ಹಸು ಮೇಲೆ ಚಿರತೆ ದಾಳಿ: ಜನರಲ್ಲಿ ಆತಂಕ

| Published : Aug 10 2024, 01:33 AM IST

ಸಾರಾಂಶ

Leopard attack on cow: panic among people

ಹಿರಿಯೂರು: ತಾಲೂಕಿನ ಜೆಜಿ ಹಳ್ಳಿ ಬಳಿಯ ತಿಪ್ಪೇಸ್ವಾಮಿ ಎನ್ನುವವರ ತೋಟದ ಮನೆಯಲ್ಲಿ ಗುರುವಾರ ರಾತ್ರಿ ಹಸುವಿನ ಮೇಲೆ ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ. ಕೊಟ್ಟಿಗೆಯಲ್ಲಿದ್ದ ಎರಡು ರಾಸುಗಳಲ್ಲಿ ಒಂದು ಹಗ್ಗ ಹರಿದುಕೊಂಡು ತಪ್ಪಿಸಿಕೊಂಡಿದ್ದು ಇನ್ನೊಂದು ಹಸುವಿನ ಮುಖ, ಕಿವಿಯನ್ನೆಲ್ಲಾ ಕಿತ್ತು ಗಾಯಗೊಳಿಸಲಾಗಿದೆ. ಈ ಹಿಂದೆ ಇಂತಹ ಘಟನೆ ನಡೆದಿಲ್ಲ. ಆದರೆ ಇದೇ ಮೊದಲ ಬಾರಿಗೆ ಹೀಗಾಗಿದ್ದು, ಹಸುವಿನ ಗಾಯಗಳನ್ನು ಗಮನಿಸಿದರೆ ಇದು ಚಿರತೆ ದಾಳಿಯೇ ಎಂಬುದಕ್ಕೆ ಅನುಮಾನವಿಲ್ಲ. ಹಸುವಿನ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.