ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಉಳಿಸಿಕೊಳ್ಳಲು ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯ. ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿಗಳನ್ನು ಹಾಕಿಸುವಂತೆ ಪೋಷಕರಲ್ಲಿ ಮನವಿ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವಿಶ್ವ ಪೋಲಿಯೋ ದಿನ ಅಂಗವಾಗಿ ರೋಟರಿ ಸಂಸ್ಥೆಯಿಂದ ಪಟ್ಟಣದಲ್ಲಿ ಪಲ್ಸ್ ಪೋಲಿಯೋ ಕುರಿತು ಜಾಥಾ, ಮಾನವ ಸರಪಳಿ ನಿರ್ಮಿಸಿ ಜಾಗೃತಿ ಜಾಥಾ ನಡೆಲಾಯಿತು.ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ವೃತ್ತದ ಮೂಲಕ ಆರಂಭಗೊಂಡ ಜಾಗೃತಿ ಜಾಥಾವು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ವರೆಗೆ ಮುಖ್ಯ ರಸ್ತೆ ಮೂಲಕ ರೋಟರಿ ಸಂಸ್ಥೆ ಪದಾಧಿಕಾರಿಗಳು ಹಾಗೂ ಸದಸ್ಯರು ಪೋಲಿಯೋ ಮುಕ್ತ ಸಮಾಜ ನಿರ್ಮಾಣದ ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿಗಳನ್ನು ಹಾಕಿಸುವಂತೆ ಪೋಷಕರಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ನಾಗೇಂದ್ರ ಮನವಿ ಮಾಡಿದರು. ಆಚಿವರ್ಸ್ ಅಕಾಡಮಿ ಅಧ್ಯಕ್ಷ ಡಾ.ರಾಘವೇಂದ್ರ ಮಾತನಾಡಿ, ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಉಳಿಸಿಕೊಳ್ಳಲು ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯ ಎಂದರು.ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿ ಸರಸ್ವತಿ, ಸೋಮಶೇಖರ್, ಗುರು ಪ್ರಸಾದ್, ರೋಟರಿ, ರಜತ್ ಗೋಪಿ, ಪಿ.ನಾಗೇಶ್ ನಾಯಕ್, ಹರೀಶ್, ಕಿರಣ್, ಹೃದಯ, ಪ್ರಶಾಂತ್, ಚಂದನ್ ಅರ್ಮಿತ್, ವಿಹಾನ್, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇತರರು ಇದ್ದರು.2 ನಾಟಕಗಳ ಪ್ರದರ್ಶನದ ಕರಪತ್ರ ಬಿಡುಗಡೆಮಂಡ್ಯ: ನಗರದ ಕಲಾ ಮಂದಿರದಲ್ಲಿ ಅ.27, 28 ರಂದು ಸಿಜಿಕೆ ರಂಗನಮನ-ನೀನಾಸಂ ತಿರುಗಾಟ ನಾಟಕಗಳು-2026 ಕಾರ್ಯಕ್ರಮ ಮತ್ತು 2 ನಾಟಕಗಳ ಪ್ರದರ್ಶನದ ಕರಪತ್ರಗಳನ್ನು ನಗರದ ಮಿಮ್ಸ್ ಆಸ್ಪತ್ರೆ ಆವರಣದ ಮಮತೆಯ ಮಡಿಲು ಅನ್ನದಾಸೋಹ ಕೇಂದ್ರದ ಬಳಿ ಅಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಬಿಡುಗಡೆ ಮಾಡಿದರು.ತಾಲೂಕಿನ ಮಂಗಲ ಗ್ರಾಮದ ಭೂಮಿ ಬೆಳಗು ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎರಡು ದಿನಗಳು ಸಂಜೆ ನಾಟಕ ಪ್ರದರ್ಶನ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ನಾಟಕಗಳನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಅಲಯನ್ಸ್ ಸಂಸ್ಥೆ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಉಪಾಧ್ಯಕ್ಷ ಕೆ.ಟಿ.ಹನುಮಂತು, 1ನೇ ಉಪ ರಾಜ್ಯಪಾಲ ಅಲೈ. ಕೆ ಎಸ್ ಚಂದ್ರಶೇಖರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ, ವಲಯಾಧ್ಯಕ್ಷರಾದ ಎಸ್ಎಸ್.ಎನ್.ಕೃಷ್ಣಪ್ಪ, ಎಸ್.ಎಂ.ಲೋಕೇಶ್, ಸಕ್ಕರೆ ನಾಡು ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಆರ್. ನಿತಿನ್ಗೌಡ, ಶಿವಪ್ರಸಾದ್, ಶಿವು, ಮಮತೆಯ ಮಡಿಲು ಸಂಸ್ಥಾಪಕ ಯೋಗೇಶ್ ಮಂಗಲ ಉಪಸ್ಥಿತರಿದ್ದರು.