ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪೊಲೀಸ್ ಇಲಾಖೆಯ ಸಿಪಿಐ ರೇವಣ್ಣ ಠಾಣೆಯಲ್ಲಿ ಮೈಕ್ರೋ ಫೈನಾನ್ಸ್ ನಡೆಸುವ ಉದ್ಯೋಗಿಗಳ ಸಭೆಯನ್ನು ನಡೆಸಿ ಎಚ್ಚರಿಕೆ ನೀಡಿದರು.ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯ ಉದ್ಯೋಗಿಗಳ ಸಾಲ ವಸೂಲಾತಿ ಸಂದರ್ಭದಲ್ಲಿ ಕಿರುಕುಳ ನೀಡುತ್ತಾ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆತ್ನಹತ್ಯೆಗೆ ಮುಂದಾದ ಪ್ರಕರಣಗಳು ರಾಜ್ಯದಲ್ಲಿ ವ್ಯಾಪಕವಾಗಿವೆ. ಈ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ ಉದ್ಯೋಗಿಗಳನ್ನು ಠಾಣೆಗೆ ಕರೆಸಿ ಸೌಹಾರ್ದತೆ ಸಭೆಯನ್ನು ನಡೆಸಿ ಅವರಿಗೆ ತಿಳುವಳಿಕೆ ಜೊತೆಗೆ ಎಚ್ಚರಿಕೆ ನೀಡಲಾಗಿದೆ, ಅಲ್ಲದೆ ಖುದ್ದು ಫೈನಾನ್ಸ್ ಕಂಪನಿಯ ಕಚೇರಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ ಎಂದರು.
ಜನಸಾಮಾನ್ಯರು ಕಷ್ಟದ ಪರಿಸ್ಥಿತಿಯಿಂದಲೇ ಇಂತಹ ಮೈಕ್ರೋ ಫೈನಾನ್ಸ್ ಕಂಪನಿಗಳಿದ ಸಾಲದ ರೂಪದಲ್ಲಿ ಹಣ ಪಡೆಯುತ್ತಾರೆ. ಆದರೆ ಕೆಲವು ಸಲ ಸಾಲ ಮರುಪಾವತಿ ಆಗದ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಉದ್ಯೋಗಿಗಳು ಅವರ ಮೇಲೆ ದರ್ಪ, ಅವಾಚ್ಯದಿಂದ ಬೈಯುವುದು ಹಾಗೇಯೆ ಸಾರ್ವಜನಿಕರವಾಗಿ ಅವರ ಗೌರವಕ್ಕೆ ಧಕ್ಕೆ ತರುವುದು ಕಂಡು ಬಂದರೆ ಯಾವುದೇ ಮೂಲಾಜಿಲ್ಲದೆ ಪ್ರಕರಣ ದಾಖಲಿಸಲಾಗುತ್ತದೆ. ಸಾಲ ವಸೂಲಾತಿ ಸಂದರ್ಭದಲ್ಲಿ ಉದ್ಯೋಗಿಗಳು ತಾವೇ ಕಾನೂನು ಕೈಗೆತ್ತಿಕೊಳ್ಳುವುದು ಅಕ್ಷಮ್ಯ ಅಪರಾಧ ಎಂದರು.ಪೊಲೀಸ್ ಪಿಎಸ್‌ಐ ಶಿವಾನಂದ ಪಾಟೀಲ್ ಮಾತನಾಡಿ, ಸಾಲ ನೀಡುವ ಸೌಜನ್ಯ, ಮರುಪಾವತಿಯಲ್ಲಿ ಕೂಡ ಮೈಕ್ರೋ ಫೈನಾನ್ಸ್ ಉದ್ಯೋಗಿಗಳು ಮೈಗೂಡಿಸಿಕೊಳ್ಳಬೇಕಿದೆ. ಮೀತಿಮೀರಿದ ಬಡ್ಡಿ ನಾನಾ ಪ್ರಕಾರದಲ್ಲಿ ಜನರನ್ನು ಶೋಷಣೆ ಮಾಡುತ್ತಿರುವುದು ಕಂಡುಬಂದರೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕಾಗುತ್ತದೆ. ಸಾರ್ವಜನಿಕರು ಕೂಡ ಇಂತಹ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಪಡೆಯುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಇರುವಷ್ಟು ಸಾಲ ಸೌಲಭ್ಯಗಳನ್ನು ಮಾಡಬೇಕು. ಹತ್ತಾರು ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆಯುವ ವಾಡಿಕೆಯನ್ನು ಇಟ್ಟುಕೊಳ್ಳದೆ ಜನರು ಜಾಗೃತರಾಗುವ ಮೂಲಕ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವೆದರು.
ಈ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಉದ್ಯೋಗಿಗಳು ಅಧಿಕಾರಿಗಳು ಹಾಜರಿದ್ದರು.