ಸಾರಾಂಶ
ರಾಹುಲು ಗಾಂಧಿ ಗ್ರಾಮಪೋನ್ ಇದ್ದಂತೆ, ಅವರು ವಿರೋಧ ಪಕ್ಷದ ನಾಯಕನಾಗಲು ಕೂಡ ಯೋಗ್ಯರಲ್ಲ.
ಹೊಸಪೇಟೆ: ದೇಶದಲ್ಲಿ ರಾಜಕೀಯ ಭ್ರಷ್ಟಾಚಾರ ಹುಟ್ಟು ಹಾಕಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಈಶಾನ್ಯ ಪದವಿಧರರ ಕ್ಷೇತ್ರದ ಚುನಾವಣೆಯ ಮತದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ರಕ್ತದ ಕಣ ಕಣದಲ್ಲಿ ಭ್ರಷ್ಟಚಾರ ಅಡಗಿದೆ. ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಕಾಲದಿಂದಲೂ ಒಂದಲ್ಲ ಒಂದು ಹಗರಣದಲ್ಲಿ ತೊಡಗಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಧಿಕಾರ ಅವಧಿಯಲ್ಲಿ ಸುಮಾರು ₹೧೨ ಲಕ್ಷ ಕೋಟಿ ಭ್ರಷ್ಟಚಾರ ನಡೆದಿದೆ ಎಂದು ದೂರಿದರು.
ರಾಹುಲು ಗಾಂಧಿ ಗ್ರಾಮಪೋನ್ ಇದ್ದಂತೆ, ಅವರು ವಿರೋಧ ಪಕ್ಷದ ನಾಯಕನಾಗಲು ಕೂಡ ಯೋಗ್ಯರಲ್ಲ. ದೇಶದಲ್ಲಿ ೫೦ ಸ್ಥಾನಗಳನ್ನೂ ಕಾಂಗ್ರೆಸ್ ಪಡೆಯುವುದಿಲ್ಲ. ರಾಯ್‌ಬರೇಲಿಯಲ್ಲಿ ರಾಹುಲು ಗಾಂಧಿ ಸೋಲುವುದು ಗ್ಯಾರಂಟಿ ಎಂದರು.ಮಾಜಿ ಸಚಿವ ಆನಂದ ಸಿಂಗ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಎಂದಿಗೂ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ ಎಂದರು.
ವಿಪ ಮುಖ್ಯ ಸಚೇತಕ ರವಿಕುಮಾರ್, ಶಾಸಕ ಕೃಷ್ಣ ನಾಯ್ಕ, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೇಲ್, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಶಂಕರ್ ಮೇಟಿ, ಮುಖಂಡರಾದ ಓದೋ ಗಂಗಪ್ಪ, ಅಶೋಕ್ ಜೀರೆ, ಅಯ್ಯಾಳಿ ತಿಮ್ಮಪ್ಪ, ಭೂಪಾಳ್ ರಾಘವೇಂದ್ರ ಶೆಟ್ಟಿ, ಬಲಹುಣ್ಸೆ ರಾಮಣ್ಣ, ಆರತಿ, ಪೂಜಾ ಡಾ.ಹನುಮಂತ ರಾವ್ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))