ಕನ್ನಡಪ್ರಭ ವಾರ್ತೆ ವಿಜಯಪುರ
ಎಲ್ಲ ಕವಿಮಿತ್ರರು ಕಾವ್ಯ ರಚನೆಯ ಮೂಲಭಾವ ಗಮನದಲ್ಲಿಟ್ಟುಕೊಂಡು ಕಾವ್ಯ ರಚಿಸಬೇಕು ಎಂದು ಹಿರಿಯ ಸಾಹಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಸಲಹೆ ನೀಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ಜರುಗಿದ ಲಿಂ.ಬಸಮ್ಮ ಧರೆಪ್ಪ ಐಹೊಳ್ಳಿ ದತ್ತಿ, ಲಿಂ.ಮಹಗುಂಡಪ್ಪ ಕುಬಸದ ದತ್ತಿ, ಲಿಂ. ವೆಂಕಟೇಶ ನರಹರಿ ಕಟ್ಟಿ ದತ್ತಿ, ಲಿಂ.ಬಸಪ್ಪ ಶಿವಪ್ಪ ಉತ್ನಾಳ ದತ್ತಿಯ ವಿವಿಧ ದತ್ತಿಗೋಷ್ಠಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂದು ಯುಗಾದಿಯ ಕುರಿತು ಕವಿಗೋಷ್ಠಿ ಏರ್ಪಡಿಸಿರುವುದು ನಿಜಕ್ಕೂ ನಮಗೆಲ್ಲ ಹೆಮ್ಮೆಯ ಸಂಗತಿ. ಪಂಚಾಂಗದ ಪ್ರಕಾರ ವರ್ಷದ ಮೊದಲ ಹಬ್ಬ ಈ ಯುಗಾದಿ. ಬೇವಿನ ಕಹಿ(ಕಷ್ಟ)ಬೆಲ್ಲದ ಸಿಹಿ(ಸುಖ) ಬೇವು ಬೆಲ್ಲವನ್ನು ಸೇವಿಸುವ ಮೂಲಕ ಜೀವನದ ಏರಿಳಿತಗಳನ್ನು ಸಮಭಾವದಿಂದ ಸ್ವೀಕರಿಸಿದಾಗಲೇ ನಮ್ಮ ಬದುಕಿಗೊಂದು ಅರ್ಥ ಬರುತ್ತದೆ ಎಂದು ತಿಳಿಸಿದರು.ಖ್ಯಾತ ನ್ಯಾಯವಾದಿ, ಹಿರಿಯ ಸಾಹಿತಿ ತುಳಸೀರಾಮ ಸೂರ್ಯವಂಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ವಿಜಯಪುರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ಮಹಾತ್ಮರ ಜಯಂತಿಗಳನ್ನು, ದತ್ತಿಗೋಷ್ಠಿ, ಯುಗಾದಿ, ಸಂಕ್ರಾಂತಿ, ದಸರಾ, ದೀಪಾವಳಿ, ಬಸವ ಜಯಂತಿ ಕುರಿತು ವಿಶಿಷ್ಟ ಕವಿಗೋಷ್ಠಿ ಏರ್ಪಡಿಸುವ ಮೂಲಕ ಈ ನಾಡಿನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆ ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿರುವ ಪರಿಷತ್ತಿನ ಕಾರ್ಯ ಅನನ್ಯವಾದುದು ಎಂದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಯುಗಾದಿ ಹಬ್ಬದ ಕುರಿತು ವಿಶೇಷ ಉಪನ್ಯಾಸ ನೀಡಿ, ವಸಂತ ಋತುವಿನ ಆಗಮನದೊಂದಿಗೆ ಪ್ರಾರಂಭವಾಗುವ ಸಂವತ್ಸರದ ಪ್ರಾರಂಭ, ಪುರಾಣಗಳ ಪ್ರಕಾರ ಬ್ರಹ್ಮದೇವರು ಈ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ಪವಿತ್ರ ದಿನ ಯುಗಾದಿ, ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾದ ಪವಿತ್ರ ದಿನ ಈ ಯುಗಾದಿ. ಶಾಲಿವಾಹನ ಶಕೆ ಪ್ರಾರಂಭವಾದ ಪವಿತ್ರ ದಿನ ಈ ಯುಗಾದಿ. ಹಳೇ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಪ್ರಕೃತಿಯಲ್ಲಿ ನಿಜವಾದ ಬದಲಾವಣೆಯನ್ನು ನಾವು ಯುಗಾದಿಯ ಸಂಭ್ರಮದಲ್ಲಿ ಕಾಣಬಹುದು ಎಂದರು. ಮುಖ್ಯ ಅತಿಥಿಗಳಾಗಿ ಡಾ.ವಿ.ಡಿ.ಐಹೊಳ್ಳಿ, ವೈ.ಎಚ್.ಲಂಬು, ಸಿದ್ದಣ್ಣ ಸಾತಲಗಾಂವ, ಅರ್ಜುನ ಶಿರೂರ ಮುಂತಾದವರು ಮಾತನಾಡಿದರು.
