ವೇಗನ್ ಸಿದ್ಧಾಂತ ಹಾಲು- ತುಪ್ಪಗಳನ್ನು ಹಿಂಸೆಯ ವ್ಯಾಪ್ತಿಯಲ್ಲಿ ಸೇರಿಸಿದೆ. ಅಹಿಂಸಾತ್ಮಕವಾದ ಆ ಸಿದ್ಧಾಂತ ಸರಿ ಇದ್ದರೂ ಗೋವಿನ ಉತ್ಪನ್ನಗಳನ್ನು ಆ ವ್ಯಾಪ್ತಿಯಲ್ಲಿ ಸೇರಿಸುವ ಅಗತ್ಯವಿಲ್ಲ.
ಗೋಕರ್ಣ:
ವೇಗನ್ ಸಿದ್ಧಾಂತ ಹಾಲು- ತುಪ್ಪಗಳನ್ನು ಹಿಂಸೆಯ ವ್ಯಾಪ್ತಿಯಲ್ಲಿ ಸೇರಿಸಿದೆ. ಅಹಿಂಸಾತ್ಮಕವಾದ ಆ ಸಿದ್ಧಾಂತ ಸರಿ ಇದ್ದರೂ ಗೋವಿನ ಉತ್ಪನ್ನಗಳನ್ನು ಆ ವ್ಯಾಪ್ತಿಯಲ್ಲಿ ಸೇರಿಸುವ ಅಗತ್ಯವಿಲ್ಲ. ಗೋವಿನಲ್ಲಿ ಉತ್ಪತ್ತಿಯಾಗುವ ಹಾಲು ಕರುವಿನ ಅಗತ್ಯಕ್ಕಿಂತ ಹೆಚ್ಚಿರುತ್ತದೆ ಮತ್ತು ಹಾಲು ಕರೆಯುವಾಗ ಕರುವಿನ ಹಾಲನ್ನು ಬಿಟ್ಟು, ಉಳಿದ ಹಾಲನ್ನು ಮಾತ್ರ ಹಿಂಡುವ ಕ್ರಮ ಭಾರತದ ಉದ್ದಗಲಕ್ಕೂ ಇದೆ. ಹಾಗಾಗಿ ಹಾಲು - ತುಪ್ಪಗಳ ಹಿಂದೆ ಪ್ರಾಣಿ ಹಿಂಸೆ ಇಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು. ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ''''''''''''''''ಅನ್ನಬ್ರಹ್ಮ ಚಾತುರ್ಮಾಸ್ಯ''''''''''''''''ದ ಶನಿವಾರದ ಧರ್ಮಸಭೆಯಲ್ಲಿ ''''''''''''''''ಅನ್ನಂ ಬ್ರಹ್ಮ'''''''''''''''' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಮನುಷ್ಯ ಜಾತಿಯ ಎಲ್ಲರಿಗೂ ಹೊಂದುವಂತಹ ಆಹಾರ ಎಂಬುದಾಗಿ ನೀರು - ತುಪ್ಪ - ಹಾಲು - ಅಕ್ಕಿಗಳನ್ನು ಆಯುರ್ವೇದ ಗುರುತಿಸಿದ್ದು, ಇವುಗಳನ್ನು ''''''''''''''''ಜಾತಿ ಸಾತ್ಮ್ಯ'''''''''''''''' ಎಂಬುದಾಗಿ ಆಯುರ್ವೇದ ಗುರುತಿಸಿದೆ. ಇದು ಎಲ್ಲಾ ಪ್ರಕೃತಿಯ ಜೀವಿಗಳಿಗೂ ಒಗ್ಗುವ ಆಹಾರಗಳಾಗಿವೆ. ಹಾಗೆಯೇ ಈ ಪದಾರ್ಥಗಳನ್ನು ಆಯುರ್ವೇದ ಸೂಚಿಸಿರುವ ಹಿನ್ನೆಲೆಯಲ್ಲಿ ಕರ್ಮ ಸಿದ್ಧಾಂತದ ಪಾತ್ರವೂ ಇದ್ದು, ಈ ನಾಲ್ಕು ಪದಾರ್ಥಗಳಲ್ಲಿ ಪ್ರಾಣಿ ಹಿಂಸೆಯ ಪಾಲು ಇಲ್ಲವೇ ಇಲ್ಲ ಎನ್ನುವಷ್ಟೇ ಇದೆ ಎಂದು ಆಹಾರದಲ್ಲಿ ಕರ್ಮ ಸಿದ್ಧಾಂತದ ವಿಚಾರವನ್ನು ಪ್ರತಿಪಾದಿಸಿದರು.