ಚಿಕ್ಕಮಗಳೂರು ಹೃದಯದಲ್ಲಿ ಭಕ್ತಿ ತುಂಬಿಕೊಂಡಾಗ ಇಂತಹ ಸೃಜನಶೀಲ ಕಾರ್ಯ ಸಾಧ್ಯವಾಗುತ್ತವೆ. ಶೃಂಗೇರಿ ಶಾರದೆ ಪರಮಭಕ್ತರಾದ ನಾಗರಾಜರಾವ್ ಕಲ್ಕಟ್ಟೆ ಶಾರದಾ ಭಕ್ತಿಗೀತೆಗಳನ್ನು ರಚಿಸಲು ಸಾಧ್ಯವಾಗಿರುವುದು ಅವರಲ್ಲಿನ ಭಕ್ತಿಯ ಪ್ರತೀಕ ಎಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಜೋಷಿ ಹೇಳಿದರು.
ಶೃಂಗಗಿರಿ ನವರಾತ್ರಿ ಗೀತ ಗುಚ್ಛ ಲೋಕಾರ್ಪಣೆಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಹೃದಯದಲ್ಲಿ ಭಕ್ತಿ ತುಂಬಿಕೊಂಡಾಗ ಇಂತಹ ಸೃಜನಶೀಲ ಕಾರ್ಯ ಸಾಧ್ಯವಾಗುತ್ತವೆ. ಶೃಂಗೇರಿ ಶಾರದೆ ಪರಮಭಕ್ತರಾದ ನಾಗರಾಜರಾವ್ ಕಲ್ಕಟ್ಟೆ ಶಾರದಾ ಭಕ್ತಿಗೀತೆಗಳನ್ನು ರಚಿಸಲು ಸಾಧ್ಯವಾಗಿರುವುದು ಅವರಲ್ಲಿನ ಭಕ್ತಿಯ ಪ್ರತೀಕ ಎಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಜೋಷಿ ಹೇಳಿದರು.ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಬೊಂಬೆ ಉತ್ಸವದಲ್ಲಿ ನಾಗರಾಜರಾವ್ ಕಲ್ಕಟ್ಟೆ ರಚಿಸಿರುವ 9 ಹಾಡುಗಳ ‘ಶೃಂಗಗಿರಿ ನವರಾತ್ರಿ’ ಗೀತ ಗುಚ್ಛ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಗೀತ ಗುಚ್ಛದ ಪ್ರತಿಯೊಂದು ಹಾಡು ಶೃಂಗೇರಿಯ ನವರಾತ್ರಿ ಉತ್ಸವದ ವೈಭವವನ್ನು ಮನಸ್ಸಿಗೆ ನಾಟುವಂತೆ ಕಟ್ಟಿಕೊಡುತ್ತದೆ. ಧಾರ್ಮಿಕ ಭಾವನೆ ಹಾಗೂ ಭಕ್ತಿ ಮೂಡಿಸುವ ಈ ಗೀತೆಗಳು ಶೃಂಗೇರಿ ನವರಾತ್ರಿ ಮಹತ್ವವನ್ನು ಪರಿಚಯಿಸುತ್ತವೆ ಎಂದರು.ಲಯನ್ಸ್ ಸಂಸ್ಥೆ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ನಾಗರಾಜರಾವ್ ಅವರ ನಿರಂತರ ಗೀತರಚನೆ ಮೆಚ್ಚುಗೆಗೆ ಪಾತ್ರವಾಗಿದೆ. ಗೀತ ಗುಚ್ಛದ ನಿರ್ಮಾಣದ ಜವಾಬ್ದಾರಿ ಹೊತ್ತ ರೇಖಾ ನಾಗರಾಜರಾವ್ ಹಾಗೂ ತಾಂತ್ರಿಕ ನೆರವು ನೀಡಿರುವ ವೈಷ್ಣವಿ ಎನ್. ರಾವ್, ನವನೀತ್ ರೆಡ್ಡಿ ಮತ್ತು ಚಿನ್ಮಯಿ ರಮೇಶ್ ಅಭಿನಂದನಾರ್ಹರು ಎಂದು ಹೇಳಿದರು.ಗೀತರಚನೆಕಾರ ನಾಗರಾಜರಾವ್ ಕಲ್ಕಟ್ಟೆ ಮಾತನಾಡಿ ಶೃಂಗೇರಿ ನವರಾತ್ರಿಯಲ್ಲಿ ಧಾರ್ಮಿಕ ಆಚರಣೆಗಳ ಜತೆಗೆ ಮನರಂಜನೆ, ಸಾಂಸ್ಕೃತಿಕ ಚಟುವಟಿಕೆ, ಬೀದಿ ಉತ್ಸವ, ತೇರು, ಭೋಜನ ಮತ್ತು ದರ್ಬಾರ್ ಸೇರಿದಂತೆ ಹಲವು ವಿಶೇಷತೆಗಳಿವೆ. ಇವೆಲ್ಲದರಾಚೆ ಕಾಣುವ ಅಧ್ಯಾತ್ಮದ ಪ್ರಖರತೆಯೇ ಉತ್ಸವದ ಯಶಸ್ಸಿಗೆ ಪ್ರಮುಖ ಕಾರಣ. ಬಾಲ್ಯ ದಿಂದಲೂ ಈ ಆಚರಣೆಗಳು ತಮ್ಮಲ್ಲಿ ಅಚ್ಚರಿ ಮತ್ತು ಭಕ್ತಿಭಾವ ಮೂಡಿಸಿವೆ ಎಂದರು.ಶೃಂಗೇರಿ ಜಗದ್ಗುರು ನವರಾತ್ರಿ ಉತ್ಸವಕ್ಕೆ ವಿಶೇಷ ಮಹತ್ವ ನೀಡುತ್ತಿರುವುದು ಈ ನೆಲದ ಅಧ್ಯಾತ್ಮ ಸಂಸ್ಕೃತಿ ಪ್ರತೀಕ. ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಗುರುಭಕ್ತಿಯ ಹಿರಿಮೆ ಸಾರುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಲಯನ್ ವಲಯಾಧ್ಯಕ್ಷ ಜಿ. ರಮೇಶ್, ಪ್ರಾಂತೀಯ ರಾಯಭಾರಿ ವೆಂಕಟೇಶ್, ಸಾಹಿತಿ ರಮೇಶ್ ಬೊಂಗಾಳೆ, ಲಯನ್ ಡಾ. ಮಂಜುಳಾ ನಾರಾಯಣಸ್ವಾಮಿ, ಗಾಯತ್ರಿ ಭಜನಾ ಮಂಡಳಿ ಸೀತಾಲಕ್ಷ್ಮಿ, ಬನಶಂಕರಿ ಜೋಷಿ, ಜಯಶ್ರೀ ಜೋಷಿ, ಹುಬ್ಬಳ್ಳಿಯ ಸಂತೋಷ್, ಬ್ರಾಹ್ಮಣ ಮಹಾಸಭೆ ಶಾಂತಕುಮಾರಿ, ವಿನೀತ್ ಕುಮಾರ್, ಉಪಾಧ್ಯಕ್ಷ ಗೋಪಿನಾಥ್, ಕೊಣನೂರು ಸತೀಶ್, ಉಪನ್ಯಾಸಕ ಕಿರಣ್ ಜಿ.ಪಿ., ನಾಗಶ್ರೀ ಕಿರಣ್ ಸೇರಿದಂತೆ ಬ್ರಾಹ್ಮಣ ಮಹಾಸಭೆ ಮತ್ತು ಗಾಯತ್ರಿ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.