ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಸೋಮಣ್ಣಗೆ ಸಿಪಿವೈ ಮನವಿ

| Published : Oct 16 2025, 02:00 AM IST

ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಸೋಮಣ್ಣಗೆ ಸಿಪಿವೈ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಬೆಂಗಳೂರು-ಮೈಸೂರು ರೈಲ್ವೆ ಮಾರ್ಗಗಳಿಗೆ ಸಂಬಂಧಪಟ್ಟಂತೆ ಚನ್ನಪಟ್ಟಣ ವ್ಯಾಪ್ತಿಯಲ್ಲಿ ಬರುವಂತ ವಂದಾರಗುಪ್ಪೆ, ಮುದುಗೆರೆ ಮತ್ತು ಬೈರಾಪಟ್ಟಣ ರೈಲ್ವೆ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆಗಳನ್ನು ಮಾಡಲು ಕೇಂದ್ರ ಸರ್ಕಾರದಿಂದ ಅನುಮೋದನೆ ಕೊಡಿಸುವ ಬಗ್ಗೆ ಕೇಂದ್ರದ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಶಾಸಕ ಯೋಗೇಶ್ವರ್ ಮನವಿ ಸಲ್ಲಿಸಿದರು.

ಬೆಂಗಳೂರಿನಲ್ಲಿನ ಸಚಿವರ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿದ ಯೋಗೇಶ್ವರ್,ಮೇಲ್ಸೇತುವೆಯ ಅಗತ್ಯತೆಯ ಕುರಿತು ಸಚಿವರ ಗಮನಕ್ಕೆ ತಂದರು. ಈಗಾಗಲೇ ಬೈರಾಪಟ್ಟಣ ಮೇಲ್ಸೇತುವೆಗೆ ಬಹುತೇಕ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೆಲವು ಕಾನೂನಾತ್ಮಕ ತೊಡಕುಗಳನ್ನ ನಿವಾರಣೆ ಮಾಡಿಕೊಂಡು ಮುಂದಿನ ತಿಂಗಳು ಅದಕ್ಕೆ ಶಂಕುಸ್ಥಾಪನೆ ಮಾಡಿ ಕೆಲಸ ಪ್ರಾರಂಭಿಸುವಂತೆ ಕೋರಿದರು.

ಜತೆಗೆ ವಂದಾರುಗುಪ್ಪೆ ಮತ್ತು ಮುದುಗೆರೆ ಮೇಲ್ಸೇತುವೆ ಬಳಿ ಜನರಿಗೆ ಸಾಕಷ್ಟು ಅನಾನುಕೂಲವಾಗುತ್ತಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಚಿವರೊಡನೆ ಯೋಗೇಶ್ವರ್ ಚರ್ಚಿಸಿದರು.

ಇದಕ್ಕೆ ಸೋಮಣ್ಣನವರು ಸಕಾರಾತ್ಮಕವಾಗಿ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಮಾತಾಡಿ ಶೀಘ್ರದಲ್ಲೇ ಈ ಮೂರು ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಜತೆಗೆ ಸಂಸದ ಡಾ.ಮಂಜುನಾಥ್ ಅವರಿಗೆ ಕೂಡ ಈ ಸಂಬಂಧಪಟ್ಟಂತಹ ಪ್ರತಿಗಳನ್ನು ರವಾನೆ ಮಾಡಿ ಅವರು ಕೂಡ ರೈಲ್ವೆ ಇಲಾಖೆ ಮೇಲೆ ಒತ್ತಡ ತಂದು ಈ ಕಾಮಗಾರಿಗಳನ್ನು ಪ್ರಾರಂಭ ಮಾಡಿಸಲು ಯೋಗೇಶ್ವರ್ ಮನವಿ ಮಾಡಿದರು.ಪೊಟೋ೧೫ಸಿಪಿಟಿ೨: ಬೆಂಗಳೂರು-ಮೈಸೂರು ರೈಲ್ವೆ ಮಾರ್ಗಗಳಿಗೆ ಸಂಬಂಧಪಟ್ಟಂತೆ ಚನ್ನಪಟ್ಟಣ ವ್ಯಾಪ್ತಿಯಲ್ಲಿ ಮೇಲ್ಸೇತುವೆಗಳನ್ನು ಮಾಡಲು ಕೇಂದ್ರ ಸರ್ಕಾರದಿಂದ ಅನುಮೋದನೆ ಕೊಡಿಸುವ ಬಗ್ಗೆ ಕೇಂದ್ರದ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರನ್ನು ಶಾಸಕ ಸಿ.ಪಿ.ಯೋಗೇಶ್ವರ್ ಭೇಟಿ ಮಾಡಿ ಮನವಿ ಸಲ್ಲಿಸಿದರು.