ಕನ್ನಡಪ್ರಭ ವಾರ್ತೆ ಕುಶಾಲನಗರ

ಗೋವುಗಳು ಮಾನವನಿಗೆ ಹುಟ್ಟಿನಿಂದ ಸಾವಿನ ತನಕ ಅಮೃತ ಸಮಾನವಾದ ಹಾಲು ಮತ್ತಿತರ ಔಷಧ ಮೂಲಗಳನ್ನು ಕರುಣಿಸುವ ಮೂಲಕ ವಿಜ್ಞಾನ ಯುಗದಲ್ಲಿ ‘ನಡೆದಾಡುವ ಆಸ್ಪತ್ರೆ’ಯಂತೆ ಕೆಲಸ ನಿರ್ವಹಿಸುತ್ತವೆ ಎಂದು ಸ್ವಾಮಿ ಸೋಮನಾಥನಂದಪುರಿ ಅಭಿಪ್ರಾಯಪಟ್ಟರು. ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದಲ್ಲಿ ಪುಣ್ಯಕೋಟಿ ಗೋಶಾಲೆಗೆ ಮಡಿಕೇರಿಯ ಉದ್ಯಮಿಗಳಾದ ಜಯಶ್ರೀ ಅಜಿತ್ ಕುಮಾರ್ ದಂಪತಿಯ ಹುಟ್ಟುಹಬ್ಬ ಅಂಗವಾಗಿ ಗೋಶಾಲೆಗೆ ಅಗತ್ಯ ಆಹಾರ ಸಾಮಗ್ರಿ ಹಸ್ತಾಂತರ ಕಾರ್ಯಕ್ರಮದಲ್ಲಿ ಗೋಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.ಗೋವುಗಳ ಪಾಲನೆ, ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಈ ಸಂದರ್ಭ ಮಾತನಾಡಿದ ಗೋಶಾಲೆ ಮಾಲೀಕ ಶ್ರೀನಿವಾಸ್, ಕಳೆದ ಕೆಲವು ವರ್ಷಗಳಿಂದ ಮಾದಾಪಟ್ಟಣದ ಗ್ರಾಮದಲ್ಲಿರುವ ತನ್ನ ನಾಲ್ಕು ಎಕರೆ ಪ್ರದೇಶದಲ್ಲಿ ಗೋಶಾಲೆ ಆರಂಭಿಸಿದ್ದು, ಇದೀಗ ಸುಮಾರು 60ಕ್ಕೂ ಅಧಿಕ ಗೋವುಗಳು ನೆಲೆಸಿವೆ. ಈ ಸಂಬಂಧ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಈ ಸಂದರ್ಭ ಉದ್ಯಮಿ ಅಜಿತ್ ಕುಮಾರ್, ಜಯಶ್ರೀ ಅಜಿತ್ ಕುಮಾರ್, ಪ್ರಮುಖರಾದ ಮಧುಸೂದನ್, ಜನಾರ್ದನ್, ರಾಜೀವ್, ಅನೀಶ್, ಕೃಷ್ಣಮೂರ್ತಿ, ಮನು ರೈ ಅರುಣ, ಪುಣ್ಯಕೋಟಿ ಗೋಶಾಲೆಯ ಟ್ರಸ್ಟ್ ಅಧ್ಯಕ್ಷರಾದ ನಸ್ಮಿತಾ ಶ್ರೀನಿವಾಸ್ ಮತ್ತಿತರರು ಇದ್ದರು.