ಕಾಡಾನೆ ಜೊತೆ ಫೋಟೋ ಹುಚ್ಚು: ದಂಡ ಕಟ್ಟಿದ ಯುವಕ!

| Published : Feb 10 2025, 01:51 AM IST

ಸಾರಾಂಶ

ಬಂಡೀಪುರದ ಹೆದ್ದಾರಿಯಲ್ಲಿ ನಿಂತ ಆನೆ ಮುಂದೆ ಪಟ್ಟಣದ ಯುವಕ ಸಾಹುಲ್‌ ಆನೆ ಜೊತೆ ಫೋಟೋಗಾಗಿ ಹುಚ್ಚಾಟ ಮೆರೆದು ಅರಣ್ಯ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟು ದಂಡ ಕಟ್ಟಿದ್ದಾನೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕಾಡಾನೆಯೊಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದು ಹೋಗಿರುವ ಮೈಸೂರು-ಊಟಿ ಹೆದ್ದಾರಿಯಲ್ಲಿ ನಿಂತಿರುವುದನ್ನು ಕಂಡ ಪಟ್ಟಣದ ಯುವಕನೊಬ್ಬ ಕಾರಿಂದೀಳಿದು ಆನೆ ಸಮೀಪ ಫೋಟೋ ತೆಗೆದುಕೊಳ್ಳಲು ಯತ್ನಿಸಿ ಸಿಕ್ಕಿ ಬಿದ್ದು ದಂಡ ಕಟ್ಟಿದ ಪ್ರಸಂಗ ಬಂಡೀಪುರದಲ್ಲಿ ನಡೆದಿದೆ.

ಬಂಡೀಪುರದ ಹೆದ್ದಾರಿಯಲ್ಲಿ ನಿಂತ ಆನೆ ಮುಂದೆ ಪಟ್ಟಣದ ಯುವಕ ಸಾಹುಲ್‌ ಆನೆ ಜೊತೆ ಫೋಟೋಗಾಗಿ ಹುಚ್ಚಾಟ ಮೆರೆದು ಅರಣ್ಯ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟು ದಂಡ ಕಟ್ಟಿದ್ದಾನೆ.

ಶನಿವಾರ ಬಂಡೀಪುರ ಹೆದ್ದಾರಿಯಲ್ಲಿ ಸ್ನೇಹಿತರೊಂದಿಗೆ ಕಾರಲ್ಲಿ ತೆರಳುತ್ತಿರುವಾಗ ರಸ್ತೆಯಲ್ಲಿ ನಿಂತಿದ್ದ ಕಾಡಾನೆ ಕಂಡು ಯುವಕ ಸಾಹುಲ್‌ ರಸ್ತೆಗಿಳಿದು ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಕಾರಲ್ಲಿದ್ದ ಸ್ನೇಹಿತ ಖುಷಿಗೆ ವಿಡೀಯೋ ಮಾಡಿ ಸ್ಟೇಟಸ್‌ ಹಾಕಿಕೊಂಡಿದ್ದರು.ಆನೆ ಜೊತೆ ಕೀಟಲೆ ಮಾಡುವ ಯುವಕನ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಯುವಕನ ಕರೆಯಿಸಿ ವಿಚಾರಣೆ ನಡೆಸಿ ಬುದ್ದಿವಾದ ಹೇಳಿ 25 ಸಾವಿರ ದಂಡ ಕಟ್ಟಿಸಿದ್ದಾರೆ.

ಕೋಟ್‌------

ಬಂಡೀಪುರ ರಸ್ತೆಯಲ್ಲಿ ಕಾರಲ್ಲಿ ಬರುವಾಗ ರಸ್ತೆಯಲ್ಲಿ ಕಾಡಾನೆ ನಿಂತಿರುವುದನ್ನು ಕಂಡ ಖುಷಿಯಲ್ಲಿ ಕಾರಿಂದ ಗೊತ್ತಿಲ್ಲದೆ ಇಳಿದೆ. ಆನೆಗೆ ತೊಂದರೆ ಕೊಡುವ ಉದ್ದೇಶವಿರಲಿಲ್ಲ. ತಪ್ಪಿನ ಅರಿವಾಗಿದೆ. ಇನ್ಮುಂದೆ ಈ ರೀತಿ ಮಾಡುವುದಿಲ್ಲ.

-ಸಾಹುಲ್‌, ಗುಂಡ್ಲುಪೇಟೆ

-----------

9ಜಿಪಿಟಿ6

ಬಂಡೀಪುರ ಅರಣ್ಯದೊಳಗೆ ಹಾದು ಹೋಗುವ ಹೆದ್ದಾರಿಯಲ್ಲಿ ನಿಂತ ಆನೆ ಜೊತೆ ಫೋಟೋಗಾಗಿ ಯುವ ಸಾಹುಲ್‌ ನಿಂತ ಕ್ಷಣ.