ಸಿಡಿಲು ಪ್ರಾರಂಭವಾಗಿದೆ. 3.15ರ ಸುಮಾರಿಗೆ ಮಲ್ಲಪ್ಪಗೌಡ ಸೋಮನಗೌಡ ಸುಳ್ಳದ ತಮ್ಮ ಜಮೀನಿನಲ್ಲಿ ರಕ್ಷಣೆಗೆಂದು ಹಸುವನ್ನು ಗಿಡಕ್ಕೆ ಕಟ್ಟಿದ್ದರು. ಆಗ ಸಿಡಿಲು ಬಡಿದು ಹಸು ಸ್ಥಳದಲ್ಲಿಯೆ ಮೃತಪಟ್ಟಿದೆ.
ಡಂಬಳ: ಸಮೀಪದ ಪೇಠಾ ಆಲೂರ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಹಸು ಮೃತಪಟ್ಟಿದೆ.
ಭಾರಿ ಗಾಳಿ, ಮಳೆ ಗುಡುಗು, ಸಿಡಿಲು ಪ್ರಾರಂಭವಾಗಿದೆ. 3.15ರ ಸುಮಾರಿಗೆ ಮಲ್ಲಪ್ಪಗೌಡ ಸೋಮನಗೌಡ ಸುಳ್ಳದ ತಮ್ಮ ಜಮೀನಿನಲ್ಲಿ ರಕ್ಷಣೆಗೆಂದು ಹಸುವನ್ನು ಗಿಡಕ್ಕೆ ಕಟ್ಟಿದ್ದರು. ಆಗ ಸಿಡಿಲು ಬಡಿದು ಹಸು ಸ್ಥಳದಲ್ಲಿಯೆ ಮೃತಪಟ್ಟಿದೆ.ಡಂಬಳ ಗ್ರಾಮದಲ್ಲಿ ಶೋಭಾ ಸಿದ್ದಪ್ಪ ಒಂಟಲಭೋವಿ ಮನೆಯ ವಿದ್ಯುತ್ ಮೀಟರ್ ಸಿಡಿಲು ತಾಗಿದ್ದರಿಂದ ಮನೆಯ ಒಳಗಡೆ ವೈರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿ 30 ಸಾವಿರದಷ್ಟು ಹಾನಿಯಾಗಿದೆ.
ನಾವು ಮನೆ ಕಟ್ಟಲು ಬ್ಯಾಂಕ್‌ಗಳಲ್ಲಿ ಸಾಲ ಸೂಲಮಾಡಿ ಕಟ್ಟಿದ್ದು ಮನೆಯ ಕರೆಂಟ್ ಸರಿ ಮಾಡಿಕೊಳ್ಳಲು ಸಾಲ ಮಾಡಬೇಕಾಗುತ್ತದೆ ಎಂದು ಅಲವತ್ತುಕೊಂಡರು. ಸ್ಥಳಕ್ಕೆ ಕಂದಾಯ ಅಧಿಕಾರಿ ಪ್ರಭು ಬಗಲಿ, ಪಶು ವೈದ್ಯಾಧಿಕಾರಿ, ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣ ಗುಡಸಲಮನಿ, ಯೋಗಿಶ ಕುರಹಟ್ಟಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಡಂಬಳ, ಪೇಠಾ ಆಲೂರ, ಹಿರೇವಡ್ಡಟ್ಟಿ, ಕದಾಂಪುರ, ಮೇವುಂಡಿ, ಚುರ್ಚಿಹಾಳ, ಡೋಣಿ, ಡೋಣಿತಾಂಡ, ಅತ್ತಿಕಟ್ಟಿ, ಕಪ್ಪತ್ತಗುಡ್ಡ ಭಾಗದಲ್ಲಿ ಗುಡುಸಹಿತಿ ಧಾರಾಕಾರವಾಗಿ ಮಳೆಯಾದ ಹಿನ್ನಲೆ ಹದ ಮಾಡಿರುವ ಜಮೀನುಗಳಲ್ಲಿ ಸಂಪೂರ್ಣ ನೀರು ನಿಲ್ಲುವುದರ ಮೂಲಕ ಮುಂಗಾರಿ ಬಿತ್ತನೆ ಹೆಸರು ಸೇರಿದಂತೆ ವಿವಿಧ ಬೆಳೆ ಹೊಂದಲು ತಯಾರಿ ನಡೆಸಲು ಮಳೆ ರೈತರಲ್ಲಿ ಹರುಷಕ್ಕೆ ಕಾರಣವಾಗಿದೆ.