ಕವಿಗೋಷ್ಠಿಯಲ್ಲಿ ಮಮತಾ ವಮುಳಸಾವಳಗಿ, ಪರವೀನಬಾನು ಶೇಖ, ರೂಪಾ ರಜಪೂತ, ಸಂಗಮೇಶ ಕರೆಪ್ಪಗೋಳ, ಶೖಲಾ ಗೊಂಗಡಿ, ಗೀತಾ ವೈದ್ಯೆ, ಸುನಂದಾ ಕೋರಿ, ಭಾರತಿ ಗೊಂಗಡಿ, ಸುಜಾತಾ ಹ್ಯಾಳದ, ವೈಷ್ಣವಿ ಜಾಧವ, ಪೂಜಾ ವಾಲಿಕಾರ, ವೈಶಾಲಿ ಬೀಳೂರು, ಗಂಗಾಧರ ಆಸಂಗಿ, ಸಾಕ್ಷಿ ಪಡಗಾನೂರ, ಸವಿತಾ ಹಿಪ್ಪರಗಿ, ರೋಹಿಣಿ ನಾವಿ ಕವನ ವಚನ ಮಾಡಿ ಕವಿಗೋಷ್ಠಿಗೆ ಮೆರುಗು ತಂದರು. ಸುನಂದಾ ಕೋರಿ ಪ್ರಾರ್ಥಿಸಿದರು. ರಿಯಾಜ್ ಪಿಂಜಾರ ಸ್ವಾಗತಿಸಿ, ಗೌರವಿಸಿದರು. ಜಯಶ್ರೀ ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಶಿಕಲಾ ನಾಯ್ಕೋಡಿ ಗೀತಗಾಯನ ನೆರವೇರಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು. ರವಿ ಕಿತ್ತೂರ, ಮೆಹತಾಬ್ ಕಾಗವಾಡ ತತ್ವಪದಗಳನ್ನಾಡಿ ರಂಜಿಸಿದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಅಭಿಷೇಕ ಚಕ್ರವರ್ತಿ, ಮಹಾದೇವಿ ತೆಲಗಿ, ಟಿ.ಆರ್.ಹಾವಿನಾಳ, ಗಂಗಮ್ಮ ರಡ್ಡಿ, ಅಹಮ್ಮದ್ ವಾಲಿಕಾರ, ಜಗದೀಶ ಬೋಳಸೂರ, ಜಿ.ಎಸ್.ಬಳ್ಳೂರ, ಶಾಂತಾ ವಿಭೂತಿ, ಶ್ರೀಕಾಂತ ನಾಡಗೌಡ, ರೋಹಿಣಿ ನಾವಿ, ಸದಾಶಿವ ಜಾಧವ, ಫಕ್ರೂದ್ಧೀನ್ ಹಿರೇಕೊಪ್ಪ, ಸಾಗರ ಮಲ್ಲಾಡಿ ಮುಂತಾದವರು ಉಪಸ್ಥಿತರಿದ್ದರು.