ಸಾರಾಂಶ
ತೊಂಡವಾಡಿ ಗ್ರಾಮದ ರೈತ ವಿಶ್ವಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ ಚಿರತೆ ದಾಳಿ ನಡೆಸಿ ಕಚ್ಚಿದ್ದು, ಗಾಯಗೊಂಡ ಹಸು ಸಾವನ್ನಪ್ಪಿದೆ.
ಗುಂಡ್ಲುಪೇಟೆ: ತಾಲೂಕಿನ ತೊಂಡವಾಡಿ ಗ್ರಾಮದ ಬಳಿ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿ ಬಲಿಪಡೆದಿರುವ ಘಟನೆ ನಡೆದಿದೆ.
ತೊಂಡವಾಡಿ ಗ್ರಾಮದ ರೈತ ವಿಶ್ವಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ ಚಿರತೆ ದಾಳಿ ನಡೆಸಿ ಕಚ್ಚಿದ್ದು, ಗಾಯಗೊಂಡ ಹಸು ಸಾವನ್ನಪ್ಪಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವಲಯದಲ್ಲಿ ಚಿರತೆ ದಾಳಿ ನಡೆದಿದ್ದು, ಹಸುವಿನ ಮಾಲೀಕನಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.೧ಜಿಪಿಟಿ೧ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಬಳಿ ಚಿರತೆ ದಾಳಿಗೆ ಹಸು ಬಲಿಯಾಗಿದೆ.