ಸಾರಾಂಶ
ಯಾದಗಿರಿ ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಸುಸ್ಥಿರ ಋತುಚಕ್ರ ನೈರ್ಮಲ್ಯ ನಿರ್ವಹಣೆ ಕುರಿತು ನಡೆದ ತರಬೇತಿದಾರರ ತರಬೇತಿ ನಡೆಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಹಂತ-2ರ ಯೋಜನೆಯಲ್ಲಿನ ಸುಸ್ಥಿರ ಋತುಚಕ್ರ ನೈರ್ಮಲ್ಯ ನಿರ್ವಹಣೆ ಕುರಿತು ನಡೆದ ತರಬೇತಿದಾರರ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಚಾಲನೆ ನೀಡಿದರು.ಈ ವೇಳೆ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಸ್ವೀಪ್ ಚಟುವಟಿಕೆ ಭಾಗವಾಗಿ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸೃಜನಾತ್ಮಕ ಕಿರುಚಿತ್ರ ಪ್ರದರ್ಶಿಸಲಾಯಿತು. ಬಳಿಕ ಜಿಪಂ ಮುಖ್ಯ ಯೋಜನಾಧಿಕಾರಿ ಗುರುನಾಥ ಎನ್. ಗೌಡಪ್ಪನೋರ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ, ಋತುಚಕ್ರ ಪ್ರಕ್ರಿಯವು ನೈಸಗಿರ್ಕವಾದದ್ದು, ಈ ಅವಧಿಯಲ್ಲಿ ಮಹಿಳೆರಿಗೆ ಈ ಅವಧಿಯಲ್ಲಿ ಖಿನ್ನತೆಗೊಳಗಾಗಂತೆ ಜಾಗೃತಿ ಮೂಡಿಸಬೇಕು. ಮುಟ್ಟಿನ ಅವಧಿಯಲ್ಲಿ ಮಹಿಳೆರಲ್ಲಿರುವ ಮೂಢನಂಬಿಕೆ ಹೋಗಲಾಡಿಸಬೇಕಿದೆ. ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಜಾಗೃತಿ ಮಟ್ಟ ಹೆಚ್ಚಿಸಬೇಕು ಹಾಗೂ ಸೂಕ್ತ ನಿರ್ವಹಣೆಯ ಕುರಿತು ಅರಿವು ಮೂಡಿಸಲು ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಮೀನಾಕ್ಷಿ ಭರತ ತರಬೇತಿ ನೀಡಿದರು.
ಸಿಎಸ್ಆರ್ ಸಹಯೋಗದಲ್ಲಿ ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್ ಮುಖಾಂತರ ಒದಗಿಸಿರುವ 1200 ಮೆನ್ಸುಟುವಲ್ ಕಪ್ ಮಾಸ್ಟರ್ ಟ್ರೈನರ್ ರವರಿಗೆ ನೀಡಲಾಯಿತು. ಸ್ವಚ್ಛವಾಹಿನಿ ಚಾಲಕಿಯರಿಗೆ ವಾಹನ ಚಾಲನಾ ಪರವಾಗಿ ಪ್ರತಿ ವಿತರಣೆ ಮಾಡಲಾಯಿತು. ಉಪ ಕಾರ್ಯದರ್ಶಿ ಲಕ್ಷ್ಮಣ ಬಿ. ಶೃಂಗೇರಿ ಸೇರಿ ಲೀಡ್ ಬ್ಯಾಂಕ್ ವ್ಯವಸ್ಥಾಕರು, ವ್ಯವಸ್ಥಾಪಕರು (ಕೆನರಾ, ಪಿಕೆಜಿಬಿ), ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.