ಯುನಾನಿ ಚಿಕಿತ್ಸೆ ಕುರಿತು ಜನಜಾಗೃತಿ ಮೂಡಿಸಿ

| Published : Oct 20 2024, 01:57 AM IST

ಸಾರಾಂಶ

ಹಿಜಾಮ ಚಿಕಿತ್ಸಾ ಶಿಬಿರದಿಂದ ಜನರ ಆರೋಗ್ಯ ವೃದ್ಧಿಗೆ ಬೇಕಾದ ಉತ್ತಮ ಚಿಕಿತ್ಸೆ ದೊರೆಯುತ್ತದೆ, ಮಾನಸಿಕ ಒತ್ತಡ ನಿವಾರಣೆ, ದೇಹದಲ್ಲಿನ ನೋವಿನ ನಿವಾರಣೆ, ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ, ದೇಹದಲ್ಲಿನ ವಿಷಯುಕ್ತ ಮಲಿನಗಳನ್ನು ಹೊರಹಾಕುವಂತೆ ಮಾಡುತ್ತದೆ, ಒಟ್ಟಾರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ, ಯುನಾನಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಶನಿವಾರ ಹಿಜಾಮ ಚಿಕಿತ್ಸಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.

ಆಸ್ಪತ್ರೆಯ ಡಾ ಅವಿನಾಶ್ ಮಾತನಾಡಿ, ಯುನಾನಿ ಚಿಕಿತ್ಸಾ ಪದ್ದತಿ ಅತಿ ಕಡಿಮೆ ಖರ್ಚಿನಲ್ಲಿ ರೋಗಗಳನ್ನು ಗುಣಮುಖಪಡಿಸುತ್ತದೆ. ಈ ಪದ್ದತಿಯಲ್ಲಿ ಒಳ್ಳೆಯ ಔಷಧಿಗಳು ಲಭ್ಯವಿದ್ದು ಬಹುದಿನಗಳಿಂದ ಕಾಡುವ ರೋಗಗಳಿಗೆ ಈ ಚಿಕಿತ್ಸೆ ಮದ್ದಾಗಿದೆ ಎಂದರು.

ಆರೋಗ್ಯ ವೃದ್ಧಿಗೆ ಚಿಕಿತ್ಸೆ

ಹಿಜಾಮ ಚಿಕಿತ್ಸಾ ಶಿಬಿರದಿಂದ ಜನರ ಆರೋಗ್ಯ ವೃದ್ಧಿಗೆ ಬೇಕಾದ ಉತ್ತಮ ಚಿಕಿತ್ಸೆ ದೊರೆಯುತ್ತದೆ, ಮಾನಸಿಕ ಒತ್ತಡ ನಿವಾರಣೆ, ದೇಹದಲ್ಲಿನ ನೋವಿನ ನಿವಾರಣೆ, ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ, ದೇಹದಲ್ಲಿನ ವಿಷಯುಕ್ತ ಮಲಿನಗಳನ್ನು ಹೊರಹಾಕುವಂತೆ ಮಾಡುತ್ತದೆ, ಒಟ್ಟಾರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದರು.

ಇತ್ತೀಚೆಗೆ ಜನರಲ್ಲಿ ಯುನಾನಿ ಬಗ್ಗೆ ಹೆಚ್ಚಿನ ಅರಿವು ಮೂಡುತ್ತಿದೆ, ಇಲ್ಲಿ ನೀಡುವ ಚಿಕಿತ್ಸೆಯು ಪುರಾತನ ಕಾಲದಿಂದಲೂ ಬಳಕೆಯಲ್ಲಿದೆ, ಎಲ್ಲಾ ಚಿಕಿತ್ಸೆಗಳು ಮತ್ತು ಔಷಧಿಗಳು ಸಸ್ಯಾಧಾರಿತವಾಗಿದ್ದು, ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸದೆ ಇರುವುದರಿಂದ, ಅಡ್ಡ ಪರಿಣಾಮಗಳು ಇರುವುದಿಲ್ಲ ಎಂದರು.ಜನಜಾಗೃತಿ ಮೂಡಿಸಬೇಕು

ಆಯುಷ್‌ ಪದ್ದತಿ ಅಡಿಯಲ್ಲಿ ಬರುವ ಆರ್ಯರ್ವೇದ ಯುನಾನಿ, ಹೋಮಿಯೋಪತಿ, ಯೋಗ ಚಿಕಿತ್ಸೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ತಕ್ಷಣಕ್ಕೆ ಚಿಕಿತ್ಸೆಗೆ ಅವಶ್ಯಕವಿರುವಂಥಹ ರೋಗಿಗಳಿಗೆ ನೂತನ ವೈದ್ಯ ಪದ್ಧತಿ ಅನುಕೂಲಕರವಾಗಿದೆ. ಯುನಾನಿ ಚಿಕಿತ್ಸೆಯಿ ತುಂಬಾ ಹಳೇಯ ರೋಗಗಳನ್ನು ಗುಣಪಡಿಸುವ ಪದ್ದತಿಯಾಗಿದೆ. ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ ಎಂದರು.