ನಾವು ಸ್ವತಂತ್ರವಾಗಿ ನೆಮ್ಮದಿಯಿಂದ ಬದುಕಲು ತಮ್ಮ ಬದುಕನ್ನು ತ್ಯಾಗ ಮಾಡಿದ ಮಹನೀಯರ ಆದರ್ಶ ಗುಣವನ್ನು ಮಕ್ಕಳಿಗೆ ತಿಳಿಸಬೇಕಿದೆ. ಶ್ರಮದಾನದ ಮೂಲಕ ಶುಚಿತ್ವ, ಗ್ರಾಮೀಣ ಬದುಕು ಸುಂದರವಾಗಿ ಕಟ್ಟಿಕೊಳ್ಳಲು ಮಕ್ಕಳಿಗೆ ತಿಳಿಹೇಳಬೇಕಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಎಳೆಯ ಮನಸ್ಸಿನಲ್ಲಿ ಸರಳತೆ, ಸತ್ಯ, ನೇರ ನುಡಿಯ ಬದುಕು ಕಲಿಸಲು ಮುಂದಾದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್ ಹೇಳಿದರು.ಹೋಬಳಿಯ ಕೋಡಿಮಾರನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ 157ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ 122ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಸ್ವತಂತ್ರವಾಗಿ ನೆಮ್ಮದಿಯಿಂದ ಬದುಕಲು ತಮ್ಮ ಬದುಕನ್ನು ತ್ಯಾಗ ಮಾಡಿದ ಮಹನೀಯರ ಆದರ್ಶ ಗುಣವನ್ನು ಮಕ್ಕಳಿಗೆ ತಿಳಿಸಬೇಕಿದೆ. ಶ್ರಮದಾನದ ಮೂಲಕ ಶುಚಿತ್ವ, ಗ್ರಾಮೀಣ ಬದುಕು ಸುಂದರವಾಗಿ ಕಟ್ಟಿಕೊಳ್ಳಲು ಮಕ್ಕಳಿಗೆ ತಿಳಿಹೇಳಬೇಕಿದೆ ಎಂದರು.
ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಜೈಜವಾನ್, ಜೈಕಿಸಾನ್ ಎಂದ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಸರಳ ವ್ಯಕ್ತಿತ್ವ ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ನುಡಿದರು.ಸಮಾಜ ಸೇವಾಕರ್ತ ಮಾದಾಪುರ ಸುಬ್ಬಣ್ಣ ಮಾತನಾಡಿ, ಮಕ್ಕಳಿಗೆ ಮೊಬೈಲ್ ಗೀಳು ಬಿಡಿಸಿ, ಸತ್ಪ್ರಜೆಯಾಗಲು ಗಾಂಧೀಜಿಯವರ ಸತ್ಯ, ಅಹಿಂಸೆ, ತ್ಯಾಗ ಗುಣ ಕಲಿಸಿ ಎಂದು ವಿನಂತಿಸಿದರು.
ಗಾಯಕ ನಗರ ಶ್ರೀನಿವಾಸ ಉಡುಪ ಮಕ್ಕಳಿಗೆ ‘ರಘುಪತಿ ರಾಘವ ರಾಜರಾಂ’ ಮತ್ತಿತರ ಗೀತೆಗಳನ್ನು ಹೇಳಿಕೊಟ್ಟರು.ಮುಖ್ಯಶಿಕ್ಷಕಿ ಸುಮಾ ಮತ್ತಿತರರಿದ್ದರು.
ಕ್ರೀಡಾ ಬಳಗದ ಅಧ್ಯಕ್ಷರಾಗಿ ಬಿ.ಎಸ್.ಬೋರೇಗೌಡ ಆಯ್ಕೆಕನ್ನಡಪ್ರಭ ವಾರ್ತೆ ಮದ್ದೂರುಕ್ರೀಡಾ ಬಳಗದ ನೂತನ ಅಧ್ಯಕ್ಷರಾಗಿ ಬಿ.ಎಸ್.ಬೋರೇಗೌಡ ಭಾನುವಾರ ಆಯ್ಕೆಯಾದರು.
ಬಳಗದ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಬಿ.ಎಸ್.ಬೋರೇಗೌಡ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಮಹಾ ಪೋಷಕರಾಗಿ ಎಂ.ಡಿ.ಮಹಾಲಿಂಗಯ್ಯ. ಎಂ.ಎಚ್.ಸಿದ್ದೇಗೌಡ ಉಪಾಧ್ಯಕ್ಷರು, ಜಿ.ಟಿ.ಚಂದ್ರಶೇಖರ್ ಕಾರ್ಯದರ್ಶಿ, ಎಂ.ಕೆ.ನಾಗಣ್ಣ ಜಂಟಿ ಕಾರ್ಯದರ್ಶಿ, ಕೆ.ಆರ್.ದಿನೇಶ್ ಖಜಾಂಚಿ, ಸಿ.ಎಸ್.ಯೋಗೇಶ್ ಕ್ರೀಡಾ ಕಾರ್ಯದರ್ಶಿ, ನಿರ್ದೇಶಕರಾಗಿ ಎನ್.ಎಸ್. ಕೃಷ್ಣೇಗೌಡ, ಎ.ದೊರೆಸ್ವಾಮಿ, ಶಿವಾನಂದ, ವೀರಭದ್ರ, ವಿ.ಎಂ. ತಮ್ಮಣ್ಣ ಹಾಗೂ ರಾಜೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನಿಕಟ ಪೂರ್ವ ಅಧ್ಯಕ್ಷ ವಿ.ಕೆ.ಜಗದೀಶ್ ಮತ್ತು ಪದಾಧಿಕಾರಿಗಳು ಅಭಿನಂದಿಸಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಸದಸ್ಯರ ಕುಟುಂಬದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.ಈ ವೇಳೆ ಚುನಾವಣಾ ಅಧಿಕಾರಿಯಾಗಿ ವಕೀಲ ದೇವರಾಜು, ಸಹಾಯಕರಾಗಿ ಪ್ರೊ, ಎಸ್. ಬಿ. ನಾಗರಾಜು ಕಾರ್ಯನಿರ್ವಹಿಸಿದ್ದರು.