ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಹಿರಿಯ ನಾಗರಿಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಿರಿಯ ನಾಗರಿಕರ ಆರೋಗ್ಯ ಹಾಗೂ ನೆಮ್ಮದಿ ಕಾಪಾಡಿಕೊಳ್ಳುವ ಕಾರ್ಯ ಮಾಡಬೇಕು ಎಂದರು.

ಲಕ್ಷ್ಮೇಶ್ವರ: ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಹಿರಿಯ ನಾಗರಿಕರ ಸಂಘ ದುಡಿಯುತ್ತಿದೆ. ಕಾನೂನು ಪ್ರಕಾರ 60 ದಾಟಿದವರು ಹಿರಿಯ ನಾಗರಿಕರು. ಅವರಿಗಾಗಿ ಕಾನೂನು ರಚನೆಯಾಗಿದೆ. ಹಿರಿಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಹಿರಿಯ ನಾಗರಿಕರ ಸಂಘ ಮಾಡುತ್ತಿದೆ ಎಂದು ರಾಜ್ಯ ಹಿರಿಯ ನಾಗರಿಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದರು.

ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಜಿನ್ನಿಂಗ್ ಮಿಲ್ಲಿನಲ್ಲಿ ಭಾನುವಾರ ನಡೆದ ಹಿರಿಯ ನಾಗರಿಕರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರಿಕರು ಎಲ್ಲರೂ ಸುಖದಿಂದಿಲ್ಲ. 70 ದಾಟಿದವರನ್ನು ಆರೈಕೆ ಮಾಡುವವರಿಲ್ಲ. ಈ ಸಮಸ್ಯೆ ದೇಶಾದ್ಯಂತ ಇದೆ. ಆಸ್ತಿಗಾಗಿ ತಂದೆ- ತಾಯಿಯರ ಕಡೆಗಣನೆ ನಡೆದಿದೆ. ಹಿರಿಯರನ್ನು ಗೌರವಿಸು, ಮಕ್ಕಳನ್ನು ಪ್ರೀತಿಸು, ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಎಂಬುದೇ ನಮ್ಮ ಸಂಘದ ಗುರಿ ಎಂದರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಹಿರಿಯ ನಾಗರಿಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಿರಿಯ ನಾಗರಿಕರ ಆರೋಗ್ಯ ಹಾಗೂ ನೆಮ್ಮದಿ ಕಾಪಾಡಿಕೊಳ್ಳುವ ಕಾರ್ಯ ಮಾಡಬೇಕು ಎಂದರು.

ಸಭೆಯಲ್ಲಿ ಹೂವಿನಶಿಗ್ಲಿ ಶ್ರೀಗಳು 371 ಜನ ಹಿರಿಯ ನಾಗರಿಕರ ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸಿ ಮಾತನಾಡಿದರು. ತಾಲೂಕು ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ, ಅಧ್ಯಕ್ಷತೆ ವಹಿಸಿದ್ದರು. ದೇವಣ್ಣ ಬಳಿಗಾರ, ಚಂಬಣ್ಣ ಬಾಳಿಕಾಯಿ, ಎಸ್.ಸಿ‌. ಅಳಗವಾಡಿ, ಎಸ್.ಪಿ. ಪಾಟೀಲ, ವಿ.ಜಿ. ಪಾಟೀಲ, ಸುನಂದಮ್ಮ ಬೆಂಗಳೂರ, ಡಿ.ಟಿ. ಪಾಟೀಲ, ಎಸ್.ಕೆ. ಪಾಟೀಲ ಇದ್ದರು. ಎನ್.ಎಸ್. ಮಡಿವಾಳರ ಹಾಗೂ ಪವಾಡಶೆಟ್ಟರ ಕಾರ್ಯಕ್ರಮ ನಿರ್ವಹಿಸಿದರು.