ಬೆಂಗಳೂರಿನ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ ಹಾಗೂ ಸಂಕೇಶ್ವರದ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಹುಕ್ಕೇರಿ ತಾಲೂಕಿನ ನಿಡಸೋಸಿ ಗೇಟ್ ಅಮ್ಮಣಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾರ್ವಜನಿಕರ ಅನುಕೂಲವಾಗಲೆಂದು ಕ್ರೆಡಿಟ್ ಅಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ 3 ಸಿಟ್ಟರ್ 10 ಚೇರ್, 10 ಬೆಡ್, ತ್ರೀ ವಿಲ್ಲರ್ 1 ಚೇರ್ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಂಗಳೂರಿನ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ ಹಾಗೂ ಸಂಕೇಶ್ವರದ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಹುಕ್ಕೇರಿ ತಾಲೂಕಿನ ನಿಡಸೋಸಿ ಗೇಟ್ ಅಮ್ಮಣಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾರ್ವಜನಿಕರ ಅನುಕೂಲವಾಗಲೆಂದು ಕ್ರೆಡಿಟ್ ಅಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ 3 ಸಿಟ್ಟರ್ 10 ಚೇರ್, 10 ಬೆಡ್, ತ್ರೀ ವಿಲ್ಲರ್ 1 ಚೇರ್ ವಿತರಿಸಲಾಯಿತು.ಬೆಳಗಾವಿ ವಿಭಾಗದ ಮುಖ್ಯಸ್ಥ ಮಾದೇಗೌಡ.ಸಿ ಮಾತನಾಡಿ, ಈ ಸಮುದಾಯ ಕೇಂದ್ರಕ್ಕೆ ದಿನಕ್ಕೆ 500 ರಿಂದ 600 ಜನರು ಆರೋಗ್ಯ ತಪಾಸಣೆಗೆ ಬರುತ್ತಿದ್ದು, ಜನರ ಆರೋಗ್ಯ ಹಿತದೃಷ್ಟಿಯಿಂದ ನಮ್ಮ ಸಂಸ್ಥೆ ಈ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಈ ವೇಳೆ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಸೀಮಾ ಗುಂಜಲ್, ಡಾ.ಓಂಕಾರ್ ಅವರಿಗೆ ಪೀಠೋಪಕರಣಗಳನ್ನು ವಿತರಿಸಲಾಯಿತು. ಚಿಕ್ಕೋಡಿ ವಲಯ ವ್ಯವಸ್ಥಾಪಕ ಮಂಜಪ್ಪ ನಡುವಿನಮನಿ, ಸಂಕೇಶ್ವರ ಶಾಖಾ ವ್ಯವಸ್ಥಾಪಕ ಬಸನಗೌಡ ಪಾಟೀಲ, ರವಿ ತಿಗಡಿ, ಆಸ್ಪತ್ರೆ ಸಿಬ್ಬಂದಿ ವರ್ಗ ಸೇರಿದಂತೆ ಇತರರಿದ್ದರು. ಸಂಕೇಶ್ವರ ಸಮುದಾಯ ಕೇಂದ್ರಕ್ಕೆ ದಿನಕ್ಕೆ 500 ರಿಂದ 600 ಜನರು ಆರೋಗ್ಯ ತಪಾಸಣೆಗೆ ಬರುತ್ತಿದ್ದು, ಜನರ ಆರೋಗ್ಯ ಹಿತದೃಷ್ಟಿಯಿಂದ ನಮ್ಮ ಸಂಸ್ಥೆ ಈ ಕೆಲಸ ಮಾಡುತ್ತಿದೆ.
-ಮಾದೇಗೌಡ.ಸಿ, ಬೆಳಗಾವಿ ವಿಭಾಗದ ಮುಖ್ಯಸ್ಥರು.