ಚಿರತೆಯ ದಾಳಿಗೆ ಹಸು ಬಲಿ

| Published : Mar 17 2025, 12:34 AM IST

ಸಾರಾಂಶ

ಹನೂರು ತಾಲೂಕಿನ ಬೈಲೂರು ಗ್ರಾಮದ ಜಮೀನೊಂದರಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿರುವ ಘಟನೆ ವರದಿಯಾಗಿದೆ. ಬಿ ಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಬೈಲೂರು ರೈತ ಚಂದ್ರಪ್ಪ ಎಂಬುವವರ ಜಮೀನಿಗೆ ಲಗ್ಗೆ ಇಟ್ಟ ಚಿರತೆಯು ಜಮೀನಿನಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ತಿಂದು ಹಾಕಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಹನೂರು

ಭಯಬೀತರಾದ ಗ್ರಾಮಸ್ಥರು :

ಗ್ರಾಮದಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ರೈತ ಕುಟುಂಬಗಳು ಆತಂಕಕ್ಕೊಳಗಾಗಿದ್ದು, ಆದಷ್ಟು ಬೇಗ ಹಸುವನ್ನು ಬಲಿ ಪಡೆದಿರುವ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆಯವರನ್ನು ಒತ್ತಾಯಿಸಿದ್ದಾರೆ.

ಸೂಕ್ತ ಪರಿಹಾರಕ್ಕೆ ಒತ್ತಾಯ :

ಹಸುವನ್ನು ಕಳೆದುಕೊಂಡು‌ ಸಂಕಷ್ಟಕ್ಕೆ ಒಳಗಾಗಿರುವಂತಹ ರೈತ ಕುಟುಂಬದ ಹಸುವಿನ ಪಾಲಕನಿಗೆ ಸೂಕ್ತ ಪರಿಹಾರವನ್ನುಸಂಬಂಧಪಟ್ಟ ವಲಯ ಅರಣ್ಯ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ರೈತನಿಗೆ ನೆರವಾಗಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿದೆ.