ದೇಶದಲ್ಲಿ 75 ಸಾವಿರ ವೈದ್ಯಕೀಯ ಶಿಕ್ಷಣ ಸೀಟು ಸೃಜನೆ

| Published : Jul 28 2025, 12:30 AM IST

ದೇಶದಲ್ಲಿ 75 ಸಾವಿರ ವೈದ್ಯಕೀಯ ಶಿಕ್ಷಣ ಸೀಟು ಸೃಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಬೇಕೆಂಬ ಮಹತ್ವದ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಮುಂದಿನ ವರ್ಷದಿಂದ ಪ್ರತಿವರ್ಷ 75 ಸಾವಿರ ವೈದ್ಯಕೀಯ ಶಿಕ್ಷಣ ಸೀಟುಗಳನ್ನು ಸೃಜಿಸಲು ಮುಂದಾಗಿದೆ ಎಂದು ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವವಿ.ಸೋಮಣ್ಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಬೇಕೆಂಬ ಮಹತ್ವದ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಮುಂದಿನ ವರ್ಷದಿಂದ ಪ್ರತಿವರ್ಷ 75 ಸಾವಿರ ವೈದ್ಯಕೀಯ ಶಿಕ್ಷಣ ಸೀಟುಗಳನ್ನು ಸೃಜಿಸಲು ಮುಂದಾಗಿದೆ ಎಂದು ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವವಿ.ಸೋಮಣ್ಣ ತಿಳಿಸಿದ್ದಾರೆ.

ನಗರದ ಗ್ರಂಥಾಲಯ ಸಭಾಂಗಣದಲ್ಲಿ ವಾಕ್ ಮತ್ತು ಶ್ರವಣದೋಷ ಮಕ್ಕಳ ಪತ್ತೆ ಹಚ್ಚುವಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಗ್ರಾಮೀಣ ಭಾಗದ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಈ ವರ್ಷದ ಬಜೆಟ್‌ನಲ್ಲಿ 37,223 ಕೋಟಿ ರು.ಗಳನ್ನು ಖರ್ಚು ಮಾಡುತ್ತಿದ್ದು, ಇದರಲ್ಲಿ 9466 ಕೋಟಿ ರು.ಗಳು ಕರ್ನಾಟಕಕ್ಕೆ ದೊರಕಿದೆ ಎಂದರು.

ಇದುವರೆಗೂ ಆಳಿದ ಸರಕಾರಗಳು ಕೇವಲ ಬಾಯಿಂದ ರೈಲು ಬಿಡುತ್ತಿದ್ದರು. ನಮ್ಮ ಸರಕಾರ ಹಳ್ಳಿಗಳ ಮೇಲೆ ರೈಲು ಬಿಡಲು ಪ್ರಾರಂಭಿಸಿದೆ. ಶೀಘ್ರದಲ್ಲಿಯೇ ಬೆಂಗಳೂರು ತುಮಕೂರು ನಗರ ನಾಲ್ಕು ಪಥದ ರೈಲ್ವೆ ಲೈನ್ ನಿರ್ಮಾಣ ಪ್ರಾರಂಭವಾಗಲಿದೆ. ಅಲ್ಲದೆ ತುಮಕೂರು-ರಾಯದುರ್ಗ ಮತ್ತು ತುಮಕೂರು-ದಾವಣಗೆರೆ ರೈಲ್ವೆ ಲೈನ್‌ ಕಾರ್ಯ ನಡೆಯುತ್ತಿದೆ. ಚನ್ನೈ- ಬಾಂಬೆ ಕಾರಿಡಾರ್ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳು ಆರಂಭವಾಗಲಿದ್ದು, ಮುಂದಿನ 10 ವರ್ಷಗಳಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂದು ನುಡಿದರು.

ಜನರಿಗೆ ಶುದ್ಧ ಕುಡಿಯುವ ನೀರು ನೀಡಬೇಕೆಂಬ ಉದ್ದೇಶದಿಂದಲೇ ಭಾರತ ಸರಕಾರ ಐದು ಲಕ್ಷ ಕೋಟಿ ರು.ಗಳನ್ನು ಖರ್ಚು ಮಾಡುತ್ತಿದೆ. ಅಂಗವಿಕಲತೆ ಶಾಪ ಎಂಬ ಕಾಲವೊಂದಿತ್ತು. ಆದರೆ ಜಪಾನಂದಜೀ ಅವರಂತಹ ಸ್ವಾಮೀಜಿಗಳು ಅದನ್ನು ಹೋಗಲಾಡಿಸಿ, ಕ್ಷಯ,ಕುಷ್ಠ ರೋಗಿಗಳು, ವಾಕ್ ಮತ್ತು ಶ್ರವಣದೋಷವುಳ್ಳ,ಹಾಗೂ ಕಣ್ಣಿನ ದೋಷವುಳ್ಳ ಮಕ್ಕಳಿಗೆ ಸಾವಿರಾರು ಶಸ್ತ್ರಚಿಕಿತ್ಸೆ ನೀಡುವ ಮೂಲಕ ಅವರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಅವರ ಮತ್ತಷ್ಟು ಸೇವೆಗಳು ಮುಂದಿನ ದಿನಗಳಲ್ಲಿ ಅಗತ್ಯವಿರುವ ಜನರಿಗೆ ತಲುಪುವಂತಾಗಲಿ ಎಂದರು.