ಪಾಪಗಳು ನಮ್ಮನ್ನು ಬಂದು ಸೇರುವ ಬಹುಮುಖ್ಯ ದ್ವಾರ ಆಹಾರ. ಆಹಾರದಿಂದ ದೋಷಗಳು ಬರದೇ ಇರುವಂತೆ ಜಾಗ್ರತೆ ವಹಿಸಬೇಕು ಎಂದು ಭಾರತೀಯ ಶಾಸ್ತ್ರಗಳು ಸೂಚಿಸಿವೆ. ನಾವು ನಡೆದುಕೊಂಡು ಹೋದಾಗಲೂ ಕೆಲವು ಜೀವಿಗಳು ಸಾಯಬಹುದು, ಸಸ್ಯಾಹಾರವನ್ನು ತಯಾರಿಸುವಾಗಲು ಸೂಕ್ಷ್ಮ ಜೀವಿಗಳೂ ಸೇರಿದಂತೆ ಕೆಲವು ಜೀವಿಗಳಿಗೆ ಹಿಂಸೆಯಾಗಬಹುದು. ಈ ಹಿನ್ನೆಲೆಯಲ್ಲೇ ಗೃಹಸ್ಥರಿಗೆ ''''''''''''''''ವೈಶ್ವದೇವ''''''''''''''''ವನ್ನು ಶಾಸ್ತ್ರಗಳು ಸೂಚಿಸಿದ್ದು, ಅಡುಗೆ ಮಾಡುವಾಗ ಮಾಡಿದ ಹಿಂಸೆಯ ಪ್ರಾಯಶ್ಚಿತ್ತಕ್ಕೆ ಇರುವ ಕ್ರಮ ಇದಾಗಿದೆ ಎಂದು ಹೇಳಿದರು. ಬೆಂಗಳೂರು ದಕ್ಷಿಣ ಹವ್ಯಕ ಮಂಡಲದ ಸರ್ವಧಾರಿ, ಜಯಪ್ರಕಾಶ, ಸೋಮೇಶ್ವರ, ಕೋರಮಂಗಲ ವಲಯಗಳ ಪರವಾಗಿ ಎ ರಾಮ ಭಟ್ಟ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಮೋಹನ ಭಾಸ್ಕರ ಹೆಗಡೆ, ಜಿ.ಜಿ. ಹೆಗಡೆ, ಎನ್. ಜಿ. ಭಾಗ್ವತ್, ಅನಿತಾ ಭಟ್, ಅರ್ಚನಾ ಕುರುವೇರಿ, ದಿನಪ್ರಧಾನರಾಗಿ ಬೇರ್ಕಡವು ಶ್ಯಾಮ ಭಟ್ ದಂಪತಿಗಳು ಉಪಸ್ಥಿತರಿದ್ದರು.ಕೃಷ್ಣಾಷ್ಟಮಿ ಸಂಭಮ: ಕೃಷ್ಣಾಷ್ಟಮಿಯ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳಿಗಾಗಿ ಮೊಸರು ಕಡೆಯುವುದು, ಹಗ್ಗ ಜಗ್ಗಾಟ, ಬಾಳೆಗೊನೆ ಸ್ಪರ್ಧೆ, ಗೋವುಗಳೊಂದಿಗೆ ಮಕ್ಕಳು, ಶ್ರೀಕೃಷ್ಣ ರೂಪಕ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ರಾತ್ರಿ ೧೨.೦೯ ಕ್ಕೆ ಶ್ರೀಕೃಷ್ಣ ಜನ್ಮೋತ್ಸವದ ಅಂಗವಾಗಿ ಪೂಜೆ, ಶ್ರೀಗಳಿಂದ ಬಾಲಕೃಷ್ಣನಿಗೆ ಪುಷ್ಪಾರ್ಚನೆ ನಡೆಯಿತು. ಉಪಸ್ಥಿತರಿದ್ದ ಮಾತೆಯರು, ಮಕ್ಕಳು ಹಾಗೂ ಭಕ್ತರು ಬಾಲ ಕೃಷ್ಣ ತೊಟ್ಟಿಲನ್ನು ತೂಗಿ ಸಂಭಮಿಸಿದರು.