ಕಂದಾಯ ಗ್ರಾಮಗಳ ರಚನೆಗೆ ಪ್ರಮುಖ ಆದ್ಯತೆ : ಸಚಿವ ಕೃಷ್ಣ ಬೈರೇಗೌಡ

| N/A | Published : May 15 2025, 01:48 AM IST / Updated: May 15 2025, 12:38 PM IST

ಕಂದಾಯ ಗ್ರಾಮಗಳ ರಚನೆಗೆ ಪ್ರಮುಖ ಆದ್ಯತೆ : ಸಚಿವ ಕೃಷ್ಣ ಬೈರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ದಾಖಲೆ ಇಲ್ಲದೇ ಜನವಸತಿ ಪ್ರದೇಶದಲ್ಲಿ ವಾಸಿಸುವವರಿಗೆ ಗ್ರಾಮಗಳನ್ನು ರಚಿಸುವ ಮೂಲಕ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕೆಲಸವನ್ನು ತ್ವರಿಗತಗಿತಯಲ್ಲಿ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದ್ದಾರೆ.

 ದಾವಣಗೆರೆ :  ದಾಖಲೆ ಇಲ್ಲದೇ ಜನವಸತಿ ಪ್ರದೇಶದಲ್ಲಿ ವಾಸಿಸುವವರಿಗೆ ಗ್ರಾಮಗಳನ್ನು ರಚಿಸುವ ಮೂಲಕ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕೆಲಸವನ್ನು ತ್ವರಿಗತಗಿತಯಲ್ಲಿ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಕಂದಾಯ ಹಾಗೂ ಭೂ ಮಾಪನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಭೂ ಕಂದಾಯ ಕಾಯ್ದೆಯನ್ವಯ ಜನವಸತಿ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ವಾರಸುದಾರಿಕೆ ಇಲ್ಲದವರಿಗೆ ಗ್ರಾಮಗಳ ವಿಸ್ತರಣೆ, ಕಂದಾಯ ಗ್ರಾಮ, ಬಡಾವಣೆಯಾಗಿ ವಿಸ್ತರಿಸುವ ಮೂಲಕ ಮೂಲ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ ಎಂದರು.

ಕಂದಾಯ ಗ್ರಾಮಗಳ ರಚನೆ, ಹಕ್ಕುಪತ್ರ ವಿತರಣೆಯಲ್ಲಿ ವಿಳಂಬ ಸಲ್ಲದು. ಜೂನ್‌ನಿಂದಲೇ ಹಳೆ ಕಂದಾಯ ದಾಖಲೆಗಳು ಅಂಗೈನಲ್ಲಿ ಸಿಗಲಿವೆ. ದಾವಣಗೆರೆ ಜಿಲ್ಲೆಯಲ್ಲಿ 1836 ಹಕ್ಕುಪತ್ರಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ 1784 ಇ-ಸ್ವತತಿಗೆ ಹೋಗಿವೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈ ದಾಖಲೆ ನೋಂದಾಯಿಸಲು 1349 ಅರ್ಜಿಗಳನ್ನು ಕಳಿಸಲಾಗಿದೆ ಎಂದರು.

ಭೂ ದಾಖಲೆಗಳ ದುರಸ್ತಿಗೆ ಸೂಚನೆ:

