ಸಾರಾಂಶ
ಕನ್ನಡಪ್ರಭ ವಾರ್ತೆ, ಚನ್ನರಾಯಪಟ್ಟಣ
ಆವಿಷ್ಕಾರ ತಂತ್ರಜ್ಞಾನ ಹೆಚ್ಚಾದಂತೆ, ಮನುಷ್ಯ ಸೋಮಾರಿಯಾಗುತ್ತಿದ್ದಾನೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು.ಪಟ್ಟಣದ ಶಾಲಿನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ, ವಿಜ್ಞಾನ, ಗಣಿತ ವಸ್ತು ಪ್ರದರ್ಶನ ರಾಷ್ಟ್ರಕವಿ ಕುವೆಂಪು ಜಯಂತೋತ್ಸವ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸ್ಮರಣೆ, ದೇಶಕ್ಕೆ ಕೊಟ್ಟ ಅವರ ಸಾಧನೆಯ ಪಕ್ಷಿ ನೋಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಯಂತ್ರಗಳ ಬಳಕೆಯಿಂದ ಮನುಷ್ಯನ ಶ್ರಮ ಕಡಿಮೆಯಾಗುತ್ತಿದೆ. ಇದು ಆರೋಗ್ಯದ ಮೇಲು ಪರಿಣಾಮ ಬೀರುತ್ತಿದೆ ಎಂದರು.ಪುರಸಭೆ ಅಧ್ಯಕ್ಷ ಬನಶಂಕರಿ ರಘು ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡಿ, ಮಕ್ಕಳ ಪ್ರತಿಭೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಬೇಕು ಜ್ಞಾನದ ಸಂಗಡ ಕೌಶಲ್ಯವು ಪ್ರಮುಖವಾಗಿದೆ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್. ಎನ್. ಲೋಕೇಶ್ ಮಾತನಾಡಿ, ವಿಜ್ಞಾನ ಸಮಾಜದ ಸಂಗಡ ಸಂಪ್ರದಾಯವು ಮುಖ್ಯವಾಗುತ್ತದೆ, ಎಂಬ ಮಾತನ್ನು ನಮ್ಮ ಹಿರಿಯರು ಹೇಳುತ್ತಿದ್ದರು, ಅದರ ಪಾಲನೆ ಆಗಬೇಕು, ರಾಷ್ಟ್ರಕವಿ ಕುವೆಂಪು ನಾಡಿಗೆ ನೀಡಿದ ಸಾಹಿತ್ಯದ ಕೊಡುಗೆ ಸ್ಮರಣೆಯ ಎಂದರು.ಮನಮೋಹನ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಂಸ್ಥಾಪಕ ನಂಜುಂಡೇಗೌಡ, ಜಯಮ್ಮ, ಕಾರ್ಯದರ್ಶಿ ಪರಿಸರ ಪ್ರೇಮಿ ಸಿ.ಎನ್ ಅಶೋಕ್, ಸಿ.ಇ.ಒ ವಿವೇಕ್, ಮುಖ್ಯ ಶಿಕ್ಷಕಿ ಮಮತಾ, ದೀಪ್ತಿ ಸೋಫಿಯಾ, ವಿಜ್ಞಾನ ಶಿಕ್ಷಕ ಸೋಮೇಶರಾಧ್ಯ, ಪುರಸಭೆ ಉಪಾಧ್ಯಕ್ಷೆ ರಾಣಿಕೃ?, ಕುಂಬಾರಹಳ್ಳಿ ರಮೇಶ್, ಮಮತಾ, ಲಾನಾ ಗುಪ್ತ ಇದ್ದರು.