ಇನ್ಪೋಸಿಸ್ ಫೌಂಡೇಷನ್‌ನ ಉಪಾಧ್ಯಕ್ಷೆ ಮನಿಷಾ ಸಾಬು ಮಾತನಾಡಿ, ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಎಲ್ಲಾ ಪ್ರಾಜೆಕ್ಟ್ ಗಳಿಗೂ ನಮ್ಮ ಸಹಯೋಗವಿದೆ. ಅಷ್ಟು ನಂಬಿಕೆಯನ್ನು ಸ್ವಾಮೀಜಿಗಳು ಉಳಿಸಿಕೊಂಡಿದ್ದಾರೆ. ನಾನು ನೀಡಿದ ಅನುದಾನಕ್ಕೆ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ನಮಗಿದೆ.ಹಾಗಾಗಿ ಶ್ರೀಜಪಾನಂದಜೀ ಅವರೊಂದಿಗೆ ಕೆಲಸ ಮಾಡುವುದು ಸಂತಸ ತಂದಿದೆ ಎಂದರು.ಬೆಂಗಳೂರು ಸ್ಪೀಚ್ ಆ್ಯಂಡ್‌ ಹಿಯರಿಂಗ್‌ ಟ್ರಸ್ಟ್ ಮುಖ್ಯಸ್ಥ ವಿ.ವಿ.ಕೃಷ್ಣಾ ರೆಡ್ಡಿ ಮಾತನಾಡಿ, ನಾವು ಇದುವರೆಗೂ ಸುಮಾರು 40 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಿ,ಅವರಲ್ಲಿ ಅಗತ್ಯವಿರುವ ಒಂದು ಸಾವಿರ ಜನರಿಗೆ ಶ್ರವಣ ಉಪಕರಣಗಳನ್ನು ನೀಡಿದೆ ಎಂದರು.ಸಾನಿಧ್ಯ ವಹಿಸಿದ್ದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀಜಪಾನಂದ ಜೀ ಮಾತನಾಡಿ, ಶ್ರೀಶಾರದದೇವಿ ಕಣ್ಣಿನ ಆಸ್ಪತ್ರೆಯ ಮೂಲಕ ಐವತ್ತು ಸಾವಿರಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿರುವುದು ಗ್ರಾಮೀಣ ಭಾಗದಲ್ಲಿ ಒಂದು ಮೈಲಿಗಲ್ಲು, ಅಲ್ಲದೆ ಪಾವಗಡ ಮತ್ತು ಸುತ್ತಮುತ್ತಲಿನ ಮಧುಗಿರಿ, ಕೊರಟಗೆರೆ, ಗುಬ್ಬಿ ತಾಲೂಕುಗಳಲ್ಲಿ ಕಿವಿ.ಮೂಗು ಮತ್ತು ಗಂಟಲಿಗೆ ಸಂಬಂಧಿಸಿದಂತೆ ತಪಾಸಣೆ ಮತ್ತು ಚಿಕಿತ್ಸೆ ಸಹ ನಡೆಯುತ್ತಿದೆ ಎಂದರು.

ವೇದಿಕೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿದರು. ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಪತ್ರಕರ್ತಎಸ್.ನಾಗಣ್ಣ, ಡಾ.ಎಸ್.ಆರ್.ಚಂದ್ರಶೇಖರ್‌ ಇನ್ಸಿಟ್ಯೂಟ್‌ ಆ ಫ್ ಸ್ವೀಚ್ ಅಂಡ್ ಹಿಯರಿಂಗ್‌ನ ಕಾರ್ಯದರ್ಶಿ ಸುರೇಶಬಾಬು,ಖಜಾಂಚಿ ವಿ.ಎಸ್.ಶಾಂತಸದನ,ಸಿದ್ದಾರ್ಥ್ ಮೆಡಿಕಲ್‌ಕಾಲೇಜಿನ ಡಾ.ಜಿ.ಎನ್.ಪ್ರಭಾಕರ್,ಇಎನ್‌ಟಿತಜ್ಞ ಡಾ.ಎಂ.ದೃವಕುಮಾರ್,ಇನ್ಪೋಸಿಸ್‌ನ ವಿದ್ಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.