ದರಖಾಸ್ತು ಪೋಡಿ ಅಭಿಯಾನ ಚಾಲ್ತಿಯಲ್ಲಿದ್ದು ಅನುಬಂಧ-1 ರಲ್ಲಿ 331 ಪ್ರಕರಣಗಳಲ್ಲಿ 2002 ಬ್ಲಾಕ್‍ಗಳನ್ನು ದುರಸ್ಥಿಗೆ ಆಯ್ಕೆ ಮಾಡಿಕೊಂಡು, ಅದರಲ್ಲಿ 231 ಪ್ರಕರಣಗಳಲ್ಲಿ 1229 ಬ್ಲಾಕ್ ಅಳತೆ ಮಾಡಲಾಗಿದೆ. ಆದರೆ 62 ಪ್ರಕರಣಗಳಲ್ಲಿ 214 ಬ್ಲಾಕ್‍ ಮೇಲು ಸಹಿಯಾಗಿವೆ. ಇದರಲ್ಲಿ 40 ಪ್ರಕರಣಗಳಲ್ಲಿ 137 ಬ್ಲಾಕ್‍ಗಳಲ್ಲಿ ಮಾತ್ರ ಪಹಣಿ ಇಂಡೀಕರಣವಾಗಿದೆ. ಇನ್ನೂ 77 ಬ್ಲಾಕ್‍ ಇಂಡೀಕರಣಕ್ಕೆ ಬಾಕಿ ಇವೆ. 56 ಪ್ರಕರಣದಲ್ಲಿ 321 ಬ್ಲಾಕ್‍ ದುರಸ್ಥಿಗೆ ಬಾಕಿ ಇವೆ. 100 ಪ್ರಕರಣಗಳಲ್ಲಿ 773 ಬ್ಲಾಕ್‍ ಅಳತೆಗೆ ಬಾಕಿ ಇವೆ. ಭೂ ದಾಖಲೆಳು ಮತ್ತು ತಹಸೀಲ್ದಾರರು ಸರಿಯಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಸಾರ್ವಜನಿಕರು ದಾಖಲೆಗಳನ್ನು ಪಡೆಯಲು www.recordroom.karnataka.gov.in ವೆಬ್‍ಸೈಟ್ ಮೂಲಕ ಸಕಾಲ ಮಾದರಿಯಲ್ಲೇ ಅರ್ಜಿ ಸಲ್ಲಿಸಿ ದಾಖಲೆ ಪಡೆಯಬಹುದು. ಮುಂದಿನ ದಿನಗಳಲ್ಲಿ ಹಳೇ ದಾಖಲೆಗಳು ಅಗತ್ಯವಿರುವ ಬ್ಯಾಂಕ್, ನ್ಯಾಯಾಲಯಗಳಿಗೂ ಆನ್‍ಲೈನ್‍ನಲ್ಲಿಯೇ ಪರಿಶೀಲನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಪೌತಿ ಖಾತೆ ಆಂದೋಲನಕ್ಕೆ ಸೂಚನೆ

ಜಿಲ್ಲೆಯಲ್ಲಿ 4 ಲಕ್ಷಕ್ಕೂ ಅಧಿಕ ಏಕ ವ್ಯಕ್ತಿ ಖಾತೆಯ ಪಹಣಿಗಳಿವೆ. ಅನೇಕ ಬಹು ಮಾಲೀಕತ್ವದ ಪಹಣಿಗಳಿವೆ. 96 ಸಾವಿರಕ್ಕೂ ಹೆಚ್ಚು ಆಸ್ತಿಗಳು ಮೃತರ ಹೆಸರಿನಲ್ಲಿವೆ. ಪೌತಿ ಖಾತೆ ಆಂದೋಲನ ಆಯೋಜಿಸುವ ಮೂಲಕ ಗ್ರಾಮದಲ್ಲಿ ಟಾಂ ಟಾಂ ಹಾಕಿಸಿ ಗ್ರಾಮಸಭೆ ಮಾಡಿ ಜನರೆದುರು ಮಹಜರಿನೊಂದಿಗೆ ಪೌತಿ ಖಾತೆ ಮಾಡಲು ತಿಳಿಸಿ ಮುಂದಿನ ದಿನಗಳಲ್ಲಿ ಇದನ್ನು ಆಂದೋಲದ ರೀತಿ ಮಾಡಿ ಎಂದು ಹೇಳಿದರು.

ಕಂದಾಯ ಇಲಾಖೆ ಇ-ಕಚೇರಿಯಾಗಿ ಪರಿವರ್ತನೆಯಾಗಿದ್ದು ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲಾಯಿತು.

ಸಚಿವ ಎಸ್ಸೆಸ್ಸೆಂ, ದೂಡಾ ಅಧ್ಯಕ್ಷ ದಿನೇಶ.ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.