ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ : ಪೇಜಾವರ ಶ್ರೀ ಆಮರಣಾಂತ ಉಪವಾಸದ ಎಚ್ಚರಿಕೆ

| Published : Jan 14 2025, 01:04 AM IST / Updated: Jan 14 2025, 11:54 AM IST

Pejawara Shree
ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ : ಪೇಜಾವರ ಶ್ರೀ ಆಮರಣಾಂತ ಉಪವಾಸದ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜಪೇಟೆಯಲ್ಲಿ ದೇಶವೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ನಡೆದಿರುವ ಗೋವಿನ ಕೆಚ್ಚಲು ಕತ್ತರಿಸಿದ ಭೀಭತ್ಸ ಕೃತ್ಯಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

  ಉಡುಪಿ :  ಚಾಮರಾಜಪೇಟೆಯಲ್ಲಿ ದೇಶವೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ನಡೆದಿರುವ ಗೋವಿನ ಕೆಚ್ಚಲು ಕತ್ತರಿಸಿದ ಭೀಭತ್ಸ ಕೃತ್ಯಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಬಹುಸಂಖ್ಯಾತರಾಗಿದ್ದೂ ಜಾತ್ಯತೀತ ನ್ಯಾಯದ ನೆಪದಲ್ಲಿ ನಮ್ಮ ಭಾವನೆ, ಶ್ರದ್ಧೆಗಳಿಗೆ ಕೊಡಲಿ ಏಟು ಕೊಡುವ ದುಷ್ಟ ಪ್ರವೃತ್ತಿಗಳನ್ನು ಇನ್ನೂ ಎಷ್ಟು ಸಹಿಸಬೇಕು ಎಂದು ಸರ್ಕಾರಗಳನ್ನು ಖಾರವಾಗಿಯೇ ಪ್ರಶ್ನಿಸಿರುವ ಶ್ರೀಗಳು, ಈಗ ನಡೆದಿರುವ ಕೃತ್ಯ ಅತ್ಯಂತ ಪೈಶಾಚಿಕವಾಗಿದೆ.‌ ಕೋಟ್ಯಂತರ ಹಿಂದುಗಳಿಗೆ ಇದು ಅತ್ಯಂತ ಕೆಟ್ಟ ದಿನವಾಗಿದೆ. 

ಸರ್ಕಾರ ಕುರುಡು ನೆಪ ಹೇಳದೇ ಅಪರಾಧಿಗಳಿಗೆ ಘೋರ ಶಿಕ್ಷೆಯನ್ನು ತ್ವರಿತ ಗತಿ ನ್ಯಾಯಾಲಯದ ಮೂಲಕ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.‌ಈ ಘಟನೆಯ ಬಗ್ಗೆ ಕೇಳಿ ತೀವ್ರ ದುಃಖವಾಗಿದೆ. ದೇಶದಲ್ಲಿ ಗೋವಿನ ಮೇಲಿನ ಕ್ರೌರ್ಯಕ್ಕೆ ತಾತ್ವಿಕ ಅಂತ್ಯ ಹಾಡಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಆಮರಣ ಉಪವಾಸ ಕುಳಿತಾದರೂ ಸರಿ, ಹೋರಾಟ ಮಾಡಬೇಕಾದೀತು ಎಂದು ಅಯೋಧ್ಯೆಯಿಂದ ಕಳುಹಿಸಿರುವ ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.