ದೆಹಲಿಯಲ್ಲಿ ಸಿಜೆಪಿ ಮತ್ತು ವಿದ್ಯಾರ್ಥಿ ಸಂಘಟನೆ, ಯುವಜನ ಸಂಘಟನೆಗಳು ಸೇರಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಭಾನುವಾರ ಸಿಪಿಎಂ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಎಸ್‌ಐಆರ್ ರದ್ದು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಆಗ್ರಹಿಸಿ ದೆಹಲಿಯಲ್ಲಿ ಸಿಜೆಪಿ ಮತ್ತು ವಿದ್ಯಾರ್ಥಿ ಸಂಘಟನೆ, ಯುವಜನ ಸಂಘಟನೆಗಳು ಸೇರಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಭಾನುವಾರ ಸಿಪಿಎಂ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಯಿತು.ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, ಎಸ್‌ಐಆರ್ ವಿರುದ್ಧ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ದೆಹಲಿಯಲ್ಲಿ ಸಿಜೆಪಿ ಮತ್ತು ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಸೇರಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಸರ್ಕಾರವೇ ಬೀದಿಗಿಳಿದಿದೆ. ಪರಿಣಾಮ ಪ್ರಜಾಸತ್ತ ಚಳವಳಿಗಳನ್ನು ದಮನ ಮಾಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ರೀತಿಯ ಕ್ರಮಗಳನ್ನು ಕೈಗೆತ್ತಿಕೊಂಡು ಸಂವಿಧಾನಬದ್ಧ ಮತದಾರರ ಹಕ್ಕನ್ನು ಕಸಿದು ಕೊಳ್ಳುತ್ತಿರುವ ನೀತಿ ಖಂಡನಿಯ ಎಂದು ದೂರಿದರು.
ಪುರಸಭೆ ಮಾಜಿ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ನಿನ್ನೆಯಿಂದಲೇ ವಿವಿಧ ರಾಜ್ಯಗಳಿಂದ ದೆಹಲಿಗೆ ಹೊರಡುವ ಅನೇಕ ರೈಲುಗಳನ್ನು ರದ್ದುಗೊಳಿಸಲಾಗಿದೆ. ಮೆಟ್ರೋ ಸ್ಟೇಷನ್‌ಗಳನ್ನು ಬಂದ್ ಮಾಡಲಾಗಿದೆ. ಹಲವಾರು ವಿದ್ಯಾರ್ಥಿ ಮುಖಂಡರನ್ನು ದಾರಿಯಲ್ಲಿ ಬಂಧಿಸಿದರೆ ಇನ್ನೂ ಕೆಲವರನ್ನು ಗೃಹಬಂಧನವನ್ನು ಮಾಡಲಾಗಿದೆ. ದೆಹಲಿಯಲ್ಲಿ ನಡೆಯಬೇಕಾಗಿದ್ದ ಹೋರಾಟವನ್ನು ದಮನಗೊಳಿಸಲು ದೆಹಲಿಯ ಎಲ್ಲಾ ಕಡೆ ಹೋರಾಟದಲ್ಲಿ ವಿವಿಧ ಸಂಘಟನೆಗಳ ಮತ್ತು ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸುತ್ತಾರೆಂದು ಕಚೇರಿಗಳಿಂದ ಮುಖಂಡರುಗಳು ಹೊರಗೆ ಬರದಂತೆ ತಡೆಯಲು ಪೋಲೀಸ್ ಸರ್ಪಗಾವಲು ನಿರ್ಮಿಸಲಾಗಿದೆ ಎಂದ ಅವರು, ದೇಶದಲ್ಲಿ ತುರ್ತು ಪರಿಸ್ಥಿತಿಗಿಂತ ಭಿನ್ನವಾದ ರೀತಿಯಲ್ಲಿ ಜನರ ಹೋರಾಟಗಳನ್ನು ದಮನಗೊಳಿಸಲು ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಈ ಪರಿಸ್ಥಿತಿ ಈ ದಿನ ಇನ್ನಷ್ಟು ತೀವ್ರ ಗೊಳ್ಳುವ ಸಂದರ್ಭಇದ್ದು. ದೆಹಲಿಯಲ್ಲಿ ಆಗುವ ಪರಿಸ್ಥಿತಿಗಳನ್ನ ನಾವು ಗಮನದಲ್ಲಿಟ್ಟುಕೊಂಡು ಕೂಡಲೇ ನಾವು ಎಲ್ಲಾ ಪ್ರಗತಿಪರ ಸಂಘಟನೆಗಳು ಇತರ ಜನ ಚಳವಳಿಗಳು ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಟಗಳನ್ನು ನಡೆಸುವ ಅನಿವಾರ್ಯತೆ ಇದೆ. ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಮತದಾನದ ಹಕ್ಕಿನ ಉಳಿವಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ನಗರದ ಜನತೆ ಬೆಂಬಲಿಸಬೇಕು ಎಂದರು.ಈ ಹೋರಾಟದಲ್ಲಿ ಮುಖಂಡರಾದ ಪೀರು ರಾಠೋಡ, ಚಂದ್ರು ರಾಠೋಡ, ಅನಿಲ್ ಆರ್., ರವಿತೇಜ ಮಾದಿ, ಮೆಹಬೂಬ ಹವಾಲ್ದಾರ ಚನ್ನಪ್ಪ ಗುಗಲೋತ್ತರ, ಈರಪ್ಪ ವಡ್ಡರ, ಆನಂದ ರಾಠೋಡ, ಅಂದಪ್ಪ ಕುರಿ, ರೇವಣಪ್ಪ ರಾಠೋಡ, ಮುತ್ತಣ್ಣ ರಾಠೋಡ, ತುಕಾರಾಂ ಚವ್ಹಾಣ, ಎಸ್.ಎ. ದಿಂದವಾಡ, ರಾಜು ಮಾಂಡ್ರೆ, ಅಂಬರೀಷ್ ಚವ್ಹಾಣ ಸೇರಿ ಇತರರು ಇದ್ದರು.
ಕೋಟ್ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳು, ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಬರಬಾರದೆಂದು ರೈಲು, ಬಸ್ ಸೇರಿ ಇತರ ಸೌಲಭ್ಯಗಳನ್ನು ಸ್ಥಗಿತ ಮಾಡಿ, ರಸ್ತೆ ಹಾಗೂ ಮನೆಯನ್ನು ನಾಯಕರನ್ನು ಬಂಧನಕ್ಕೆ ಒಳಪಡಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ.ಎಂ.ಎಸ್. ಹಡಪದ ಮಾಜಿ ಸದಸ್ಯ, ಪುರಸಭೆ